Mahakumbh Mela 2025: `ಅಲಹಾಬಾದ್’ನ `ಪ್ರಯಾಗರಾಜ’ ಆದ ಬಳಿಕ ಮೊದಲ ಮಹಾಕುಂಭಮೇಳ !

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ (ಉತ್ತರ ಪ್ರದೇಶ), ಡಿಸೆಂಬರ್ 17 (ಸುದ್ದಿ.) – ‘ಅಲಹಾಬಾದ’ ನಗರದ ಹೆಸರನ್ನು ‘ಪ್ರಯಾಗರಾಜ’ ಎಂದು ಬದಲಾಯಿಸಿದ ನಂತರ, ಈ ವರ್ಷ ಅಂದರೆ ಜನವರಿ 13, 2025 ರಿಂದ ನಡೆಯಲಿರುವ ಮೊದಲ ಮಹಾ ಕುಂಭಮೇಳವಾಗಿದೆ. ‘ಅಲಹಾಬಾದ್’ ನಗರದ ಹೆಸರನ್ನು ಪ್ರಯಾಗರಾಜ  ಎಂದು ಬದಲಾಯಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಅಕ್ಟೋಬರ್ 16 ,2018 ರಂದು  ನಿರ್ಧರಿಸಿತು. 2019 ರಲ್ಲಿ, ಅರ್ಧಕುಂಭ ಮೇಳ (ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ) ಪ್ರಯಾಗರಾಜ್‌ನಲ್ಲಿ ನಡೆಯಿತು; ಆದರೆ ಈ ಬಾರಿಯ ಕುಂಭಮೇಳ 12 ವರ್ಷಗಳ ನಂತರ ಬರುತ್ತಿರುವ ಅತಿ ದೊಡ್ಡ ಕುಂಭಮೇಳವಾಗಿದೆ. ಈ ಬಾರಿಯ ಮಹಾಕುಂಭಮೇಳಕ್ಕೆ 40 ಕೋಟಿ ಭಕ್ತರು ಆಗಮಿಸಲಿದ್ದಾರೆ ಎಂದು ಆಡಳಿತ ಮಂಡಳಿ ಭವಿಷ್ಯ ನುಡಿದಿದೆ.

443 ವರ್ಷಗಳ ನಂತರ, ಗುಲಾಮಗಿರಿಯ ಸಂಕೇತವು ನಾಶವಾಯಿತು !

ಪ್ರಾಚೀನ ಕಾಲದಿಂದಲೂ ಪ್ರಯಾಗರಾಜನ ಹೆಸರು ‘ಪ್ರಯಾಗ’ ಎಂದಿತ್ತು. ಸುಮಾರು 1575 ರಲ್ಲಿ, ಮೊಘಲ್ ದೊರೆ ಅಕ್ಬರ್ ಪ್ರಯಾಗದ ಹೆಸರನ್ನು ‘ಅಲಹಾಬಾದ್’ ಎಂದು ಬದಲಾಯಿಸಿದನು. ಅಂದಿನಿಂದ ಇದನ್ನು ‘ಅಲಹಾಬಾದ್’ ಎಂದು ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಅದನ್ನು ಬದಲಾಯಿಸಲಿಲ್ಲ. 2017 ರಲ್ಲಿ, ಪ್ರಖರ ಹಿಂದುತ್ವನಿಷ್ಠ ಮತ್ತು ಗೋರಖಪುರ ಮಠದ ಮಹಂತ ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ನಂತರ ಒಂದು ವರ್ಷದಲ್ಲಿ ಅಂದರೆ ಅಕ್ಟೋಬರ್ 16, 2018 ರಂದು ‘ಅಲಹಾಬಾದ್’ ಹೆಸರನ್ನು ‘ಪ್ರಯಾಗರಾಜ’ ಎಂದು ಬದಲಾಯಿಸಿದರು. 443 ವರ್ಷಗಳ ನಂತರ ಗುಲಾಮಗಿರಿಯ ಸಂಕೇತವು ನಾಶವಾಯಿತು. ಆದ್ದರಿಂದ ದೇಶದೆಲ್ಲೆಡೆಯಿಂದ ಬಂದಿರುವ ಸಾಧು-ಸಂತರ ಜತೆಗೆ ಎಲ್ಲ ಹಿಂದೂತ್ವನಿಷ್ಠ ಸಂಘಟನೆಗಳು, ಭಕ್ತರು ಸಮಾಧಾನ ವ್ಯಕ್ತಪಡಿಸಿದರು. ಇದಾದ ಬಳಿಕ ಮೊದಲ ಬಾರಿಗೆ ಮಹಾ ಕುಂಭಮೇಳ ನಡೆಯುತ್ತಿರುವುದರಿಂದ ಸಾಧು-ಸಂತರು, ಹಿಂದುತ್ವನಿಷ್ಠ ಸಂಘಟನೆಗಳ ಜತೆಗೆ ಭಕ್ತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.

