ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿದ್ಯಾರ್ಥಿ ಚಳವಳಿಯ ನಾಯಕ ಮಹ್‌ಫುಜ್ ಆಲಮ್ ನಿಂದ ಭಾರತಕ್ಕೆ ಪುಕ್ಕಟೆ ಪುಕ್ಕಟೆ ಕರೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಜುಲೈ ನಿಂದ ಆಗಸ್ಟ್ ಕಾಲಾವಧಿಯಲ್ಲಿ ನಡೆದ ತಥಾಕಥಿತ ಆಂದೋಲನಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಮುಖ ನಾಯಕ ಮಹ್‌ಫುಜ್ ಆಲಮ್ ಕರೆ ನೀಡಿದ್ದಾನೆ. ಈ ಹಿಂಸಾತ್ಮಕ ಆಂದೋಲನದಿಂದ ಪ್ರಧಾನಿ ಶೇಖ್ ಹಸೀನಾ ಅವರ ಸರಕಾರದ ಪತನಕ್ಕೆ ಕಾರಣವಾಗಿತ್ತು. ಮಹ್‌ಫುಜ್ ಆಲಮ್ ಮಾತನಾಡುತ್ತಾ, ಭಾರತ ಈ ಬಂಡಾಯಕ್ಕೆ ಮಾನ್ಯತೆ ನೀಡಿದರೆ, ಎರಡೂ ದೇಶಗಳ ನಡುವೆ ಹೊಸ ಮಾರ್ಗ ಪ್ರಾರಂಭವಾಗಬಹುದು ಎಂದು ಹೇಳಿದ್ದಾನೆ.
ಮಹ್‌ಫುಜ್ ಆಲಮ್ ಬಾಂಗ್ಲಾದೇಶದ ವಿದ್ಯಾರ್ಥಿ ಚಳವಳಿಯ ಪ್ರಮುಖ ಸದಸ್ಯನಾಗಿದ್ದಾನೆ. ಅವನು ಫೇಸ್‌ಬುಕ್ ಪೋಸ್ಟ್‌ನಲ್ಲಿ, ಭಾರತವು ಈ ಆಂದೋಲನವನ್ನು ಉಗ್ರವಾದ, ಹಿಂದೂವಿರೋಧಿ ಮತ್ತು ಇಸ್ಲಾಮಿಕ್ ಆಂದೋಲನ ಎಂದು ಬಿಂಬಿಸುವ ಪ್ರಯತ್ನ ಮಾಡಿತು. ಈ ಬಂಡಾಯವನ್ನು ಕಡೆಗಣಿಸಿದರೆ ಬಾಂಗ್ಲಾದೇಶಕ್ಕೆ ಹಾನಿಯಾಗಬಹುದು ಮತ್ತು ಅದು ಎರಡು ದೇಶಗಳ ನಡುವಿನ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಭಾರತವು ಈಗ 1975ರ ಕಾಲದಿಂದ ಹೊರಬಂದು ಬಾಂಗ್ಲಾದೇಶದ ಹೊಸ ರಾಜಕೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಆವಶ್ಯಕತೆಯಿದೆ. ಇದು ಒಂದು ಪ್ರಜಾಪ್ರಭುತ್ವದ ಹೋರಾಟವಾಗಿದ್ದು, ಇದು ದೀರ್ಘ ಕಾಲದ ವರೆಗೂ ಮುಂದುವರಿಯಲಿದೆ. ಬಾಂಗ್ಲಾದೇಶದಲ್ಲಿ ಐತಿಹಾಸಿಕ ಪರಿವರ್ತನೆಯ ಸಮಯ ಬಂದಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳ ಹೋರಾಟವಾಗಿದೆ ಎಂದು ಹೇಳಿದ್ದಾನೆ.
🚨 Recognize the uprising in Bangladesh! – Bangladesh Student Movement Leader Mahfuz Alam
A baseless appeal to #India by Mahfuz Alam, a leader of the student movement in #Bangladesh‘s interim government!
👉This is akin to saying, “We will commit murders, and you must… pic.twitter.com/Yi75jRvUjD
— Sanatan Prabhat (@SanatanPrabhat) December 5, 2024
ಸಂಪಾದಕೀಯ ನಿಲುವು‘ನಾವು ಹತ್ಯೆ ಮಾಡುತ್ತೇವೆ ಮತ್ತು ಅದಕ್ಕೆ ನೀವು ಮಾನ್ಯತೆ ನೀಡಬೇಕು’, ಎಂದು ಹೇಳುವಂತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಘಟನೆಯಾಗಿದ್ದು, ಅದು ಭಾರತವನ್ನಷ್ಟೇ ಅಲ್ಲ, ಸಂಪೂರ್ಣ ವಿಶ್ವದ ದೃಷ್ಟಿಕೋನದಿಂದ ತಪ್ಪಾಗಿದೆ. ಆದ್ದರಿಂದ ಇಂತಹ ಕರೆಗಳನ್ನು ಭಾರತವು ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಸಲಹೆ ನೀಡಬೇಕು ! |