Devkinandan Thakur : ಸನಾತನ ಧರ್ಮದವರ ಹಿತಕ್ಕಾಗಿ ಸನಾತನ ಬೋರ್ಡ್‌ಅನ್ನು ಸ್ಥಾಪಿಸುವುದು ಅಗತ್ಯ ! – ಖ್ಯಾತ ಕಥಾವಾಚಕ ದೇವಕಿನಂದನ ಠಾಕೂರ್

ಜನವರಿ 27 ರಂದು ‘ಧರ್ಮಸಂಸತ್ತಿನ’ ಆಯೋಜನೆ

ಯಾವುದೇ ಪರಿಸ್ಥಿತಿಯಲ್ಲೂ, ಕೇಂದ್ರ ಸರಕಾರವನ್ನು ಸನಾತನ ಬೋರ್ಡ್‌ಅನ್ನು ಸ್ಥಾಪಿಸುವಂತೆ ಅನಿವಾರ್ಯಗೊಳಿಸುತ್ತೇವೆ !

ಪ್ರಯಾಗರಾಜ್, ಜನವರಿ 23 (ಸುದ್ದಿ.) – ನಮ್ಮ ಸನಾತನ ಧರ್ಮದವರನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ನಾವು ಸಂಘಟಿತರಾಗಿದ್ದೇವೆ ಮತ್ತು ಮುಂದೆಯೂ ಇರುತ್ತೇವೆ. ನಾವೆಲ್ಲಾ ಸನಾತನಿಗಳ ಒಳಿತಿಗಾಗಿ ಏಕತೆಯ ಪ್ರತಿಜ್ಞೆ ಮಾಡಿದ್ದೇವೆ. ಜನವರಿ 27 ರಂದು ಮಹಾಕುಂಭದಲ್ಲಿ ‘ಧರ್ಮ ಸಂಸದ್’ ಅನ್ನು ಆಯೋಜಿಸಲಾಗಿದೆ. ಸನಾತನ ಬೋರ್ಡ್‌ಅನ್ನು ಸ್ಥಾಪಿಸಲು ಕೇಂದ್ರ ಸರಕಾರದ ಬಳಿ ಆಗ್ರಹಿಸಿದ್ದೇವೆ. ಈ ಬೋರ್ಡ್‌ನ ರೂಪರೇಷೆಯನ್ನು ಅಂತಿಮಗೊಳಿಸಲಾಗಿದ್ದು, ಧರ್ಮ ಸಂಸತ್ತಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಏನೇ ಆಗಲಿ, ನಾವು ಸರಕಾರವನ್ನು ಸನಾತನ ಬೋರ್ಡ್‌ಅನ್ನು ಸ್ಥಾಪಿಸಲು ಅನಿವಾರ್ಯಗೊಳಿಸುತ್ತೇವೆ. ದೇಶದ ಸಾಧು-ಸಂತರು, ಶಂಕರಾಚಾರ್ಯರು ಮತ್ತು 13 ಅಖಾಡಗಳ ಮುಖ್ಯಸ್ಥರು ಈ ಧರ್ಮ ಸಂಸತ್ತಿನಲ್ಲಿ ಭಾಗವಹಿಸಲಿದ್ದಾರೆ. ಈ ಧರ್ಮ ಸಂಸತ್ತಿನ ಉದ್ದೇಶ ಎಲ್ಲಾ ಸನಾತನ ಧರ್ಮದವರನ್ನು ಒಗ್ಗೂಡಿಸುವುದಾಗಿದೆ’, ಎಂದು ಖ್ಯಾತ ಕಥೆಗಾರ ಶ್ರೀ ದೇವಕಿನಂದನ್ ಠಾಕೂರ್ ಇವರು ಜನವರಿ 23 ರಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

1. ಕಥೆಗಾರ ಶ್ರೀ ದೇವಕಿನಂದನ್ ಠಾಕೂರ್ ಇವರು ಮಾತು ಮುಂದುವರೆಸುತ್ತಾ, “ಸನಾತನ ಧರ್ಮಕ್ಕೆ ಸಂಬಂಧಿಸಿದ ಸ್ಥಳಗಳನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ‘ಸನಾತನ ಬೋರ್ಡ್’ಅನ್ನು ಸ್ಥಾಪಿಸುವುದು ಅತ್ಯಗತ್ಯವಾಗಿದೆ”. ಈ ಬೋರ್ಡ್ ಇಡೀ ಸನಾತನ ಸಮಾಜಕ್ಕೆ ಉಪಯುಕ್ತವಾಗಿರುತ್ತದೆ,’ ಎಂದು ಹೇಳಿದರು.

2. ವಕ್ಫ್ ಬೋರ್ಡ್‌ನ 9 ರಿಂದ 10 ಲಕ್ಷ ಎಕರೆ ಭೂಮಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ, ಮಹಂತ ರವೀಂದ್ರ ಪುರಿ ಮಹಾರಾಜ್ ಇವರು ಮಾತನಾಡಿ, “ದೇವಾಲಯಗಳು ಮತ್ತು ಮಠಗಳ ಭೂಮಿಯಲ್ಲಿ ಅತಿಕ್ರಮಣ ಮಾಡಲಾಗುತ್ತಿದೆ ಮತ್ತು ನಾವು ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,” ಅದರಂತೆ, ಸನಾತನ ಬೋರ್ಡ್‌ಅನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಅನಿಸುತ್ತಿದೆ. ಸನಾತನ ಬೋರ್ಡ್‌ನ ಸ್ವರೂಪವನ್ನು ಸಿದ್ಧಪಡಿಸಲಾಗಿದೆ; ಆದರೆ, ಇದಕ್ಕಾಗಿ ದೇವಾಲಯಗಳು, ಮಠಗಳು ಮತ್ತು ಸಂತರ ಒಪ್ಪಿಗೆ ಪಡೆಯಲಾಗುವುದು. “ಧಾರ್ಮಿಕ ಸ್ಥಳಗಳನ್ನು ಬಲಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.” ಎಂದು ಹೇಳಿದರು.