Nana Patekar Statement: ರಾಜಕೀಯ ಮಂಡಳಿಯವರು ತಮ್ಮ ಮನೆಯಲ್ಲಿನ ಕನ್ನಡಿ ಒಡೆಯಬೇಕು !

ನಟ ನಾನಾ ಪಾಟೇಕರ್ ಹೇಳಿಕೆ!


ಮುಂಬಯಿ – ನನ್ನ ದೇಹವೇ ನನ್ನ ಆಯುಧ. ಅದು ಸರಿಯಿಲ್ಲದಿದ್ದರೆ, ಹೇಗೆ ಕೆಲಸ ಮಾಡುತ್ತದೆ ? ನಾವು ನಮ್ಮ ವಾಹನವನ್ನು ವ್ಯವಸ್ಥಿತವಾಗಿ ಇಡುತ್ತೇವೆ. ಜಿಮ್‌ಗೆ ಹೋಗಲು ಸಾಧ್ಯವಾಗದವರು ನಿಯಮಿತವಾಗಿ ಸಿಟಪ್‌ಗಳು ಮತ್ತು ಸೂರ್ಯ ನಮಸ್ಕಾರಗಳನ್ನು ಮಾಡಬೇಕು. ನಾನು ಇನ್ನೂ ಆಧುನಿಕ ಜಿಮ್ ನಲ್ಲಿನ ಕನ್ನಡಿಯಲ್ಲಿ ವ್ಯಾಯಾಮದ ನಂತರ ನನ್ನ ದೇಹವನ್ನು ನೋಡುತ್ತೇನೆ. ಕನ್ನಡಿಯಲ್ಲಿ ನೋಡುವಾಗ ಪ್ರತಿಯೊಬ್ಬರೂ ತಮ್ಮ ದೇಹವನ್ನು ಇಷ್ಟಪಡಬೇಕು; ಆದರೆ ರಾಜಕಾರಣಿಗಳು ತಮ್ಮ ಮನೆಯ ಕನ್ನಡಿಗಳನ್ನು ಒಡೆಯಬೇಕು. ಕೆಲವೊಮ್ಮೆ ಬಾಯಾರಿಕೆಯಿಂದ ಅಕಸ್ಮಾತ್ ನೀರು ಕುಡಿಯುವಾಗ ಅದರಲ್ಲಿ ಪ್ರತಿಬಿಂಬವನ್ನು ನೋಡಿದಾಗ, ಓಹ್, ನಾವು ಯಾವಾಗ ಕೋತಿಯಾದೆವು ? ಅವರಿಗೆ ಹೇಗೆ ಗೊತ್ತಿಲ್ಲ ? ಒಂದು ದಿನ ಸಾಯುತ್ತೇನೆ ! ಹೋಗುವುದು ಒಂದೇ ದಿನ, ಎಂದು ನಟ ನಾನಾ ಪಾಟೇಕರ್ ಹೇಳಿದ್ದಾರೆ.