(ಮಜಾರ್ ಎಂದರೆ ಮುಸ್ಲಿಂ ಗೋರಿ)
ಬರೇಲಿ (ಉತ್ತರ ಪ್ರದೇಶ) – ಬರೇಲಿಯ ಗಣೇಶಪುರ ಗ್ರಾಮದಲ್ಲಿರುವ ಮಜಾರ್ ಮೇಲೆ ಅಕ್ರಮ ಶಾಶ್ವತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಲ್ಲಿ ರಾತ್ರಿ ವೇಳೆ ಸಿಮೆಂಟ್ ಕಂಬಗಳನ್ನು ಇರಿಸಿ 20 ಅಡಿ ಎತ್ತರದ ಕಟ್ಟಡ ನಿರ್ಮಿಸಲಾಗಿದೆ. ಈ ಪ್ರಕರಣದಲ್ಲಿ ಬರೇಲಿಯ ಭಾಜಪ ಸಂಸದರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಆಡಳಿತವು ತನಿಖೆ ನಡೆಸಿ ಆರೋಪಿ ಮುಸ್ಲಿಮರಿಗೆ ನೋಟಿಸ್ ಕಳುಹಿಸಿತು.
1. ಒಂದು ವರದಿಯ ಪ್ರಕಾರ, ಗಣೇಶಪುರ ಗ್ರಾಮದ ಕಬ್ರಸ್ತಾನದಲ್ಲಿ 30 ರಿಂದ 40 ವರ್ಷ ಹಳೆಯ ಗೋರಿಗಳು ಇದ್ದವು. ಜನವರಿ 2025 ರಲ್ಲಿ, ರಾತ್ರಿ ವೇಳೆ ಅಕ್ರಮ ನಿರ್ಮಾಣ ಕಾರ್ಯ ನಡೆಸಿ ಅದರ ಮೇಲೆ ಛಾವಣಿ ಹಾಕಲಾಯಿತು. ಈ ನಿರ್ಮಾಣಕ್ಕೆ ಆಡಳಿತದಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಅಥವಾ ಅವರಿಗೆ ತಿಳಿಸಲಾಗಿಲ್ಲ. ಬರೇಲಿಯ ಭಾಜಪ ಸಂಸದ ಛತ್ರಪಾಲ ಸಿಂಗ ಗಂಗ್ವಾರ್ ಇವರು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತು. ಅವರು ಈ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
2. ಈ ವಿಷಯದ ಬಗ್ಗೆ ತನಿಖೆಗೆ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದರು. ಆಡಳಿತವು ತನಿಖೆ ನಡೆಸಿದಾಗ, ನಿರ್ಮಾಣವು ಅಕ್ರಮವಾಗಿದೆ ಎಂದು ಕಂಡುಬಂದಿದೆ. ಇದಾದ ನಂತರ, ಈ ಕಟ್ಟಡವನ್ನು ತಕ್ಷಣವೇ ಕೆಡವಲು ಆದೇಶ ನೀಡಲಾಯಿತು.
3. ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು, ಗ್ರಾಮದ 100 ಮುಸ್ಲಿಮರ ವಿರುದ್ಧ ಶಾಂತಿ ಭಂಗ ಮಾಡುವ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
An Illegal Building was built on Mazar In Bareilly (Uttar Pradesh) : Complaint filed against 100 Mu$!ims!
What was the administration doing while an illegal construction was taking place on such a large scale? It is because of this indifferent attitude that fanatical Mu$!ims are… pic.twitter.com/EtFKW7eGso
— Sanatan Prabhat (@SanatanPrabhat) January 28, 2025
ಸಂಪಾದಕೀಯ ನಿಲುವು
|