ಭಯೋತ್ಪಾದಕರೊಂದಿಗೆ ಒಡನಾಟ; ಪೊಲೀಸ್ ಪೇದೆ ಸಹಿತ 3 ಸರಕಾರಿ ನೌಕರರ ಅಮಾನತ್ತು !

ಉಪರಾಜ್ಯಪಾಲರಿಂದ ಆದೇಶ

ಶ್ರೀನಗರ (ಜಮ್ಮು-ಕಾಶ್ಮೀರ) – ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಜಮ್ಮ ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಪೊಲೀಸ್ ಪೇದೆ ಸೇರಿದಂತೆ 3 ಸರಕಾರಿ ನೌಕರರನ್ನು ವಜಾಗೊಳಿಸಿದ್ದಾರೆ. ಆಗಸ್ಟ್‌ 2019 ರಲ್ಲಿ ಕಲಂ 370 ಅನ್ನು ತೆಗೆದುಹಾಕಿದ ನಂತರ, ಈ ರೀತಿಯಲ್ಲಿ ಕಾನೂನು ಕ್ರಮಕ್ಕೆ ಒಳಗಾದ ಸರಕಾರಿ ನೌಕರರ ಸಂಖ್ಯೆ ಈಗ 69 ಕ್ಕೆ ಏರಿದೆ. ಅಕ್ಟೋಬರ್ 2024 ರಲ್ಲಿ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾದ ನಂತರ ಈ ರೀತಿಯ ಇದು ಎರಡನೇ ಕ್ರಮವಾಗಿದೆ. ನವೆಂಬರ್ 30 ರಂದು, ಸಿನ್ಹಾ ಅವರು ದೇಶ ವಿರೋಧಿ ಚಟುವಟಿಕೆಗಳು ಮತ್ತು ಭಯೋತ್ಪಾದಕರೊಂದಿಗಿನ ಸಂಪರ್ಕದ ಆರೋಪದ ಮೇಲೆ ಇಬ್ಬರು ಸರಕಾರಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದ್ದರು.

ಈಗ ಅಮಾನತ್ತುಗೊಂಡ ಪೋಲಿಸ್ ಪೇದೆ ಫಿರ್ದೌಸ್ ಅಹ್ಮದ್ ಭಟ್, ಸರಕಾರಿ ಶಿಕ್ಷಕ ಮೊಹಮ್ಮದ್ ಅಶ್ರಫ್ ಭಟ್ ಮತ್ತು ಜಮ್ಮು ಕಾಶ್ಮೀರ ಅರಣ್ಯ ಇಲಾಖೆ ಅಧಿಕಾರಿ ನಿಸಾರ್ ಅಹ್ಮದ್ ಖಾನ್ ಎಂದು ಹೆಸರುಗಳಿವೆ. ಮೇ 2024 ರಲ್ಲಿ ಹವಾಲ್ದಾರ್ ಫಿರ್ದೌಸ್ ಅಹ್ಮದ್ ಭಟ್ ಲಷ್ಕರ್-ಎ-ತೊಯ್ಬಾಗೆ ಸಂಬಂಧ ಸಂಬಂಧ ಹೊಂದಿರುವ ಬಗ್ಗೆ ಮೊದಲ ಬಾರಿಗೆ ಬೆಳಕಿಗೆ ಬಂದಿತು. ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಪೂರೈಕೆಗೆ ವ್ಯವಸ್ಥೆ ಮಾಡಿದ ಆರೋಪ ಇವನ ಮೇಲಿದೆ.