ಬೆಲ್ಲದ ಸೇವನೆಯಿಂದಾಗುವ ಲಾಭಗಳು

ಅ.ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು (ನೆಲಗಡಲೆ) ಕೊಟ್ಟರೆ ಅವರ ಶಾರೀರಿಕ ವಿಕಾಸವು ಬೇಗನೇ ಆಗಿ ಮೂಳೆಗಳು ಗಟ್ಟಿಯಾಗುತ್ತವೆ: ಬೆಲ್ಲದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸಣ್ಣ ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿಯೇ ಬೆಲ್ಲವನ್ನು ತಿನ್ನಲು ಕೊಡುವುದು ಲಾಭದಾಯಕವಾಗಿದೆ. ಹೆಚ್ಚು ಬೆಲ್ಲ ತಿಂದರೆ ಹುಳಗಳಾಗುವ (ಹೊಟ್ಟೆಯಲ್ಲಿ ಸಣ್ಣ ದೊಡ್ಡ ಜಂತುಗಳಾಗುವ) ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು ಕೊಟ್ಟರೆ ಅವರ ಶಾರೀರಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಮೂಳೆಗಳು ಗಟ್ಟಿಯಾಗಿ ಶರೀರವು ಬಲವಾಗುತ್ತದೆ.

ಆ. ಹೃದಯರೋಗಿಗಳಿಗೆ ‘ಬೆಲ್ಲ’ವು ಉತ್ತಮ ಔಷಧವಾಗಿದೆ ಮತ್ತು ಬೆಲ್ಲದ ಸೇವನೆಯಿಂದ ಹಿಮೋಗ್ಲೋಬಿನ್‌ನ ಪ್ರಮಾಣ ಸರಿಸಮಾನವಾಗುತ್ತದೆ (HFIdMb): ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟ್ಯಾಶಿಯಮ್‌ ಲಾಭದಾಯಕವಾಗಿದೆ. ಇದು ಬೆಲ್ಲದಿಂದ ನೈಸರ್ಗಿಕ ರೀತಿಯಲ್ಲಿ ಸಿಗುತ್ತದೆ. ಇದರ ಅರ್ಥ ವೇನೆಂದರೆ ಹೃದಯರೋಗಿಗಳಿಗೆ ‘ಬೆಲ್ಲ’ವು ಒಂದು ಉತ್ತಮ ಔಷಧಿಯಾಗಿದೆ. ‘ಎನಿಮಿಯಾ’ (ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಪ್ರಮಾಣ ಕಡಿಮೆಯಾಗುವುದು) ಹಾಗೆಯೇ ಅಧಿಕ ರಕ್ತಸ್ರಾವದಿಂದ ರಕ್ತದಲ್ಲಿ ಕಡಿಮೆಯಾದ ಹಿಮೋಗ್ಲೋಬಿನ್‌ ಪ್ರಮಾಣವು ಬೆಲ್ಲದ ಸೇವನೆಯಿಂದ ಸರಿಸಮಾನವಾಗುತ್ತದೆ.

ಇ. ಮಹಿಳೆಯರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಲೋಹತತ್ತ್ವದ ಕೊರತೆಯು ತುಂಬಿ ಬರುತ್ತದೆ: ಮಹಿಳೆಯರಲ್ಲಿ ಸಾಧಾರಣವಾಗಿ ಲೋಹತತ್ತ್ವದ (ಕಬ್ಬಿಣ) ಕೊರತೆಯು ಕಂಡುಬರುತ್ತದೆ. ಮಾಸಿಕ ಸರದಿಯ (ಮುಟ್ಟು) ನೈಸರ್ಗಿಕ ಚಕ್ರದಿಂದ ಈ ಕೊರತೆಯಾಗುತ್ತದೆ. ಅವರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಈ ಕೊರತೆಯು ನೀಗುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣವೂ ಹೆಚ್ಚುವುದರಿಂದ ನಿಃಶಕ್ತಿಯು ಬರುವುದಿಲ್ಲ.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಆಹಾರದ ನಿಯಮ ಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ತ್ರಿಗುಣಗಳ ಪ್ರಕಾರ ಆಹಾರವನ್ನು ಸೇವಿಸುವುದರ ಹಿಂದಿನ ಉದ್ದೇಶ

೧.ಸತ್ತ್ವ: ಶರೀರಧರ್ಮವೆಂದು ಆಹಾರಸೇವನೆಯ ಕರ್ಮಗಳನ್ನು ಮಾಡುವುದು

೨.ರಜ: ಆಹಾರಸೇವನೆಯಿಂದ ಸುಖವನ್ನು ಪಡೆಯುವುದು

೩.ತಮ: ಕೇವಲ ತಿನ್ನುವುದೇ ಜೀವನವೆಂದು ಭಾವಿಸುವುದು ಅಥವಾ ದ್ವೇಷದಿಂದ, ಅಸುರೀ ಭಾವವನ್ನು ಜಾಗೃತವಿಡಲು ಅನ್ನವನ್ನು ಸೇವಿಸುವುದು