ಮಹಾಕುಂಭದ ಸಮಯದಲ್ಲಿ ೫೧ ಕೋಟಿ ಭಕ್ತರಿಂದ ಸಂಗಮದಲ್ಲಿ ಸ್ನಾನ !

ಪ್ರಯಾಗರಾಜ ಕುಂಭಮೇಳ 2025

ಲೋಕಸಭೆಯ ಸಭಾಪತಿ ಓಂ ಬಿರ್ಲಾ ಪತ್ನಿ ಸಹಿತ ಸಂಗಮ ಸ್ನಾನ ಮಾಡುವಾಗ

ನಗರದಲ್ಲಿ ಮತ್ತೆ ಸಾರಿಗೆ ದಟ್ಟಣೆ !

ಪ್ರಯಾಗರಾಜ, ಫೆಬ್ರುವರಿ ೧೫ (ಸುದ್ಧಿ) – ಫೆಬ್ರುವರಿ ೧೫ ರಂದು ಮಹಾಕುಂಭದ ೩೪ ನೆ ದಿನವಾಗಿದೆ. ಶನಿವಾರ ಮತ್ತು ಫೆಬ್ರುವರಿ ೧೬ ಭಾನುವಾರ ಇರುವುದರಿಂದ ತ್ರಿವೇಣಿ ಸಂಗಮದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ನಗರದಲ್ಲಿ ಮತ್ತೆ ಸಾರಿಗೆ ದಟ್ಟಣೆ ನಿರ್ಮಾಣವಾಗಿದೆ. ಜನವರಿ ೧೩ ರಿಂದ ಇಲ್ಲಿಯವರೆಗೆ ಒಟ್ಟು ೫೧ ಕೋಟಿ ೩ ಲಕ್ಷ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಎಲ್ಲಕ್ಕಿಂತ ದೊಡ್ಡ ಮಹೋತ್ಸವ ಎಂದು ದಾಖಲಾಗಿದೆ. ೪೫ ದಿನ ನಡೆಯುವ ಮಹಾಕುಂಭ ಇನ್ನು ೧೧ ದಿನ ಇರುವುದು. ಲೋಕಸಭೆಯ ಸಭಾಪತಿ ಓಂ ಬಿರ್ಲಾ ಇವರು ಪತ್ನಿ ಸಹಿತ ಸಂಗಮದಲ್ಲಿ ಸ್ನಾನ ಮಾಡಿದರು ಹಾಗೂ ಕೇಂದ್ರ ಸಚಿವ ಪಿಯುಷ್ ಗೋಯೆಲ್ ಇವರು ಸಂಗಮದಲ್ಲಿ ಸ್ನಾನ ಮಾಡಿದರು. ಇವರಲ್ಲದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಇವರು ಕೂಡ ಸಂಗಮದಲ್ಲಿ ಸ್ನಾನ ಮಾಡಿದರು.

ಕೇಂದ್ರ ಸಚಿವ ಪಿಯುಷ್ ಗೋಯಲ್ ಸ್ನಾನ ಮಾಡುವಾಗ

ಓಂ ಬಿರ್ಲಾ ಇವರು, ಧರ್ಮ, ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಮಹಾಕುಂಭ ದಿವ್ಯವಾಗಿದೆ. ಮಹಾಕುಂಭದಲ್ಲಿ ದಿವ್ಯ ಶಕ್ತಿ ಇದೆ. ಗಂಗಾಮಾತೆಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ ಎಂದು ನಾನು ಗಂಗಾ ಮಾತೆಗೆ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು. ಪಿಯೂಷ್ ಗೋಯಲ್ ಇವರು ಮಾತನಾಡಿ, ಒಂದು ಭಾರತ ಶ್ರೇಷ್ಠ ಭಾರತದ ಅಮೂಲ್ಯ ಉದಾಹರಣೆ ಎಂದರೆ ಮಹಾಕುಂಭವಾಗಿದೆ ಎಂದು ಹೇಳಿದರು. ವೇದ ಪುರಾಣದಲ್ಲಿ ಮಹಾಕುಂಭದ ಉಲ್ಲೇಖ ಕಾಣುತ್ತದೆ. ಈ ಆಯೋಜನೆ ಸಮಭಾವ ಮತ್ತು ಸೌಹಾರ್ದತೆ ಇದರ ಪ್ರತೀಕವಾಗಿದೆ. ಇಲ್ಲಿ ಜಾತಿ ಮತ್ತು ಧರ್ಮ ಹೀಗೆ ಭೇದ ಭಾವ ಇಲ್ಲದೆ ಎಲ್ಲಾ ಜನರು ಒಟ್ಟಾಗಿ ಬಂದು ಶ್ರದ್ಧೆಯಿಂದ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಮಹಾಕುಂಭ ಇದು ಕೇವಲ ಆಂತರಿಕ ಶಕ್ತಿ ಮತ್ತು ಚೇತನ ಇವುಗಳಷ್ಟೇ ಜಾಗೃತ ಗೊಳಿಸದೆ, ಆತ್ಮ ಮತ್ತು ಮನಸ್ಸಿನ ಶುದ್ಧತೆ ಕೂಡ ಪ್ರದಾನಿಸುತ್ತದೆ ಇಲ್ಲಿಯ ಆಯೋಜನೆ ವಿಶಾಲತೆ ಮತ್ತು ಪವಿತ್ರತೆಯನ್ನು ತೋರಿಸುತ್ತದೆ’, ಎಂದು ಹೇಳಿದರು.

ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ ಸಹಿತ ಸಚಿವ ಸಂಪುಟದಲ್ಲಿನ ಸಚಿವರು ಮತ್ತು ಶಾಸಕರು ಇಲ್ಲಿ ಸಂಗಮದಲ್ಲಿ ಸ್ನಾನ ಮಾಡಲು ಬಂದಿದ್ದಾರೆ.

ಈ ಸಮಯದಲ್ಲಿ ಪ್ರಮೋದ ಸಾವಂತ ಇವರು ಮಾತನಾಡಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಇಲ್ಲಿ ಮಹಾಕುಂಭದ ಬೃಹತ್ ಆಯೋಜನೆ ಮಾಡಿದ್ದಾರೆ. ಇಲ್ಲಿ ಬಂದ ನಂತರ ನನಗೆ ಆನಂದ ಸಿಗುತ್ತಿದೆ’, ಎಂದು ಹೇಳಿದರು.