ಈ ವರ್ಷದ ಕುಂಭಮೇಳವನ್ನು ‘ಮಹಾ ಕುಂಭಮೇಳ’ ಎಂದು ಏಕೆ ಕರೆಯುತ್ತಾರೆ ?

ಪ್ರಯಾಗರಾಜ್‌ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಈ ಹಿಂದೆ 2013ರಲ್ಲಿ ಪೂರ್ಣಕುಂಭಮೇಳ ನಡೆದಿತ್ತು. ಇಂತಹ 12 ದೊಡ್ಡ ಕುಂಭಮೇಳಗಳು ಮುಗಿದ ನಂತರ ಬರುವ ಕುಂಭಮೇಳವನ್ನು ‘ಮಹಾ ಕುಂಭಮೇಳ’ ಎಂದು ಕರೆಯಲಾಗುತ್ತದೆ. ಪ್ರಯಾಗರಾಜ್‌ನಲ್ಲಿ ಇಂತಹ ಯೋಗ 144 ವರ್ಷಗಳ ನಂತರ ಬರುತ್ತಿದೆ. ಅದಕ್ಕಾಗಿಯೇ ಈ ವರ್ಷದ ಕುಂಭಮೇಳವನ್ನು ‘ಮಹಾ ಕುಂಭಮೇಳ’ ಎಂದು ಕರೆಯಲಾಗುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಯೋಗಿ ಸರಕಾರ ಮತ್ತು ಆಡಳಿತವು ಈ ವರ್ಷದ ಕುಂಭಮೇಳವನ್ನು ಅದ್ಧೂರಿ ಮತ್ತು ದಿವ್ಯವಾಗಿ ಮಾಡಲು ಟೊಂಕಕಟ್ಟಿ ನಿಂತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಹಿಂದಿನ ಎಲ್ಲಾ ಕುಂಭಮೇಳಗಳನ್ನು ನೀವು ಮರೆತುಬಿಡುವಷ್ಟು, ಈ ವರ್ಷದ ಕುಂಭಮೇಳವು ಅದ್ಧೂರಿ ಮತ್ತು ದೈವಿಕವಾಗಿರುತ್ತದೆ’ ಎಂದು ಹೇಳುವ ಮೂಲಕ ಭಕ್ತರಿಗೆ ಭರವಸೆ ನೀಡಿದ್ದಾರೆ.

ಕೇಂದ್ರ ಸರಕಾರ ರೈಲ್ವೆ ಟಿಕೆಟ್ ಮೇಲಿನ ಹೆಚ್ಚುವರಿ ಶುಲ್ಕವನ್ನು ತೆಗೆದುಹಾಕಿದ ನಂತರದ ಮೊದಲ ದೊಡ್ಡ ಕುಂಭಮೇಳ !

ಪ್ರಯಾಗರಾಜ್ ಇಲ್ಲಿನ ಮಹಾಕುಂಭಮೇಳಕ್ಕೆ ರೈಲ್ವೆ ಟಿಕೆಟ್‌ಗಳ ಮೇಲಿನ ಹೆಚ್ಚುವರಿ ಶುಲ್ಕವನ್ನು (ಹೆಚ್ಚುವರಿ ಶುಲ್ಕ) ತೆಗೆದುಹಾಕಿದ ನಂತರ ಮೊದಲ ದೊಡ್ಡ ಕುಂಭಮೇಳವಾಗಿದೆ. ಆದ್ದರಿಂದ ಹಿಂದೂಗಳಿಗೆ ಈ  ವರ್ಷದ ಕುಂಭಮೇಳಕ್ಕೆ ಬರಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಡಿಸೆಂಬರ್ 12, 2018 ರಂದು ಕೇಂದ್ರ ಸರಕಾರವು ಕೋಟ್ಯಂತರ ಹಿಂದೂಗಳಿಗೆ ರೈಲ್ವೆ ಟಿಕೆಟ್‌ಗಳ ಮೇಲಿನ ಹೆಚ್ಚುವರಿ ಶುಲ್ಕವನ್ನು ತೆಗೆದುಹಾಕುವ ಭರವಸೆ ನೀಡಿತ್ತು. ಅದಕ್ಕೂ ಮೊದಲು ಪ್ರತಿ ಕುಂಭಮೇಳದಲ್ಲಿ ರೈಲ್ವೆ ಇಲಾಖೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿತ್ತು. ಹಾಗಾಗಿ ಹಿಂದೂಗಳು ಕುಂಭಮೇಳಕ್ಕೆ ಬರಲು ಸಾಮಾನ್ಯ ರೈಲ್ವೇ ದರಕ್ಕಿಂತ ಹೆಚ್ಚಿನ ದರವನ್ನು ಪಾವತಿಸಬೇಕಾಗಿತ್ತು. ಇದರ ವಿರುದ್ಧ 2015ರಲ್ಲಿ ನಾಸಿಕ್‌ನಲ್ಲಿ ನಡೆದ ಪೂರ್ಣಕುಂಭಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿ ದೊಡ್ಡ ಪ್ರತಿಭಟನೆ ನಡೆಸಿತ್ತು.