‘ಜೀವನದ ಬಗ್ಗೆ ಮಾತನಾಡಿದರೆ, ಕಣ್ಮುಂದೆ ಈ ಮುಂದಿನ ಚಿತ್ರಣ ಯಾವುದೊ ಚಲನಚಿತ್ರದ ಹಾಗೆ ಮೂಡಿಬರುತ್ತದೆ. ಬೆಳಗ್ಗೆ ಎದ್ದೇಳಲು ಅಲಾರಾಂ ಇಟ್ಟು ಮಲಗುವುದು, ಸಮಯಕ್ಕೆ ಬಸ್ಸು, ರೈಲು ಹಿಡಿಯಲು ಅವಸರಪಡುವುದು, ಅದರಲ್ಲಿ ಜನಸಂದಣಿ ಮತ್ತು ಅದರ ಬಗ್ಗೆ ಮನಸ್ಸಿನಲ್ಲಿ ಮೆಲುಕು ಹಾಕುವ ಹರಟೆ, ನೌಕರಿಗೆ ಹೋದಾಗ ವರಿಷ್ಠರು ಮತ್ತು ಸಹಪಾಠಿಗಳೊಂದಿಗೆ ನಡೆಯುವ ಸ್ಪರ್ಧೆ, ಹಸಿವೆ ಇಲ್ಲದಿದ್ದರೂ ಊಟ ಮಾಡುವುದು, ಸಾಯಂಕಾಲ ಮರುದಿನದ ಕೆಲಸದ ನಿಯೋಜನೆ ಮಾಡುತ್ತಾ ಹಿಂದಿರುಗುವುದು, ಮನೆಗೆ ಹೋದಾಗ ಮನೆಯಲ್ಲಿನ ಒತ್ತಡ, ಇದು ಹೆಚ್ಚು ಕಡಿಮೆ ಪ್ರಮಾಣದಲ್ಲಿ ದಿನವಿಡೀ ಎಲ್ಲರ ಜೀವನದಲ್ಲಿರುತ್ತದೆ. ನಿಜ ಹೇಳಿ, ಇದನ್ನು ಜೀವನವೆಂದು ಹೇಳಬಹುದೇ ? ಸಮಾಜದಲ್ಲಿ ಇರಬೇಕಾದರೆ, ಸಮಾಜದ ಜೊತೆಗೆ ಸಾಗಬೇಕು; ಆದರೆ ಇದೆಲ್ಲವನ್ನೂ ತಮ್ಮ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಯನ್ನು ಸ್ಥೀಮಿತದಲ್ಲಿಟ್ಟುಕೊಂಡು ಮಾಡಬೇಕು, ಇಲ್ಲದಿದ್ದರೆ ಒಬ್ಬೊಬ್ಬರಾಗಿ ಭಯಂಕರ ರಾಕ್ಷಸರು ಹಿಂದೆ ಬೀಳುವರು.
ಅಯೋಗ್ಯ ಜೀವನಶೈಲಿಯಿಂದಾಗಿ ಮನುಷ್ಯನನ್ನು ಕಾಡುವ ರಾಕ್ಷಸರೂಪಿ ರೋಗಗಳು
ಅ. ನಿದ್ರಾನಾಶ
ಆ. ಅಜೀರ್ಣ
ಇ. ಹೃದಯ ಸಂಬಂಧಿ ಕಾಯಿಲೆಗಳು
ಈ. ಪಾರ್ಶ್ವವಾಯು
ಉ. ಉಚ್ಚ ರಕ್ತದೊತ್ತಡ
ಊ. ಮಧುಮೇಹ
ಎ. ಸ್ಥೂಲಕಾಯ
ಏ. ತಲೆನೋವು
ಒ. ಅರ್ಬುದರೋಗ
ಔ. ಮಾನಸಿಕ ರೋಗ
ಮನಃಶಾಂತಿ ಚಿಕಿತ್ಸಾಪದ್ಧತಿ (ಮಾನಸಿಕ ವ್ಯಾಧಿಗಳಿಗಾಗಿ)
ಶಾರೀರಿಕ ಹಾಗೂ ಮಾನಸಿಕ ಒತ್ತಡವನ್ನು ಶಾಂತಗೊಳಿಸಲು ಆಯುರ್ವೇದದಲ್ಲಿ ಶಿರೋಧಾರಾ, ಶಿರೋಭ್ಯಂಗ ಮತ್ತು ಪಾದಾಭ್ಯಂಗವನ್ನು ಹೇಳಲಾಗಿದೆ.
