ರೋಗಗಳನ್ನು ತಡೆಗಟ್ಟುವ ಉಪಾಯ

‘ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಿ ಪೂರ್ವಾಭಿ ಮುಖವಾಗಿ ಕುಳಿತುಕೊಳ್ಳಿ. ಧರಣಿಮಾತೆಗೆ ನಮಸ್ಕರಿಸಿ, ‘ಹೇ ವಸುಂಧರೆ ! ನೀನು ಹೇಗೆ ಅಚಲಳಾಗಿರುವೆಯೋ, ಹಾಗೆಯೇ ನನ್ನ ನಿರ್ಧಾರವು ಅಚಲವಾಗಿರಬೇಕು ಮತ್ತು ನನ್ನ ಆಸನವು ಅಚಲವಾಗಿರಬೇಕು’ ಎಂದು ಪ್ರಾರ್ಥಿಸಿರಿ. ನಂತರ ಗುರುದೇವರನ್ನು ಸ್ಮರಿಸಿ ಅವರೊಂದಿಗೆ ಆನಂದದಿಂದ ಮನಃಮುಕ್ತತೆಯಿಂದ ಮಾತನಾಡಿ. ೫-೧೫ ನಿಮಿಷಗಳಷ್ಟು ದೀರ್ಘ ಉಸಿರನ್ನು ತೆಗೆದುಕೊಳ್ಳಿರಿ ಮತ್ತು ‘ಹರಿ ಓಂ…’ ಎಂದು ಗುಣುಗುತ್ತ ಮನಸ್ಸಿನಲ್ಲಿ ನಿಮ್ಮ ದೌರ್ಬಲ್ಯಗಳನ್ನು ಮತ್ತು ವಿಕಾರಗಳನ್ನು ಎದುರಿಗೆ ತಂದುಕೊಳ್ಳಿರಿ. ನಿಮ್ಮ ಮನಸ್ಸನ್ನು ದುರ್ಬಲಗೊಳಿಸುವ ವಿಚಾರಗಳನ್ನು ಮತ್ತು ಕರ್ಮಗಳನ್ನು ಕಣ್ಣೆದುರಿಗೆ ತಂದುಕೊಳ್ಳಿ, ಯಾವ ಕಾರಣದಿಂದ ನೀವು ಶಕ್ತಿಹೀನರಾಗುತ್ತಿದ್ದೀರೋ ಆ ವಿಚಾರಗಳನ್ನು ಓಂಕಾರ ಅಥವಾ ಮಂತ್ರದ ಪಠಣದಿಂದ, ಜಪದಿಂದ ಕಾಲಿನ ಕೆಳಗೆ ತುಳಿಯುತ್ತಿರಿ. ಒಂದು ವೇಳೆ ಮೇಲಿಂದ ಮೇಲೆ ರೋಗಗಳಾಗುತ್ತಿದ್ದರೆ, ಉಸಿರನ್ನು ತೆಗೆದುಕೊಳ್ಳಿ ಮತ್ತು ‘ನಾನು ಈಗ ಆರೋಗ್ಯವಂತನಾಗುವೆನು ! ಹರಿ ಓಂ ಓಂ ಓಂ….’ ಎಂಬ ಸಂಕಲ್ಪ ಮಾಡಿ. ದೇಹದ ರೋಗಗಳ ಬಗ್ಗೆ ಚಿಂತನೆ ಮಾಡಿ ‘ಹರಿ ಓಂ’ ಅನ್ನು ದೀರ್ಘ ಸ್ವರದಿಂದ ಜಪಿಸುತ್ತ ಆ ರೋಗಗಳ ಬೇರುಗಳನ್ನು ಕಿತ್ತೊಗೆಯಿರಿ. ನಂತರ ಕೆಲವು ಬಾಹ್ಯ ಚಿಕಿತ್ಸೆಗಳನ್ನು ಮಾಡಿ ಅವುಗಳ ಕೊಂಬುಗಳನ್ನು ಮತ್ತು ಎಲೆಗಳನ್ನೂ ನಾಶಗೊಳಿಸಿರಿ.

