ಅಜ್ಮೇರ ದರ್ಗಾ ಶಿವ ದೇವಸ್ಥಾನವಾಗಿರುವ ಪ್ರಕರಣ
ಅಜ್ಮೇರ (ರಾಜಸ್ಥಾನ) – ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರ ಮೇಲೆ ಜನವರಿ 25 ರಂದು ಬೆಳಿಗ್ಗೆ 6 ಗಂಟೆಗೆ ಗುಂಡಿನ ದಾಳಿ ನಡೆದಿದೆ. ವಿಷ್ಣು ಗುಪ್ತಾ ಅವರು ಅಜ್ಮೇರನಲ್ಲಿರುವ ಚಿಶ್ತಿ ದರ್ಗಾ ಇರುವ ಸ್ಥಳದಲ್ಲಿ ಹಿಂದೂ ದೇವಾಲಯದ ಅಸ್ತಿತ್ವದ ಕುರಿತು ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಜನವರಿ 24 ರಂದು ನಡೆದಿತ್ತು. ನಂತರ, ಅವರು ದೆಹಲಿಗೆ ತೆರಳುತ್ತಿದ್ದಾಗ, ಗಗವಾನಾ-ಲಾಡಪುರಾದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ವಾಹನದ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ವಿಷ್ಣು ಗುಪ್ತಾ ಅವರ ವಾಹನಕ್ಕೆ ಗುಂಡುಗಳು ತಗುಲಿದವು. ಇದರಲ್ಲಿ ವಿಷ್ಣು ಗುಪ್ತಾ ಪಾರಾದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ನಂತರ, ವಿಷ್ಣು ಗುಪ್ತಾ ಇವರು, ನನ್ನ ಸುರಕ್ಷತೆ ಈಗಾಗಲೇ ಅಪಾಯ ಇದೆ. ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಈ ದಾಳಿಯು ಬೆದರಿಸುವ ಉದ್ದೇಶ ಇತ್ತು; ಆದರೆ ನಾನು ಹೆದರುವುದಿಲ್ಲ’, ಎಂದು ಹೇಳಿದರು. ಪೊಲೀಸರು ದುಷ್ಕರ್ಮಿಗಳನ್ನು ಗುರುತಿಸಲು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. “ಆದಷ್ಟು ಬೇಗನೆ ಅಪರಾಧಿಗಳನ್ನು ಬಂಧಿಸಲಾಗುವುದು ಮತ್ತು ಪ್ರಕರಣವನ್ನು ಭೇದಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ್ಣು ಗುಪ್ತಾ ಇವರ ವಕೀಲರಿಗೆ ಜೀವ ಬೆದರಿಕೆ
ಅಜ್ಮೇರ ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಪ್ರತಿಪಾದಿಸುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜನವರಿ 24 ರಂದು ನಡೆಸಿತು. ಇದಕ್ಕೂ ಮೊದಲು, ಜನವರಿ 24 ರಂದು ವಿಚಾರಣೆಗೆ ನ್ಯಾಯಾಲಯಕ್ಕೆ ಬಂದರೆ ಗುಂಡು ಹಾರಿಸಿ ಕೊಲೆ ಮಾಡಲಾಗುವುದು‘ ಎಂದು ವಿಷ್ಣು ಗುಪ್ತಾ ಅವರ ವಕೀಲರಿಗೆ ನ್ಯಾಯಾಲಯದ ಹೊರಗೆ ಓರ್ವನು ಬೆದರಿಕೆ ಹಾಕಿದನು. ಅವನು ತನ್ನನ್ನು ಪತ್ರಕರ್ತ ಎಂದು ಹೇಳಿದ್ದನು.