೧. ತೈಲಾಭ್ಯಂಗ : ಉಗುರು ಬೆಚ್ಚಗಿನ ಎಣ್ಣೆಯಿಂದ ದೇಹದ ಪ್ರತಿ ಅಂಗಕ್ಕೆ ಎಣ್ಣೆ ಹಚ್ಚಿ ಮರ್ದನ ಮಾಡುವುದು.
೨. ಪಾದಾಭ್ಯಂಗ : ಕಂಚಿನ ಬಟ್ಟಲಿಂದ ಎರಡೂ ಕಾಲುಗಳ ಅಂಗಾಲುಗಳ ಮರ್ದನ ಮಾಡುವುದು
೩. ಶಿರೋಭ್ಯಂಗ : ಔಷಧಯುಕ್ತ ತೈಲದಿಂದ ತಲೆಗೆ ಮೃದುವಾಗಿ ಮರ್ದನ ಮಾಡುವುದು
೪. ಶಿರೋಧಾರಾ : ಔಷಧಯುಕ್ತ ತೈಲ, ಹಾಲು, ಕಶಾಯ ಮತ್ತು ಮಜ್ಜಿಗೆ ಇತ್ಯಾದಿಗಳಿಂದ ಎರಡೂ ಹುಬ್ಬುಗಳ ನಡುವಿನ ಆಜ್ಞಾಚಕ್ರದ ಮೇಲೆ ಸತತ ಧಾರೆ ಎರೆಯುವುದು.
೫. ಸರ್ವಾಂಗ ಭಾಷ್ಪ ಸ್ವೇದನ : ಪೆಟ್ಟಿಗೆಯಲ್ಲಿ ಮಲಗಿಸಿ ಔಷಧಿಯ ಕಶಾಯದಿಂದ ಸರ್ವಾಂಗಗಳಿಗೆ ಭಾಷ್ಪ ನೀಡಿ ಬೆವರು ಬರಿಸುವುದು.
ಯೋಗಾಭ್ಯಾಸ ಮಾಡುವುದರ ಮಹತ್ವ೧. ದೀರ್ಘಶ್ವಸನ, ಅನು ಲೋಮ-ವಿಲೋಮ, ಓಂಕಾರ, ಭ್ರಾಮರಿ ಇಂತಹ ಪ್ರಾಣಾಯಾಮಗಳು ಪುಪ್ಪುಸದಲ್ಲಿ ಪ್ರಾಣ ವಾಯುವಿನ ಪ್ರವಾಹದ ಕ್ಷಮತೆಯನ್ನು ಹೆಚ್ಚಿಸುತ್ತವೆ. ೨. ಶೀತಲಿ ಶಿತ್ಕರೀ ಈ ಪ್ರಾಣಾಯಾಮಗಳ ಪದ್ಧತಿಯಿಂದ ಶರೀರದಲ್ಲಿನ ಉಷ್ಣತೆಯನ್ನು ಕಡಿಮೆ ಗೊಳಿಸಲಾಗುತ್ತದೆ. ೩. ಭಸ್ತಿಕಾ, ಕಪಾಲಭಾತಿ ಈ ಪ್ರಾಣಾಯಾಮಗಳು ಶರೀರದಲ್ಲಿನ ವಿಷಯುಕ್ತ ದ್ರವ್ಯಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತವೆ. – ಡಾ. ದೀಪಕ ಕೇಸರಕರ |