ಢಾಕಾ (ಬಾಂಗ್ಲಾದೇಶ) – ‘ತೌಹೀದಿ ಜನತಾ’ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಕಟ್ಟರವಾದಿ ಮುಸ್ಲಿಮರು ‘ವ್ಯಾಲೆಂಟೈನ್ಸ್ ಡೇ’ದಂದು ಹೂವು ಮಾರುತ್ತಿದ್ದ ಅಂಗಡಿಯೊಂದನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಫೆಬ್ರವರಿ 15 ರಂದು ಬಾಂಗ್ಲಾದೇಶದ ಟಾಂಗೆಲ್ ಜಿಲ್ಲೆಯ ಭೂಆಪುರ ಉಪಜಿಲ್ಲೆಯಲ್ಲಿ ನಡೆದಿದೆ. “ಮಾಮಾ ಗಿಫ್ಟ್ ಕಾರ್ನರ್” ಎಂದು ಅಂಗಡಿಯ ಹೆಸರು ಆಗಿದ್ದೂ, ಆಲಂ ಎಂಬ ವ್ಯಕ್ತಿ ಅದನ್ನು ನಡೆಸುತ್ತಿದ್ದರು. ಆಲಂ ಫೆಬ್ರವರಿ 14 ರಂದು ಅಂಗಡಿಯಲ್ಲಿ ಹೂವುಗಳನ್ನು ಮಾರಾಟ ಮಾಡುತ್ತಿದ್ದನು. ‘ವ್ಯಾಲೆಂಟೈನ್ಸ್ ಡೇ’ದಂದು ಹೂವುಗಳನ್ನು ಮಾರಾಟ ಮಾಡುವುದು ಅಪರಾಧ” ಎಂದು ಗುಂಪು ತಮ್ಮಲ್ಲಿ ಹೇಳಿದ್ದಾಗಿ ಆಲಂ ತಿಳಿಸಿದ್ದಾನೆ.
ಫೆಬ್ರವರಿ 13 ರಂದು, ತೌಹೀದಿ ಜನತಾ ಕಾರ್ಯಕರ್ತರು “ನಿರ್ಬಿಲಿ ಫುಡ್ ಕಾರ್ನರ್” ಎಂಬ ಅಂಗಡಿಯ ಮೇಲೆ ಇದೇ ರೀತಿಯ ದಾಳಿ ನಡೆಸಿದರು. ಕಟ್ಟರವಾದಿಗಳು ಈ ರೆಸ್ಟೋರೆಂಟ್‌ನ ಹೊರಗೆ “ಪ್ರೇಮ ವಿರೋಧಿ” ಪ್ರತಿಭಟನೆಗಳನ್ನು ನಡೆಸಿದರು. ಘೋಷಣೆಗಳನ್ನು ಕೂಗುತ್ತಾ, “ಜೋಡಿಗಳು ಸಾರ್ವಜನಿಕವಾಗಿ ಪ್ರೀತಿಯನ್ನು ಪ್ರದರ್ಶಿಸಿದರೆ, ಅವರಿಗೆ ದೈಹಿಕ ಹಾನಿ ಮಾಡಲಾಗುವುದು” ಎಂದು ಬೆದರಿಕೆ ಹಾಕಿದರು. ಈ ಎಲ್ಲದರ ನಡುವೆ, ಫೆಬ್ರವರಿ 15 ರಂದು ಭೂಆಪುರದಲ್ಲಿ ನಡೆಯಬೇಕಿದ್ದ “ವಸಂತ ಉತ್ಸವ” ವನ್ನು ಮುಂದೂಡಲಾಗಿದೆ.
ಸಂಪಾದಕೀಯ ನಿಲುವು“ಶಿವಸೇನೆ, ಶ್ರೀರಾಮ ಸೇನೆ ಯಂತಹ ಹಿಂದೂತ್ವನಿಷ್ಠ ಪಕ್ಷ ಅಥವಾ ಸಂಘಟನೆಗಳು ‘ವ್ಯಾಲೆಂಟೈನ್ಸ್ ಡೇ’ಯನ್ನು ವಿರೋಧಿಸಿದ್ದಕ್ಕಾಗಿ ಅವರಿಗೆ ಬುದ್ಧಿವಾದ ಹೇಳುವ ಪ್ರಗತಿ(ಅಧೋಗತಿ)ಪರರು ಈಗ ಬಾಂಗ್ಲಾದೇಶಕ್ಕೆ ಹೋಗಿ ಈ ಕಟ್ಟರವಾದಿ ಮುಸ್ಲಿಂರಿಗೆ ಉಪದೇಶ ಏಕೆ ನೀಡುತ್ತಿಲ್ಲ ?” |