ಆಳಂದಿ (ಪುಣೆ) ಇಲ್ಲಿ ಸಕಲ ಹಿಂದೂ ಸಮಾಜದ ವತಿಯಿಂದ ‘ಹಿಂದೂ ಮಹೋತ್ಸವ 2025’ರ ಆಯೋಜನೆ !

ಆಳಂದಿ (ಪುಣೆ ಜಿಲ್ಲೆ), ಜನವರಿ 23 (ಸುದ್ದಿ) – ಇಂದು ಹಿಂದೂ ಧರ್ಮದ ಮೇಲೆ ವಕ್ಫ್ ಬೋರ್ಡ್, ಲವ್ ಜಿಹಾದ್, ಮತಾಂತರ ಮತ್ತು ದೇವತೆಗಳಿಗೆ ಅವಮಾನದಂತಹ ಆಘಾತಗಳಾಗುತ್ತಿವೆ. ಕೇವಲ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಕಾರ್ಯಕರ್ತರು ಮತ್ತು ಸಂಗಟನೆಗಳು ಧರ್ಮರಕ್ಷಣೆಯ ಕೆಲಸ ಮಾಡುವುದರಿಂದ ಪ್ರಯೋಜನವಿಲ್ಲ, ಪ್ರತಿಯೊಬ್ಬ ಹಿಂದೂವೂ ಈಗ ಧರ್ಮವನ್ನು ರಕ್ಷಿಸಲು ಮುಂದೆ ಬರಬೇಕು.

ಈಗಿನ ಸರಕಾರ ಹಿಂದುತ್ವನಿಷ್ಠ ವಿಚಾರಸರಣಿಯದಾಗಿದ್ದು, ಹಿಂದುತ್ವವನ್ನು ರಕ್ಷಿಸಲು ಕಟಿಬದ್ಧವಾಗಿದೆ ಎಂದು ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಸಚಿವ ಶ್ರೀ. ನಿತೇಶ ರಾಣೆ ಪ್ರತಿಪಾದಿಸಿದರು. ಸರ್ವಧರ್ಮ ಸಮಭಾವದ ಹೆಸರಿನಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆಯನ್ನು ಸಹಿಸಿಕೊಳ್ಳದೇ ನಾವೀಗ ವರ್ಷದ 365 ದಿನವೂ ಹಿಂದೂ ರಾಷ್ಟ್ರವೆಂದು ಆಚರಿಸಬೇಕು ಎಂದು ಶ್ರೀ. ನಿತೇಶ ರಾಣೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜವನ್ನು ಪ್ರಬೋಧನೆ ಮಾಡುವ ಹ.ಭ.ಪ. ಶ್ರೀ. ಸಂಗ್ರಾಮ ಬಾಪು ಭಂಡಾರೆ, ಹಾಗೆಯೇ ಮೋಶಿಯ ಯುವ ನಾಯಕರಾದ ಶ್ರೀ. ನೀಲೇಶಶೇಠ ಬೊರಾಟೆ ಅವರು ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆಯ ವರ್ದಂತ್ಯೋತ್ಸವದ ಸಂದರ್ಭದಲ್ಲಿ, ಸಕಲ ಹಿಂದೂ ಸಮಾಜದ ಪರವಾಗಿ ಆಳಂದಿಯ ಫ್ರೂಟವಾಲೆ ಧರ್ಮಶಾಲಾ ಆವರಣದಲ್ಲಿ ‘ಹಿಂದೂ ಮಹೋತ್ಸವ 2025’ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿಂದತ್ವನಿಷ್ಠರು ಮತ್ತು ಧರ್ಮಾಭಿಮಾನಿಗಳಿಗೆ ಮಾರ್ಗದರ್ಶನ ನೀಡುವಾಗ, ಶ್ರೀ. ನಿತೇಶ ರಾಣೆ ಮೇಲಿನಂತೆ ಪ್ರತಿಪಾದಿಸಿದರು.