Indonesian President Statement : ನನ್ನ ಡಿ.ಎನ್.ಎ. ಭಾರತೀಯ ! – ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ

ಡಿಎನ್‌ಎ – ‘ಡಿಯೋಕ್ಸಿರೈಬೋ ನ್ಯೂಕ್ಲಿಯಿಕ್ ಆಮ್ಲ’ ಎಂಬುದು ವ್ಯಕ್ತಿಯ ಮೂಲವಾಗಿ ಗುರುತಿಸುವ ದೇಹದಲ್ಲಿನ ಅಂಶ

ನವ ದೆಹಲಿ – ಕೆಲವು ವಾರಗಳ ಹಿಂದೆ, ನನ್ನ ಜೆನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆಯನ್ನು ಮಾಡಿಸಿಕೊಂಡೆ. ಈ ಪರೀಕ್ಷೆಯಲ್ಲಿ ನನ್ನ ಡಿ.ಎನ್.ಎ. ಭಾರತೀಯ ಎಂದು ಬಹಿರಂಗಪಡಿಸಿತು. ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಹೇಳಿಕೆ ನೀಡಿದರು. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪ್ರಬೋವೊ ಅವರನ್ನು ಆಹ್ವಾನಿಸಲಾಗಿತ್ತು. ಅವರ ಗೌರವಾರ್ಥವಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣಕೂಟವನ್ನು ಆಯೋಜಿಸಿದ್ದರು. ಈ ಸಮಯದಲ್ಲಿ ಅಧ್ಯಕ್ಷ ಪ್ರಬೋವೊ ಮಾತನಾಡುತ್ತಿದ್ದರು.

ಇಂಡೋನೇಷಿಯಾದ ಹೆಸರುಗಳು ವಾಸ್ತವವಾಗಿ ಸಂಸ್ಕೃತ ಹೆಸರುಗಳಾಗಿವೆ

ಅಧ್ಯಕ್ಷ ಪ್ರಬೋವೊ ಮಾತು ಮುಂದುವರೆಸಿ, ನಾನು ಭಾರತೀಯ ಸಂಗೀತವನ್ನು ಕೇಳಿದಾಗ ನೃತ್ಯ ಮಾಡಲು ಪ್ರಾರಂಭಿಸುತ್ತೇನೆ ಇದು ಎಲ್ಲರಿಗೂ ತಿಳಿದಿದೆ. ಭಾರತ ಮತ್ತು ಇಂಡೋನೇಷ್ಯಾಗಳು ದೀರ್ಘ ಮತ್ತು ಪ್ರಾಚೀನ ಇತಿಹಾಸವನ್ನು ಹೊಂದಿವೆ. ನಮ್ಮ ನಡುವೆ ಸಾಂಸ್ಕೃತಿಕ ಸಂಬಂಧವಿದೆ. ಇಂದಿಗೂ ನಮ್ಮ ಭಾಷೆಯ ಬಹುಪಾಲು ಭಾಗವು ಸಂಸ್ಕೃತದಿಂದ ಬಂದಿದೆ. ಇಂಡೋನೇಷ್ಯಾದಲ್ಲಿರುವ ಅನೇಕ ಹೆಸರುಗಳು ವಾಸ್ತವವಾಗಿ ಸಂಸ್ಕೃತ ಹೆಸರುಗಳಾಗಿವೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರಭಾವವು ತುಂಬಾ ಪ್ರಬಲವಾಗಿದೆ. ಅದು ನಮ್ಮ ತಳಿಶಾಸ್ತ್ರದ ಭಾಗವೂ ಹೌದು ಎಂದು ನಾನು ಭಾವಿಸುತ್ತೇನೆ.

ಸಂಪಾದಕೀಯ ನಿಲುವು

  • ಇಂಡೋನೇಷ್ಯಾ ಮಾತ್ರವಲ್ಲ, ಅಫ್ಘಾನಿಸ್ತಾನದಿಂದ ಫಿಜಿಯವರೆಗೆ (ಪೆಸಿಫಿಕ್ ಮಹಾಸಾಗರದಲ್ಲಿ ಆಸ್ಟ್ರೇಲಿಯಾ ಬಳಿಯ ದ್ವೀಪ ದೇಶ) ಭಾರತೀಯರ ಡಿಎನ್‌ಎ ಇದೆ. ಏಕೆಂದರೆ ಹಿಂದೂಗಳು ಅಲ್ಲಿಯವರೆಗೂ ಇದ್ದರು ಮತ್ತು ಇಂದಿಗೂ ಇದ್ದಾರೆ !
  • ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಅಧ್ಯಕ್ಷರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ, ಆದರೆ ಭಾರತದ ಮುಸ್ಲಿಮರು ತಮ್ಮನ್ನು ತಾವು ಅರಬ್ಬರೆಂದು ಹೇಳುತ್ತಾರೆ !