ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ ಯೂನೂಸ್ ಅವರ ಹೇಳಿಕೆ
ಢಾಕಾ (ಬಾಂಗ್ಲಾದೇಶ) – ಶೇಖ್ ಹಸೀನಾ ಅವರು ತಮ್ಮ 15 ವರ್ಷದ ಅವಧಿಯಲ್ಲಿ ದೇಶದ ಸರಕಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಸ್ಥಿರತೆಯ ಪುನರ್ ನಿರ್ಮಾಣ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನೂಸ್ ಅವರು ಹೇಳಿದ್ದಾರೆ. ಅವರು “ನಿಕ್ಕೆಇ ಏಶಿಯಾ” ಹೆಸರಿನ ಜಪಾನಿ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. “ಹಸೀನಾರವರ ಪ್ರಕರಣದ ಆಲಿಕೆ ಪೂರ್ಣಗೊಂಡ ಬಳಿಕ ನಾವು ಅಧಿಕೃತವಾಗಿ ಭಾರತದ ಬಳಿ ಅವರನ್ನು ಹಸ್ತಾಂತರುವಂತೆ ಕೋರುತ್ತೇವೆ’ ಎಂದೂ ಅವರು ಹೇಳಿದರು. ಸಧ್ಯ ಶೇಖ್ ಹಸೀನಾ ಭಾರತದಲ್ಲಿ ವಾಸಿಸುತ್ತಿದ್ದಾರೆ. ಯೂನೂಸ್ ಅವರು ಸಧ್ಯ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯನ್ನು ತಿರಸ್ಕರಿಸಿದ್ದಾರೆ. ಯೂನೂಸ್ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದಾಳಿಗಳ ವಿಷಯದಲ್ಲಿ ಭಾರತ ಸರಕಾರದ ಚಿಂತೆ ನಿರಾಧಾರ ಮತ್ತು ಅಪಪ್ರಚಾರವಾಗಿದೆಯೆಂದು ಹೇಳಿದ್ದಾರೆ. (ಇದರಿಂದ ಮೊಹಮ್ಮದ್ ಯೂನೂಸ್ ಅವರ ಮಾನಸಿಕತೆ ಗಮನಕ್ಕೆ ಬರುತ್ತದೆ ! – ಸಂಪಾದಕರು)
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಸಧ್ಯ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ಮಹಮ್ಮದ್ ಯೂನೂಸ್ ಮೇಲೆ ಭಾರತದಲ್ಲಿ ಅಪರಾಧಗಳನ್ನು ದಾಖಲಿಸಿ ಅವರನ್ನು ಹಸ್ತಾಂತರಿಸಲು ಭಾರತವು ಮನವಿ ಮಾಡಬೇಕು ! |