ಪ್ರಯಾಗರಾಜ, ಫೆಬ್ರುವರಿ ೧೫ (ಸುದ್ಧಿ) – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಫೆಬ್ರವರಿ ೫ ರಂದು ಮಹಾಕುಂಭದಲ್ಲಿ ಬಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಮೋದಿ ಇವರ ಸ್ನಾನದ ನಂತರ ದೇಶಾದ್ಯಂತದ ಭಾಜಪದ ಅನೇಕ ನಾಯಕರು, ಚಲನಚಿತ್ರ ನಿರ್ಮಾಪಕರ ಸಹಿತ ವಿವಿಧ ಕ್ಷೇತ್ರದಲ್ಲಿನ ಗಣ್ಯ ವ್ಯಕ್ತಿಗಳು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು.
ತ್ರಿವೇಣಿ ಸಂಗಮದಲ್ಲಿ ಗಣ್ಯ ವ್ಯಕ್ತಿಗಳ ಸ್ನಾನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಣ್ಯ ವ್ಯಕ್ತಿಗಳು ಸಂಗಮಕ್ಕೆ ಬರುವಾಗ ಉತ್ತರ ಪ್ರದೇಶ ಸರಕಾರದಿಂದ ಸುರಕ್ಷೆ ನೀಡಲಾಗಿದೆ. ಸಂಗಮದಲ್ಲಿ ಸ್ನಾನ ಆದ ನಂತರ ಅಲ್ಲಿಂದ ದೋಣಿಯ ಮೂಲಕ ಅಕ್ಷಯವಟ ಮತ್ತು ಲೇಟೆ ಹನುಮಾನ ಮಂದಿರ ಇಲ್ಲಿ ದರ್ಶನಕ್ಕಾಗಿ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಗಣ್ಯ ವ್ಯಕ್ತಿಗಳು ಸ್ನಾನಕ್ಕಾಗಿ ಬರುತ್ತಿದ್ದರು ಕೂಡ ಎಲ್ಲಾ ಭಕ್ತರಿಗೂ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ಪ್ರವೇಶ ನೀಡಲಾಗುತ್ತಿದೆ.