ಪ್ರಯಾಗರಾಜ ಕುಂಭಮೇಳ 2025
ಸ್ನಾನಕ್ಕಾಗಿ ಮಾತ್ರ ಕಡಿಮೆಯಾಗದ ಭಕ್ತರ ದಟ್ಟಣೆ !
ಪ್ರಯಾಗರಾಜ, ಫೆಬ್ರುವರಿ ೧೫ (ಸುದ್ಧಿ) – ಕುಂಭಕ್ಷೇತ್ರದಿಂದ ನಾಗಾ ಸಾಧುಗಳು, ಅಖಾಡಾಗಳು, ಆಧ್ಯಾತ್ಮಿಕ ಸಂಸ್ಥೆ ಇವುಗಳ ಶೇಕಡ ೭೦ ಕ್ಕಿಂತಲೂ ಹೆಚ್ಚಿನ ಶಿಬಿರಗಳು ಪ್ರಯಾಣ ಬೆಳೆಸಿದ್ದಾರೆ. ಆದ್ದರಿಂದ ಕುಂಭಕ್ಷೇತ್ರದಲ್ಲಿ ಭಕ್ತರ ಗದ್ದಲ ಕಡಿಮೆ ಆಗಿದೆ. ದಟ್ಟಣೆ ಕಡಿಮೆ ಆಗಿದ್ದರೂ ಉತ್ತರ ಪ್ರದೇಶದಲ್ಲಿನ ಸ್ಥಳೀಯ ಭಕ್ತರು ದೊಡ್ಡ ಪ್ರಮಾಣದಲ್ಲಿ ಸ್ನಾನಕ್ಕಾಗಿ ಬರುತ್ತಿದ್ದಾರೆ. ಈ ಭಕ್ತರು ಕುಂಭ ಕ್ಷೇತ್ರದಲ್ಲಿ ಬರುವ ಬದಲು ನೇರ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾರೆ.
ಬಹಳಷ್ಟು ಭಕ್ತರು ಸ್ಥಳಿಯರು ಆಗಿದ್ದರಿಂದ ಅವರಿಗೆ ಕುಂಭಕ್ಷೇತ್ರದ ಪರಿಚಯ ಇದೆ. ಆದ್ದರಿಂದ ಗಂಗಾ ಘಾಟದ ಬದಲು ಎಲ್ಲಿ ಗಂಗಾ ಯಮುನಾ ಮತ್ತು ಸರಸ್ವತಿ ಸಂಗಮ ಇದೆ, ಆ ತ್ರಿವೇಣಿ ಘಟ್ಟಕ್ಕೆ ಈ ಭಕ್ತರು ಸ್ನಾನಕ್ಕಾಗಿ ಹೋಗುತ್ತಿದ್ದಾರೆ. ಬೆಳಗಿನ ಜಾವದಿಂದ ತಡ ರಾತ್ರಿಯವರೆಗೆ ತ್ರಿವೇಣಿ ಸಂಗಮದಲ್ಲಿ ಭಕ್ತರ ದೊಡ್ಡ ದಟ್ಟಣೆ ಕಾಣುತ್ತಿದೆ.