Bangladesh Govt. Advisor Statement: ‘ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ವಿಶ್ವಸಂಸ್ಥೆಯ ಶಾಂತಿಸೇನೆ ಕಳುಹಿಸಬೇಕಂತೆ!’

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಗೃಹ ಇಲಾಖೆಯ ಸಲಹೆಗಾರರ ಹೇಳಿಕೆ

ಸೌಜನ್ಯ : The Business Standard

ಢಾಕಾ (ಬಾಂಗ್ಲಾದೇಶ) – ವಿಶ್ವ ಸಂಸ್ಥೆಯ ಶಾಂತಿಸೇನೆಯನ್ನು ಬಾಂಗ್ಲಾದೇಶಕ್ಕೆ ಅಲ್ಲ, ಭಾರತಕ್ಕೆ ಕಳುಹಿಸಬೇಕು” ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಗೃಹಸಚಿವಾಲಯದ ಸಲಹೆಗಾರ ಲೆಫ್ಟನಂಟ್ ಜನರಲ್ (ರಿಟೈರ್ಡ್) ಜಹಾಂಗಿರ ಆಲಂ ಚೌಧರಿ ಅವರು ಹೇಳಿದ್ದಾರೆ. ಅವರು ಬಾಂಗ್ಲಾದೇಶದ ನಾರಾಯಣಗಂಜ್‌ನಲ್ಲಿ ನಡೆದ ಒಂದು ಕಾರ್ಯಕ್ರಮದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದಾಳಿಗಳಿಂದ ಅಲ್ಲಿ ಶಾಂತಿಸೇನೆ ನಿಯೋಜಿಸುವಂತೆ  ಬಂಗಾಳದ ಮುಖ್ಯಮಂತ್ರಿಯ ಮಮತಾ ಬ್ಯಾನರ್ಜಿಯವರು ಕೇಳಿದ್ದರು. ಅದಕ್ಕೆ ಉತ್ತರವಾಗಿ ಜಹಂಗಿರ್ ಆಲಂ ಅವರು ಮೇಲಿನ ಹೇಳಿಕೆ ನೀಡಿದ್ದಾರೆ.

‘ಭಾರತದ ವಿರುದ್ಧ ಪ್ರತಿಭಟನೆ ಮಾಡಿರಿ!’(ಅಂತೆ) – ಮಧ್ಯಂತರ ಸರಕಾರದ ಕಾನೂನು ಸಲಹೆಗಾರ ಅಸಿಫ್ ನಝರುಲ

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಕಾನೂನು ಸಲಹೆಗಾರ ಅಸಿಫ್ ನಝರುಲ್ ಮಾತನಾಡಿ, “ಇಂದು ಎಲ್ಲಾ ರಾಜಕೀಯ ಪಕ್ಷಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ನಾವೆಲ್ಲರು ಬಾಂಗ್ಲಾದೇಶದ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಗೌರವವನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಒಮ್ಮತ ಸಿಕ್ಕಿದೆ. ಭಾರತದಿಂದ ಬಾಂಗ್ಲಾದೇಶ ವಿರುದ್ಧ ಹಮ್ಮಿಕೊಂಡಿರುವ ಪ್ರಚಾರಕ್ಕೆ ಉತ್ತರ ನೀಡಲು, ಪ್ರತಿಭಟನೆ, ರಾಜಕೀಯ ಸಭೆಗಳನ್ನು ಅಥವಾ ಭದ್ರತಾ ಸಭೆಗಳನ್ನು ಆಯೋಜಿಸುವ ಪ್ರಸ್ತಾಪವನ್ನು ನೀಡಿದ್ದೇವೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದರಿಂದ ಬಾಂಗ್ಲಾದೇಶೀಯರು ಎಷ್ಟು ಉದ್ಧಟರಾಗಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ ! ಇಂತಹವರನ್ನು ನೆಟ್ಟಗೆಮಾಡಲು ಭಾರತವು ಶಬ್ದಗಳ ಬದಲಿಗೆ ಶಸ್ತ್ರಗಳ ಭಾಷೆ ಬಳಸುವುದು ಈಗ ಅತ್ಯಂತ ಅಗತ್ಯವಾಗಿದೆ. ‘ಹಿಂದೂಗಳ ರಕ್ಷಣೆಗಾಗಿ ಪಾಕಿಸ್ತಾನವನ್ನು ಹೊಸಕಿ ಹಾಕದ ಭಾರತ, ಬಾಂಗ್ಲಾದೇಶವನ್ನಾದರೂ ಹೊಸಕಿ ಹಾಕುವುದೇ?’ ಎನ್ನುವ ಪ್ರಶ್ನೆಗಳು ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತಿವೆ !