SC On Sambhal Masjid Survey : ಸಂಭಲ ಮಸೀದಿಯ ಸಮೀಕ್ಷೆಯ ವರದಿ ಬಯಲು ಮಾಡಬೇಡಿ ! – ಸರ್ವೋಚ್ಚ ನ್ಯಾಯಾಲಯ

  • ಸರ್ವೋಚ್ಚ ನ್ಯಾಯಾಲಯದಿಂದ ದಿವಾಣಿ ನ್ಯಾಯಾಲಯಕ್ಕೆ ಆದೇಶ

  • ಜನವರಿ 6 ರಂದು ಸರ್ವೋಚ್ಚ ನ್ಯಾಯಾಲಯ ಮುಂದಿನ ವಿಚಾರಣೆ ನಡೆಸಲಿದೆ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ಉತ್ತರಪ್ರದೇಶದ ಸಂಭಲನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವರದಿಯನ್ನು ಬಯಲು ಮಾಡದಂತೆ ದಿವಾಣಿ ನ್ಯಾಯಾಲಯಕ್ಕೆ ಆದೇಶಿಸಿದೆ. ವಿಶೇಷವೆಂದರೆ, ಸಮೀಕ್ಷೆಯ ತಂಡವು ವರದಿಯನ್ನು ಇನ್ನೂ ಸಲ್ಲಿಸಿಲ್ಲ. ನ್ಯಾಯಾಲಯವು ಈ ತಂಡಕ್ಕೆ ಮುಚ್ಚಿದ ಲಕೋಟೆಯೊಳಗೆ ವರದಿಯನ್ನು ಸಲ್ಲಿಸಲು ಹೇಳಿದೆ. ‘ಜನವರಿ 8 ರ ವರೆಗೆ ಈ ಪ್ರಕರಣದ ಕುರಿತು ಯಾವುದೇ ಕ್ರಮ ಕೈಗೊಳ್ಳಬೇಡಿ’, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ‘ಸಂಭಲನಲ್ಲಿ ಶಾಂತಿ ಅಗತ್ಯವಿದೆ’, ಎಂದು ನ್ಯಾಯಾಲಯವು ಈ ಆದೇಶದ ಹಿನ್ನೆಲೆಯನ್ನು ಸ್ಪಷ್ಟಪಡಿಸಿದೆ. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 6, 2024 ರಂದು ನಡೆಸಲಿದೆ. ಅದೇ ಸಮಯದಲ್ಲಿ ಮಸೀದಿ ಸಮಿತಿಗೆ ದಿವಾಣಿ ನ್ಯಾಯಾಲಯದ ಆದೇಶದ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅಪೀಲ್‌ಗೆ ಅವಕಾಶ ನೀಡಿದೆ. ಶಾಹಿ ಮಸೀದಿಯು ಪ್ರಾಚೀನ ಹರಿಹರ ದೇವಸ್ಥಾನವಾಗಿದೆಯೆಂದು ಹಿಂದೂಗಳ ಹೇಳಿಕೆಯಾಗಿದ್ದು, ಅವರು ಇದಕ್ಕಾಗಿ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದೇ ಕಾರಣದಿಂದ ನ್ಯಾಯಾಲಯವು ಸಮೀಕ್ಷೆಯ ಆದೇಶವನ್ನು ಹೊರಡಿಸಿತ್ತು.

೧. ದಿವಾಣಿ ನ್ಯಾಯಾಲಯದ ಆದೇಶದಂತೆ, ನ್ಯಾಯವಾದಿ ಆಯುಕ್ತ ರಮೇಶ ಸಿಂಗ ರಾಘವ ಅವರ ನೇತೃತ್ವದಲ್ಲಿ ಈ ಮಸೀದಿಯ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಬಗ್ಗೆ ನ್ಯಾಯವಾದಿ ರಾಘವ ಅವರು ನವೆಂಬರ್ 24 ರಂದು ಸಮೀಕ್ಷೆಯ ಸಮಯದಲ್ಲಿ ಹಿಂಸಾಚಾರ ಸಂಭವಿಸಿತು. ಆದ್ದರಿಂದ ವರದಿ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

