Bangladesh Advisor Meets Hindu Leaders: ಮಹಮ್ಮದ್ ಯೂನುಸ್ ಅವರಿಂದ ಬಾಂಗ್ಲಾದೇಶದ ಧಾರ್ಮಿಕ ನಾಯಕರ ಭೇಟಿ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪ್ರಕರಣ

ಢಾಕಾ – ಇಸ್ಕಾನ್‌ನ ಚಿನ್ಮಯ ಕೃಷ್ಣ ದಾಸ್ ಅವರ ಬಂಧನದ ನಂತರ, ಬಾಂಗ್ಲಾದೇಶದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಇದರಿಂದ, ಬಾಂಗ್ಲಾದೇಶದ ಹಿಂದೂ ಸಮುದಾಯವು ತಮ್ಮ ಭದ್ರತೆ ಬಗ್ಗೆ ಚಿಂತಿತವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನುಸ್ ಅವರು ಧಾರ್ಮಿಕ ನಾಯಕರೊಂದಿಗೆ ಸಂಪರ್ಕಿಸಿದ್ದಾರೆ. ಯೂನುಸ್ ಅವರು ದೇಶದ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲಾ ಧರ್ಮಗಳ ನಾಯಕರ ಸಹಕಾರವನ್ನು ಕೇಳಿದ್ದಾರೆ. ಹಾಗೆಯೇ ಅವರು ಅಲ್ಪಸಂಖ್ಯಾತರಿಗೆ ಭದ್ರತೆ ಭರವಸೆ ನೀಡಿದ್ದಾರೆ. (ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಕಟ್ಟರವಾದಿಗಳಿಂದ ಹಿಂದೂಗಳ ಮೇಲೆ ದಾಳಿ ನಡೆದಿದ್ದು, ಸಂಪೂರ್ಣ ಜಗತ್ತೇ ಈ ಘಟನೆಗಳನ್ನು ನೋಡಿದೆ. ಹೀಗಿರುವಾಗ ಬಾಂಗ್ಲಾದೇಶ ಸರಕಾರದ ಮುಖ್ಯಸ್ಥರಿಂದ ಕೇವಲ ಭರವಸೆ ಮಾತ್ರವಲ್ಲ, ದಾಳಿಕೋರರ ವಿರುದ್ಧ ಕಠಿಣ ಕ್ರಮಗಳನ್ನು ಅಪೇಕ್ಷಿಸುತ್ತಾರೆ ! – ಸಂಪಾದಕರು)

1. ಢಾಕಾದ ‘ಫಾರೆನ್ ಸರ್ವೀಸ್’ ಅಕಾಡೆಮಿಯಲ್ಲಿ ವಿವಿಧ ಧಾರ್ಮಿಕ ಸಮುದಾಯದ ನಾಯಕರೊಂದಿಗೆ ಯೂನುಸ್ ಮಾತನಾಡುತ್ತಾ, ‘ನಮ್ಮಲ್ಲಿ ವಿವಿಧ ಧರ್ಮಗಳಲ್ಲಿ ಕೆಲವೊಂದು ಭೇದಭಾವ ಇರಬಹುದು; ಆದರೆ ನಾವು ಪರಸ್ಪರ ಶತ್ರುಗಳಲ್ಲ. ನಾವು ಎಲ್ಲರೂ ಒಂದೇ ಕುಟುಂಬದ ಸದಸ್ಯರಾಗಿದ್ದೇವೆ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳಿವೆ. ನಮ್ಮ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ.’ ಎಂದು ಹೇಳಿದರು.

2. ಧಾರ್ಮಿಕ ನಾಯಕರೊಂದಿಗೆ ನಡೆದ ಸಭೆಯಲ್ಲಿ ಯೂನುಸ್ ಅವರು ಮಾತನಾಡಿ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ವಿಚಾರವನ್ನು ಪುನಃ ಪುನಃ ಪ್ರಸ್ತಾಪಿಸಲಾಗುತ್ತಿದೆ; ಆದರೆ ವಾಸ್ತವಿಕತೆ ಮತ್ತು ವಿದೇಶಿ ಮಾಧ್ಯಮಗಳ ಪ್ರಚಾರದಲ್ಲಿ ವ್ಯತ್ಯಾಸವಿದೆ ಎಂದು ಹೇಳಿದರು.

3. ಎಲ್ಲರ ಭದ್ರತೆ ಬಗ್ಗೆ ಗಮನ ಸೆಳೆಯುತ್ತ ಯೂನುಸ್ ಮಾತನಾಡಿ, ‘ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳ ಘಟನೆಗಳು ನಡೆದರೆ, ಇಂತಹ ಘಟನೆಗಳ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಕಾನೂನಿಗೆ ಒಪ್ಪಿಸಬೇಕು. ಯಾರಾದರೂ ದೋಷಿಯೆಂದು ಕಂಡು ಬಂದರೆ, ಅವನ ಕೃತ್ಯಕ್ಕೆ ಅವನನ್ನೇ ಜವಾಬ್ದಾರಿಯನ್ನಾಗಿ ಮಾಡಬೇಕು. ಹಾಗೆಯೇ ಇಂತಹ ಘಟನೆಗಳನ್ನು ತಡೆಗಟ್ಟಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.’’ಎಂದು ಹೇಳಿದರು.

4. ಯೂನುಸ್ ಮಾತನಾಡಿ ‘ಪ್ರತಿಯೊಬ್ಬರಿಗೆ ಅವರ ಧರ್ಮವನ್ನು ಅನುಸರಿಸುವ ಹಕ್ಕು ಸಿಗಬೇಕು. ಈ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ ಮತ್ತು ಅವುಗಳನ್ನು ರಕ್ಷಿಸುವುದು ನಮ್ಮ ಕೆಲಸವಾಗಿದೆ.’’ಎಂದು ಹೇಳಿದರು.

ಸಂಪಾದಕೀಯ ನಿಲುವು

ನಾವು ಬಾಂಗ್ಲಾದೇಶಿ ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ ಎಂದು ತೋರಿಕೆಗಾಗಿ ಬಾಂಗ್ಲಾದೇಶ ಸರಕಾರದ ಮುಖ್ಯ ಸಲಹೆಗಾರ ಯೂನುಸ್ ಇಂತಹ ಭೇಟಿಗಳನ್ನು ಮಾಡುತ್ತಿದ್ದಾರೆ. ‘ಈ ರೀತಿ ಮಾಡುವುದರಿಂದ, ಏನೂ ಸಾಧ್ಯವಾಗುವುದಿಲ್ಲ’, ಎಂದು ಹಿಂದೂಗಳು ಅರಿತಿದ್ದಾರೆ !