ದರ್ಗಾ ಸಮಿತಿಗೆ ತನ್ನ ಅಭಿಪ್ರಾಯಗಳನ್ನು ಮಂಡಿಸಲು ಸಮಯಾವಕಾಶ ನೀಡಲಾಗಿದೆ
ಅರ್ಜಿದಾರ ವಿಷ್ಣು ಗುಪ್ತಾ ಅವರ ಅರ್ಜಿಯ ಮೇರೆಗೆ ದರ್ಗಾ ಸಮಿತಿಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯಲ್ಲಿ, ಇದು ಶಿವ ದೇವಾಲಯ ಎಂದು ಹೇಳಿಕೊಳ್ಳುವ ಅರ್ಜಿಯನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ಸಮಿತಿ ಹೇಳುತ್ತದೆ. ಈ ಬಗ್ಗೆ ನ್ಯಾಯಾಲಯವು ವಿಷ್ಣು ಗುಪ್ತಾ ಅವರಿಂದ ಉತ್ತರ ಕೇಳಿದೆ. ವಿಷ್ಣು ಗುಪ್ತಾ ನ್ಯಾಯಾಲಯಕ್ಕೆ ತಮ್ಮ ಉತ್ತರವನ್ನು ಸಲ್ಲಿಸಿದ್ದಾರೆ. ಈಗ ದರ್ಗಾ ಸಮಿತಿಯು ಈ ಉತ್ತರದ ಬಗ್ಗೆ ತನ್ನ ವಾದವನ್ನು ಮಂಡಿಸಬೇಕಾಗಿದೆ, ಇದಕ್ಕಾಗಿ ಅದು ನ್ಯಾಯಾಲಯದಿಂದ ಸಮಯ ಕೋರಿದೆ. ಈ ಪ್ರಕರಣದಲ್ಲಿ ಕಕ್ಷಿದಾರರಾಗಲು ಆರು ಹೊಸ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 11 ಜನರು ಕಕ್ಷಿದಾರರಾಗಲು ಬೇಡಿಕೆ ಇಟ್ಟಿದ್ದಾರೆ.
ವಿಷ್ಣು ಗುಪ್ತಾ ಮಾತನಾಡಿ, ಅಜ್ಮೇರ ದರ್ಗಾದಲ್ಲಿ ದೇವಸ್ಥಾನವಿತ್ತು ಎಂಬುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಸಾಕಷ್ಟು ಪುರಾವೆಗಳನ್ನು ಮಂಡಿಸಿದ್ದಾರೆ. ಇಲ್ಲಿ ಪೂಜಾ ಸ್ಥಳ ಕಾನೂನು(ಪ್ಲೇಸಸ್ ಆಫ್ ವರ್ಶಿಪ್ ಆಕ್ಟ) ಅನ್ವಯಿಸುವುದಿಲ್ಲ; ಏಕೆಂದರೆ ಅದು ಪ್ರಾರ್ಥನಾ ಸ್ಥಳವಲ್ಲ. ಕೇವಲ, ದೇವಸ್ಥಾನಗಳು, ಮಸೀದಿಗಳು, ಚರ್ಚ್ಗಳು ಮತ್ತು ಗುರುದ್ವಾರಗಳು ಮಾತ್ರ ಪೂಜಾ ಕಾಯ್ದೆಯಡಿಯಲ್ಲಿ ಬರುತ್ತವೆ. ಪೂಜಾ ಕಾಯ್ದೆಯಲ್ಲಿ ದರ್ಗಾಗಳು ಅಥವಾ ಸ್ಮಶಾನಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
🚨 Shocking Attack on @HinduSenaOrg President VishnuGupta ! 🚨
🔫 @VishnuGupta_HS narrowly escapes a bullet attack amid the ongoing case claiming the Ajmer Dargah being a Shiva temple.
⚖️ His advocate also faces death threats
Those unwilling to fight a legal battle are… https://t.co/CdVNEdOmyo pic.twitter.com/C5LyCEDFY0
— Sanatan Prabhat (@SanatanPrabhat) January 25, 2025
ಸಂಪಾದಕೀಯ ನಿಲುವು
|