ವಕ್ಫ್ ಆಸ್ತಿಗಳಲ್ಲಿ ದೇಶದಲ್ಲಿರುವ 280 ಪಾರಂಪರಿಕ ಸ್ಮಾರಕಗಳು ಸೇರಿವೆ
ನವದೆಹಲಿ – ಜಂಟಿ ಸಂಸದೀಯ ಸಮಿತಿಯು ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿದ ನಂತರ, ಫೆಬ್ರವರಿ 13 ರಂದು ಸಂಸತ್ತಿನ ಎರಡೂ ಸದನಗಳಲ್ಲಿ ಅದನ್ನು ಮಂಡಿಸಲಾಯಿತು. ನಂತರ ಇದರ ಬಗ್ಗೆ ಗದ್ದಲ ಉಂಟಾಯಿತು. ಈ ವರದಿಯಲ್ಲಿ, ದೇಶದಲ್ಲಿನ ಪ್ರಾಮುಖ್ಯತೆಯ ಅಂದಾಜು 280 ಪಾರಂಪರಿಕ ಸ್ಮಾರಕಗಳನ್ನು ವಕ್ಫ್ ಮಂಡಳಿಯ ಆಸ್ತಿ ಎಂದು ಘೋಷಿಸಲಾಗಿದೆ. ಇದರಲ್ಲಿ ಕುತುಬ್ ಮಿನಾರ್, ಫಿರೋಜ್ ಷಾ ಕೋಟ್ಲಾ, ಪುರಾಣ ಕಿಲ್ಲಾ, ಹುಮಾಯೂನ ಮಕಬರಾ (ಗೋರಿ), ಜಹಾಂಆರಾ ಬೇಗಂ ಮಕಬರಾ, ಕುತುಬ್ ಮಿನಾರ್ ಪ್ರದೇಶದಲ್ಲಿರುವ ಕಬ್ಬಿಣದ ಕಂಬ ಮತ್ತು ಇಲ್ತುತಮಿಶ್ ಮಕಬರಾದಂತಹ ಸ್ಮಾರಕಗಳನ್ನು ಸಹ ವಕ್ಫ್ ತನ್ನದೆಂದು ಹೇಳಿಕೊಳ್ಳುತ್ತದೆ. ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ ಇವುಗಳ ಪಟ್ಟಿಯನ್ನು ಸಮಿತಿಗೆ ಸಲ್ಲಿಸಿತ್ತು.
ಪುರಾತತ್ತ್ವ ಇಲಾಖೆಯು, ಸ್ಮಾರಕಗಳನ್ನು ಸಂರಕ್ಷಿಸಲು ವಕ್ಫ್ ಮಂಡಳಿ ನಮಗೆ ಅನುಮತಿ ನೀಡಿಲ್ಲ. ಅವರು ಅದನ್ನು ತಮ್ಮ ಸ್ವಂತ ಇಚ್ಛೆಯಂತೆ ಬದಲಾಯಿಸಿಕೊಂಡರು. ಪುರಾತತ್ತ್ವ ಕಾನೂನನ್ನು ಉಲ್ಲಂಘಿಸಲಾಗಿದೆ. ಗೌಪ್ಯತೆಯ ಹೆಸರಿನಲ್ಲಿ, ಸ್ಮಾರಕಗಳಿಗೆ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು. ಅಲ್ಲಿ ಛಾಯಾಚಿತ್ರಗಳು, ಸ್ಮಾರಕಗಳು ಇತ್ಯಾದಿಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಯಿತು. ಮೂಲ ರಚನೆಯನ್ನು ಬದಲಾಯಿಸಿ ಪುನರ್ನಿರ್ಮಿಸಲಾಯಿತು. ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಯಿತು.
ಸಂಪಾದಕೀಯ ನಿಲುವು
|