Waqf Amendment Bill : ಜಂಟಿ ಸಂಸದೀಯ ಸಮಿತಿಯಿಂದ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

ಆಡಳಿತ ಪಕ್ಷದ 14 ತಿದ್ದುಪಡಿಗಳನ್ನು ಅಂಗೀಕರಿಸಿದರೇ ವಿರೋಧ ಪಕ್ಷದ 44 ತಿದ್ದುಪಡಿಗಳನ್ನು ತಿರಸ್ಕರಿಸಲಾಯಿತು

ನವದೆಹಲಿ – ವಕ್ಫ್ ತಿದ್ದುಪಡಿ ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಜನವರಿ 27 ರಂದು ನಡೆದ  ಸಭೆಯಲ್ಲಿ, ಆಡಳಿತ ಪಕ್ಷದ 14 ತಿದ್ದುಪಡಿಗಳನ್ನು ಅಂಗೀಕರಿಸಲಾಯಿತು, ಆದರೆ ವಿರೋಧ ಪಕ್ಷಗಳು ತಂದ 44 ತಿದ್ದುಪಡಿಗಳನ್ನು ತಿರಸ್ಕರಿಸಲಾಯಿತು. ಈ ಕುರಿತು ಸಮಿತಿಯ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಇವರು, ಈ ಮಸೂದೆಯಲ್ಲಿ ಅಂಗೀಕರಿಸಲಾದ ತಿದ್ದುಪಡಿಗಳು ಈ ಮಸೂದೆಯನ್ನು ಉತ್ತಮಗೊಳಿಸುತ್ತವೆ ಎಂದು ಹೇಳಿದರು. ಇದು ಬಡ ಮತ್ತು ಹಿಂದುಳಿದ ವರ್ಗದ ಮುಸ್ಲಿಮರಿಗೆ ಗರಿಷ್ಠ ಪ್ರಯೋಜನಗಳನ್ನು ಒದಗಿಸುವ ಸರಕಾರದ ಉದ್ದೇಶ ಸಾಧ್ಯವಾಗುತ್ತದೆ.

1. ಜಗದಂಬಿಕಾ ಪಾಲ್‌ ಇವರು ಅನುಮೋಧಿಸಿದ ತಿದ್ದುಪಡಿಗಳಲ್ಲಿ ಕೆಲವು ತಿದ್ದುಪಡಿಗಳನ್ನು ಉಲ್ಲೇಖಿಸಿದ್ದಾರೆ. ಈ ಹಿಂದೆ, ವಕ್ಫ್ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಏಕೈಕ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇತ್ತು. ಈಗ ರಾಜ್ಯ ಸರಕಾರದಿಂದ ನೇಮಕಗೊಂಡ ವ್ಯಕ್ತಿಗೆ ಈ ಅಧಿಕಾರಗಳು ಇರುತ್ತವೆ. ಆ ವ್ಯಕ್ತಿಯು ಆಯುಕ್ತರು ಅಥವಾ ಕಾರ್ಯದರ್ಶಿಯೂ ಆಗಿರಬಹುದು. ಈ ಹಿಂದೆ ವಕ್ಫ್ ಬೋರ್ಡ್‌ನಲ್ಲಿ ಕೇವಲ ಇಬ್ಬರು ಸದಸ್ಯರಿದ್ದರು. ಸರಕಾರವು ಇಬ್ಬರ ಬದಲು 3 ಸದಸ್ಯರು ಇರಬೇಕೆಂದು ಸೂಚಿಸಿತು. ಇದರಲ್ಲಿ ಇಸ್ಲಾಂ ವಿದ್ವಾಂಸರೂ ಸೇರಿದ್ದಾರೆ.

2. ಜಂಟಿ ಸಂಸದೀಯ ಸಮಿತಿಯು ಬಜೆಟ್ ಅಧಿವೇಶನದಲ್ಲಿ ತನ್ನ ವರದಿಯನ್ನು ಮಂಡಿಸಲಿದೆ. ಬಜೆಟ್ ಅಧಿವೇಶನ ಜನವರಿ 31 ರಿಂದ ಪ್ರಾರಂಭವಾಗಿ ಏಪ್ರಿಲ್ 4 ರವರೆಗೆ ನಡೆಯಲಿದೆ.