Union Home Minister Amit Shah : ಕೇಂದ್ರ ಗೃಹ ಸಚಿವ ಅಮಿತ್ ಶಾ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು !

ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿರುವಾಗ ಯೋಗಿ ಆದಿತ್ಯನಾಥ್ ಮತ್ತು ಇತರ ಸಂತರು

ಪ್ರಯಾಗರಾಜ್, ಜನವರಿ 27 (ಸುದ್ದಿ) – ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗರಾಜ್‌ನ ಪ್ರವಾಸದಲ್ಲಿದ್ದೂ ಜನವರಿ 27 ರಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಜುನಾ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮತ್ತು ಯೋಗಋಷಿ ರಾಮದೇವ ಬಾಬಾ ಕೂಡ ಸ್ನಾನ ಮಾಡಿದರು. ನಂತರ, ಸಂತರು ಮಂತ್ರೋಚ್ಚಾರ ಮಾಡುತ್ತಾ ಷಾ ಅವರ ಹಣೆಯ ಮೇಲೆ ಶ್ರೀಗಂಧ ಹಚ್ಚಿದರು.

ಯೋಗಋಷಿ ರಾಮದೇವ ಬಾಬಾ ಅವರೊಂದಿಗೆ ಯೋಗಾಸನಗಳನ್ನು ಮಾಡಿದ ಯೋಗಿ ಆದಿತ್ಯನಾಥ !

ಸ್ನಾನ ಮಾಡಿದ ನಂತರ, ಅಮಿತ ಶಾ ತಮ್ಮ ಕುಟುಂಬದೊಂದಿಗೆ ತ್ರಿವೇಣಿ ಸಂಗ್ಮಾದಲ್ಲಿ ಗಂಗಾ ನದಿಯ ಪೂಜೆ ಮತ್ತು ಆರತಿ ಮಾಡಿದರು. ಅದಾದ ನಂತರ, ಅಕ್ಷಯ ವಟದ ದರ್ಶನ ಪಡೆದುಕೊಮಡರು.

ಗಂಗಾ ನದಿಯ ಪೂಜೆ ಮಾಡುತ್ತಿರುವ ಅಮಿತ ಶಾ ಮತ್ತು ಯೋಗಿ ಆದಿತ್ಯನಾಥ

ಷಾ ಆಗಮನದ ಮೊದಲು ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಇವರು ಹವನ ಮಾಡಿದರು. ಷಾ ಇವರು ಜುನಾ ಅಖಾಡದಲ್ಲಿ ಸಾಧು-ಸಂತರೊಂದಿಗೆ ಚರ್ಚೆ ನಡೆಸಿ ಅವರೊಂದಿಗೆ ಊಟವನ್ನೂ ಮಾಡಿದರು.

ಅಮಿತ ಶಾ ಅವರನ್ನು ಸನ್ಮಾನಿಸುತ್ತಿರುವ ಯೋಗಿ ಆದಿತ್ಯನಾಥ