ಒಂದು ವೇಳೆ ಮಾನಸಿಕರೋಗವಾಗಿದ್ದರೆ – ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಹಂಕಾರವಿದ್ದರೆ, ಇವುಗಳು ಬಹುಶಃ ಇದ್ದೇ ಇರುತ್ತವೆ, ಈ ರೋಗಗಳು ಹೆಚ್ಚಾಗಿದ್ದರೆ, ಆ ರೋಗಗಳನ್ನು ಸ್ಮರಿಸುತ್ತ ದೀರ್ಘ ಉಸಿರನ್ನು ತೆಗೆದುಕೊಂಡು ಆ ರೋಗಗಳ ಮೇಲೆ ಓಂಕಾರ, ಗುರುಮಂತ್ರವನ್ನು ದೀರ್ಘ ಸ್ವರದಲ್ಲಿ ಜಪಿಸಿ ಅದೇ ಮಂತ್ರದಿಂದ ಜೋರಾಗಿ ಹೊಡೆಯಿರಿ. ಗುರುಮಂತ್ರವನ್ನು ಹೇಳುವಾಗ ಅದು ಇನ್ನೊಬ್ಬರು ಕೇಳಿಸಿಕೊಳ್ಳುವಂತಹ ಜಾಗವಿದ್ದರೆ ಕೇವಲ ‘ಹರಿ ಓಂ… ಹರಿ ಓಂ…’ ಅನ್ನು ದೀರ್ಘ ಜಪಿಸಿ ಅಥವಾ ಮನಸ್ಸಿನಲ್ಲಿಯೇ ಗುರುಮಂತ್ರದ ಜಪವನ್ನು ಮಾಡಿ ಆ ರೋಗಗಳನ್ನು ತುಳಿಯಿರಿ. ಸಾವಿರಬಾರಿ ಪ್ರಯತ್ನಿಸಿರಿ.ಅದು ವಿಫಲವಾದರೆ ಭಯಪಡಬೇಡಿ. ಸಂಸ್ಕಾರಗಳು ಎಷ್ಟು ಆಳವಾಗಿರುವವೋ ಅಷ್ಟು ಪುರುಷಾರ್ಥವು ದೃಢವಾಗಬೇಕು.’

ಯಾರು ವಿಧಿಯ ನಂಬಿಕೆಯ ಮೇಲೆ ಕುಳಿತಿರುತ್ತಾನೆಯೋ, ಅವನು ಅಳಬೇಕಾಗುತ್ತದೆ. ಇಂದಿನ ಪುರುಷಾರ್ಥವೇ ನಾಳಿನ ದೈವವಾಗಿದೆ. ನಿನ್ನೆ ಮಾಡಿದ ಕರ್ಮವು ಇಂದಿನ ಹಣೆಬರಹವಾಗುತ್ತದೆ. ಈ ಹಿಂದೆ ಒಳ್ಳೆಯ ಕರ್ಮವನ್ನು ಮಾಡಿರಬಹುದು; ಆದರೆ ಈಗ ಪುರುಷಾರ್ಥವಿಲ್ಲದಿದ್ದರೆ ಮತ್ತು ದುರ್ಜನರ ಸಂಗವಿದ್ದರೆ, ಈ ಹಿಂದೆ ಮಾಡಿದ ಭಕ್ತಿ ಮತ್ತು ಜ್ಞಾನವು ಮುಚ್ಚಿ ಹೋಗುತ್ತದೆ. ಈ ಹಿಂದೆ ಮಾಡಿದ ಒಳ್ಳೆಯ ಕರ್ಮವಿದ್ದರೆ ಮತ್ತು ಈಗಲೂ ಪುರುಷಾರ್ಥವನ್ನು ಮಾಡುತ್ತಿದ್ದರೆ ಭಕ್ತಿ ಮತ್ತು ಜ್ಞಾನವು ಹೆಚ್ಚಾಗತೊಡಗುತ್ತದೆ. ಭಕ್ತಿ ಹೆಚ್ಚಾಗುತ್ತ ಹೋದಂತೆ, ಜ್ಞಾನವು ವೃದ್ಧಿಯಾಗಿ ಮನುಷ್ಯನು ಸದ್ಗುಣವಂತನಾಗುತ್ತಾನೆ. ಮನುಷ್ಯನು ಸದ್ಗುಣವಂತನಾಗುತ್ತ ಹೋದಂತೆ, ಜ್ಞಾನ ಮತ್ತು ಭಕ್ತಿ ಉತ್ತಮವಾಗುತ್ತದೆ.

(ಆಧಾರ : ಮಾಸಿಕ ‘ಋಷಿ ಪ್ರಸಾದ’, ಜೂನ್‌ ೨೦೧೯)