ಪ್ರಯಾಗರಾಜ ಕುಂಮೇಳ 2025

ಪ್ರಯಾಗರಾಜ, ಜನವರಿ 24 (ಸುದ್ದಿ) – ಕುಂಭಮೇಳದ ಮೂಲಕ ಎಲ್ಲೆಡೆ ಹಿಂದೂಗಳಿಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಕಲ್ಪನೆಯನ್ನು ಹರಡುವ ಸಲುವಾಗಿ, ಜನವರಿ 22 ರಂದು ಮಹಾ ಕುಂಭಮೇಳದ ಸಮಯದಲ್ಲಿ ಹಿಂದೂ ರಾಷ್ಟ್ರ ಏಕತಾ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, `ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಗಳು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಬಗ್ಗೆ ಪಾದಯಾತ್ರೆಯ ಮಾರ್ಗದುದ್ದಕ್ಕೂ ನೆರೆದಿದ್ದ ನಾಗಾ ಸಾಧುಗಳು ಮತ್ತು ಭಕ್ತರ ಪ್ರತಿಕ್ರಿಯೆಗಳ ಬಗ್ಗೆ ವಿಚಾರಿಸಿದರು. ಅವರೆಲ್ಲರೂ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಉತ್ಸಾಹದಿಂದ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಸ್ವಾಮಿ ಜಗದೀಶಗಿರಿ ಮಹಾರಾಜರು ಈ ಪಾದಯಾತ್ರೆಯಲ್ಲಿ ಸ್ವಲ್ಪ ಸಮಯದವರೆಗೆ ಭಾಗವಹಿಸಿದ್ದರು. ಹಿಂದೂ ರಾಷ್ಟ್ರದ ಬಗ್ಗೆ ಅವರು, “ಸನಾತನ ಧರ್ಮದ ಜಯಜಯಕಾರವಾಗಬೇಕು. ವಿಶ್ವದಲ್ಲಿ ಸನಾತನ ಧರ್ಮದ ಪ್ರಚಾರವಾಗಬೇಕು.’ ಎಂದು ಹೇಳಿದರು.
ಭಕ್ತರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು!
1. ಭಾರತದ ತ್ಯಾಗದ ಸಂಸ್ಕೃತಿಯಾಗಿದೆ. ಋಷಿಗಳು, ಸಂತರು ಮತ್ತು ಮಹಾಪುರುಷರು ವಿಶ್ವಕಲ್ಯಾಣದ ವಿಚಾರವನ್ನು ಮಂಡಿಸಿದ್ದಾರೆ. ಭಾರತವು ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರವಾಗಿದೆ; ಆದರೆ, ಈಗ ಸಾಂವಿಧಾನಿಕವಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅಗತ್ಯವಾಗಿದೆ. – ಶ್ರೀ. ತಿಲಕರಾಜ ರೋತಕ, ಹರಿಯಾಣ
2. ಹಿಂದೂಗಳ ದೇವರುಗಳನ್ನು ಗೌರವಿಸಬೇಕು. ಭಾರತದಲ್ಲಿ ಎಷ್ಟು ದೇವಸ್ಥಾನಗಳಿವೆಯೋ ಅಷ್ಟನ್ನು ಧ್ವಂಸಗೊಳಿಸುವ ಘಟನೆಗಳನ್ನು ನಿಲ್ಲಿಸಬೇಕು. ಎಲ್ಲಾ ಹಿಂದೂಗಳು ಒಂದಾಗಬೇಕು. ಹಿಂದೂ ರಾಷ್ಟ್ರಕ್ಕೆ ಜಯವಾಗಲಿ – ಶ್ರೀ. ದೇವಿದಯಾಳ ಪಾಂಡೆ, ಮಧ್ಯಪ್ರದೇಶ
3. ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಇದಕ್ಕಾಗಿ ನಾವು ತನು, ಮನ ಮತ್ತು ಧನವನ್ನು ಅರ್ಪಿಸಲು ಸಿದ್ಧರಿದ್ದೇವೆ. – ಶ್ರೀ. ನೀಲೇಶ ಶುಕ್ಲಾ, ಪ್ರಯಾಗರಾಜ, ಉತ್ತರ ಪ್ರದೇಶ
4. ಈ ಭೂಮಿಯಲ್ಲಿ ಪ್ರಭು ಶ್ರೀರಾಮನು ಜನಿಸಿದನು. ಆದ್ದರಿಂದ, ಇದು ಹಿಂದೂಗಳ ಭೂಮಿಯಾಗಿದೆ. ಇದಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. – ಶ್ರೀ. ಆನಂದ ತಿವಾರಿ, ಉತ್ತರ ಪ್ರದೇಶ
5. ವಿಶ್ವದಲ್ಲಿ ಹಿಂದೂ ರಾಷ್ಟ್ರವಾಗಬಲ್ಲ ಏಕೈಕ ದೇಶ ಭಾರತವಾಗಿದೆ. ಆದ್ದರಿಂದ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಯುವಕರು ಮತ್ತು ಹಿರಿಯರು ಎಲ್ಲರೂ ಪ್ರಯತ್ನಿಸಬೇಕು. – ಶ್ರೀ. ಸಾರಂಗ ಖಾಡಯೆ, ವರ್ಧಾ, ಮಹಾರಾಷ್ಟ್ರ.