ಪ್ರಯಾಗರಾಜ, ಫೆಬ್ರುವರಿ ೧೫ (ವಾರ್ತೆ) – ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಕ್ಷಯವಟ ಮತ್ತು ಲೇಟೆ ಹನುಮಾನ ಈ ಪ್ರಸಿದ್ಧ ಮತ್ತು ಜಾಗೃತ ಧಾರ್ಮಿಕ ಸ್ಥಳದ ದರ್ಶನಕ್ಕಾಗಿ ಹೋಗುತ್ತಿದ್ದಾರೆ. ಇದರಿಂದ ಎರಡು ಸ್ಥಳಗಳಲ್ಲಿ ದರ್ಶನಕ್ಕಾಗಿ ಭಕ್ತರ ದೊಡ್ಡ ಸಾಲುಗಳೇ ನಿಂತಿವೆ. ದರ್ಶನಕ್ಕಾಗಿ ಭಕ್ತರಿಗೆ ೨ ರಿಂದ ೩ ಗಂಟೆಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ದಟ್ಟಣೆ ಇದ್ದರೂ ಕೂಡ ಭಕ್ತರಲ್ಲಿ ಬಹಳ ಉತ್ಸಾಹ ಇದೆ.