೨. ಜಾಮಾ ಮಸೀದಿಯ ಪರ ನ್ಯಾಯವಾದಿ ಶಕೀಲ್ ಅಹ್ಮದ್ ಅವರು ಮಾತನಾಡಿ, ನಾವು ನ್ಯಾಯಾಲಯದಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆದಿದ್ದೇವೆ. ಇಂದು ಸಮೀಕ್ಷೆಯ ವರದಿ ಸಲ್ಲಿಸಲಾಗಿಲ್ಲ. ಮಸೀದಿಯಲ್ಲಿ ಇನ್ನುಮುಂದೆ ಸಮೀಕ್ಷೆ ನಡೆಯುವುದಿಲ್ಲ. ದಿವಾಣಿ ನ್ಯಾಯಾಲಯವು ಈಗ ಈ ಪ್ರಕರಣದ ವಿಚಾರಣೆಯನ್ನು ಜನವರಿ 8, 2024 ರಂದು ನಡೆಸಲಿದೆ. ಸಮೀಕ್ಷೆಯ ವರದಿ ಯಾವ ದಿನಾಂಕದ ವರೆಗೆ ಸಲ್ಲಿಸಬೇಕೆಂದು ನ್ಯಾಯಾಲಯವು ಕೆಲವು ಕಾಲಾವಧಿಯ ಬಳಿಕ ನಿಗದಿಪಡಿಸಲಿದೆ.

೩. ಶುಕ್ರವಾರದ ನಮಾಜ್ ಹಿನ್ನೆಲೆಯಲ್ಲಿ ಸಂಭಲ ನಗರದಲ್ಲಿ ಬೃಹತ ಪೊಲೀಸ ಬಂದೋಬಸ್ತು ನಿಯೋಜಿಸಲಾಗಿತ್ತು. ಈ ಹಿಂದೆ ಪೊಲೀಸ್ ಆಯುಕ್ತ ಅಂಜನೇಯ ಕುಮಾರ್ ಸಿಂಗ್ ಅವರು, “ಪ್ರತಿಯೊಬ್ಬರೂ ಸ್ಥಳೀಯ ಮಸೀದಿಗಳಲ್ಲಿ ನಮಾಜ್ ಪಠಣ ಮಾಡುವರು. ಹೊರಗಿನ ಜನರು ಇಲ್ಲಿ ಪ್ರವೇಶಿಸದಂತೆ ನಾವು ಗಮನವಿಟ್ಟಿದ್ದೇವೆ.

೪. ಸಂಭಲನ ಹಿಂಸಾಚಾರದ ತನಿಖೆಗಾಗಿ ರಾಜ್ಯ ಸರಕಾರವು 3 ಸದಸ್ಯರ ನ್ಯಾಯಾಂಗ ತನಿಖಾ ಆಯೋಗವನ್ನು ಸ್ಥಾಪಿಸಿದೆ. ಈ ಆಯೋಗವು 2 ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.

ಜಮಿಯತ ಉಲಮಾ-ಎ-ಹಿಂದ್ ನಿಂದ ಹಿಂಸಾಚಾರದಲ್ಲಿ ಸಾವಿಗೀಡಾದ ಮುಸ್ಲಿಂಗಳ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳನ್ನು ನೀಡಲಿದೆ ಜಮಿಯತ ಉಲಮಾ-ಎ-ಹಿಂದ್ ಸಂಘಟನೆಯ ಅಧ್ಯಕ್ಷ ಮೌಲಾನಾ (ಇಸ್ಲಾಮ್ ಅಭ್ಯಾಸಕ) ಮಹಮೂದ ಮದನಿ ಅವರು ಹಿಂಸಾಚಾರದಲ್ಲಿ ಸಾವಿಗೀಡಾದ ೫ ಮುಸ್ಲಿಂ ಯುವಕರನ್ನು ‘ಶಹೀದ’ (ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿರುವವ)ಎಂದು ವರ್ಣಿಸಿದರು ಮತ್ತು ಅವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳನ್ನು ನೀಡಲು ಘೋಷಿಸಿದ್ದಾರೆ. (ಜಿಹಾದಿ ಭಯೋತ್ಪಾದನೆಗೆ ಸಂಬಂಧಿಸಿದವರನ್ನು ಬೆಂಬಲಿಸುವ, ಹಾಗೂ ಹಿಂಸಾಚಾರವನ್ನು ಪ್ರಚೋದಿಸುವವರನ್ನು ಬೆಂಬಲಿಸುವ ಜಮಿಯತ-ಉಲಮಾ-ಎ-ಹಿಂದ್ ಯಾವಾಗಲೂ ಹಣಕಾಸು ನೆರವು ನೀಡುತ್ತದೆ, ಈ ಹಣವು ಹಲಾಲ್ ಜಿಹಾದ್ ಮೂಲಕ ಸಿಗುತ್ತದೆಯೆಂದು ಹೇಳಲಾಗುತ್ತಿದೆ ಎನ್ನುವುದನ್ನು ಗಮನದಲ್ಲಿಡಬೇಕು ! – ಸಂಪಾದಕರು)