ಆಗರ್ತಲಾ (ತ್ರಿಪುರಾ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ನಂತರ, ಕೋಲಕಾತಾದ ಜೆ.ಎನ್. ರೇ ಆಸ್ಪತ್ರೆಯು ಬಾಂಗ್ಲಾದೇಶದಿಂದ ರೋಗಿಗಳ ಮೇಲೆ ಚಿಕಿತ್ಸೆಯನ್ನು ಮಾಡದಿರುವ ನಿರ್ಣಯವನ್ನು ತೆಗೆದುಕೊಂಡ ಬಳಿಕ ಈಗ ತ್ರಿಪುರಾ ರಾಜಧಾನಿ ಆಗರ್ತಲಾದ ಐ.ಎಲ್.ಎಸ್. ಈ ಖಾಸಗಿ ಆಸ್ಪತ್ರೆಯು ಕೂಡ ಇಂತಹುದೇ ನಿರ್ಣಯವನ್ನು ತೆಗೆದುಕೊಂಡಿದೆ. ಬಾಂಗ್ಲಾದೇಶಿ ನಾಗರಿಕರಿಗೆ ವೈದ್ಯಕೀಯ ಸೇವೆ ನೀಡಬಾರದು ಎನ್ನುವ ಬೇಡಿಕೆಗಾಗಿ ಆಸ್ಪತ್ರೆಯ ಹೊರಗೆ ಹಿಂದೂ ಸಮುದಾಯದಿಂದ ಪ್ರತಿಭಟನೆಗಳು ನಡೆದಿದ್ದವು. ತದನಂತರ ಆಸ್ಪತ್ರೆ ಈ ನಿರ್ಣಯವನ್ನು ತೆಗೆದುಕೊಂಡಿದೆ. ಮಾಹಿತಿಯ ಪ್ರಕಾರ, ಪ್ರತಿ ತಿಂಗಳು ಬಾಂಗ್ಲಾದೇಶದಿಂದ 100 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ.
ಬಾಂಗ್ಲಾದೇಶದಲ್ಲಿ ಭಾರತೀಯ ಬಸ್ಸಿನ ಮೇಲೆ ದಾಳಿ
ಬಾಂಗ್ಲಾದೇಶದ ಬ್ರಾಹ್ಮಣ ಬರಿಯಾ-ವಿಶ್ವ ಮಾರ್ಗದಲ್ಲಿ ಭಾರತೀಯ ಬಸ್ಸಿನ ಮೇಲೆ ಕೆಲವರು ದಾಳಿ ನಡೆಸಿದ್ದಾರೆ. ಈ ಬಸ್ಸು ಅಗರ್ತಲಾದಿಂದ ಬಾಂಗ್ಲಾದೇಶದ ಮೂಲಕ ಕೋಲಕಾತಾಗೆ ಹೋಗುತ್ತಿತ್ತು. ತ್ರಿಪುರಾ ರಾಜ್ಯದ ಸಾರಿಗೆ ಸಚಿವ ಸುಶಾಂತ ಚೌಧರಿ ಅವರು ಈ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಶೀಘ್ರ ಕ್ರಮ ಕೈಕೊಳ್ಳೂವಂತೆ ಕೋರಿದ್ದಾರೆ. ಒಂದು ಟ್ರಕ್ ಬಸ್ಸಿಗೆ ಡಿಕ್ಕಿ ಹೊಡೆಯಿತು, ಅದೇ ಸಮಯಕ್ಕೆ ಬಸ್ಸಿನ ಎದುರಿಗೆ ಒಂದು ರಿಕ್ಷಾ ಬಂದಿತ್ತು. ಈ ಘಟನೆ ನಂತರ ಸ್ಥಳೀಯರು ಭಾರತೀಯ ಪ್ರಯಾಣಿಕರನ್ನು ಬೆದರಿಸಿದರು ಮತ್ತು ಘೋಷಣೆಗಳನ್ನು ಕೂಗಿದರು ಹಾಗೂ ಪ್ರಯಾಣಿಕರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದರು. ಈ ಘಟನೆ ನಂತರ ಬಸ್ಸಿನ ಪ್ರಯಾಣಿಕರು ಭಯಭೀತಗೊಂಡಿದ್ದರು ಎನ್ನುವ ಮಾಹಿತಿಯನ್ನು ಚೌಧರಿಯವರು ನೀಡಿದರು.
ತ್ರಿಪುರಾದ ಮುಖ್ಯಮಂತ್ರಿಯು ಮಾಣಿಕ ಸಾಹಾ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಅವರು ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯ ಈಗ ಸಂಪೂರ್ಣ ಜಗತ್ತು ನೋಡುತ್ತಿದೆ. ತ್ರಿಪುರಾ ಮೂರು ದಿಕ್ಕುಗಳಿಂದ ಬಾಂಗ್ಲಾದೇಶದಿಂದ ಸುತ್ತುವರಿದಿರುವುದರಿಂದ, ಗಡಿ ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಗೆ ಅಂತಾರಾಷ್ಟ್ರೀಯ ಗಡಿಯ ಮೇಲೆ ಕಠಿಣ ನಿಗಾ ಇರಿಸುವಂತೆ ಸೂಚನೆ ನೀಡಿದ್ದಾರೆ.
ಸಂಪಾದಕೀಯ ನಿಲುವುದೇಶದ ಜನತೆ ಏನು ಮಾಡಲು ಪ್ರಾರಂಭಿಸಿದ್ದಾರೆಯೋ, ಅದನ್ನೇ ಈಗ ಭಾರತ ಸರಕಾರವು ಮಾಡುವುದು ಆವಶ್ಯಕವಾಗಿದೆ. ಭಾರತ ಸರಕಾರವು ಈಗ ಪಾಕಿಸ್ತಾನದಂತೆಯೇ ಬಾಂಗ್ಲಾದೇಶದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದು, ಬಾಂಗ್ಲಾದೇಶ ಮೇಲೆ ಒತ್ತಡ ಬೀರುವ ಮೂಲಕ ಹಿಂದುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ! |