Bangladesh Court Rejects ISKON Ban : ಇಸ್ಕಾನ್ ಅನ್ನು ನಿಷೇಧಿಸಲು ಬಾಂಗ್ಲಾದೇಶದ ಉಚ್ಚನ್ಯಾಯಾಲದಿಂದ ನಿರಾಕರಣೆ

ಢಾಕಾ (ಬಾಂಗ್ಲಾದೇಶ) – ಇಸ್ಕಾನ್ ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಬಾಂಗ್ಲಾದೇಶದ ಉಚ್ಚನ್ಯಾಯಾಲಯವು ವಜಾಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯದ ವಕೀಲ ಮೊನಿರುಜ್ಜಮನ್ ಅವರು ಈ ಅರ್ಜಿಯನ್ನು ದಾಖಲಿಸಿದ್ದರು. ಅವರು ಚಿತ್ತಗಾಂವ್ ಮತ್ತು ರಂಗ್‌ಪುರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ಚಿನ್ಮಯ್ ಪ್ರಭು ಇವರ ಬಂಧನದ ನಂತರ ಹಿಂದೂಗಳಿಂದ ನಡೆದ ಪ್ರತಿಭಟನೆಯಲ್ಲಿ ವಕೀಲ ಸೈಫುಲ್ ಹತ್ಯೆಯಾದ ಕಾರಣ ಇಸ್ಕಾನ್ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಲಾಗಿತ್ತು. (ಹಿಂದೂಗಳ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಜಮಾತ್-ಎ-ಇಸ್ಲಾಮಿ ಮತ್ತು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಕಾರ್ಯಕರ್ತರಿಂದ ಹಲ್ಲೆ ನಡೆಯುತ್ತಿದೆ. ಆದ್ದರಿಂದ ಈ ಎರಡರ ಮೇಲೆ ನಿಷೇಧ ಹೇರಲು ಏಕೆ ಬೇಡಿಕೆ ಮಾಡಲಾಗುತ್ತಿಲ್ಲ ? – ಸಂಪಾದಕರು)

ಸರಕಾರವು ನ್ಯಾಯಾಲಯದಲ್ಲಿ ಏನು ಹೇಳಿತು ?

ವಿಚಾರಣೆಯ ಆರಂಭದಲ್ಲಿ ಡೆಪ್ಯುಟಿ ಅಟಾರ್ನಿ ಜನರಲ್ ಅಸಾದುದ್ದೀನ್ ಅವರು ನ್ಯಾಯಾಲಯಕ್ಕೆ ಹಿಂಸಾಚಾರದ ಪ್ರಕರಣದಲ್ಲಿ ಸರಕಾರವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇಲ್ಲಿಯವರೆಗೆ 3 ಪ್ರಕರಣಗಳನ್ನು ನೊಂದಾಯಿಸಲಾಗಿದೆ. ಒಂದು ಪ್ರಕರಣದಲ್ಲಿ 13 ಜನರು ಆರೋಪಿಗಳು, ಮತ್ತೊಂದು ಪ್ರಕರಣದಲ್ಲಿ 14 ಮತ್ತು ಇನ್ನೊಂದು ಪ್ರಕರಣದಲ್ಲಿ 49 ಜನರು ಆರೋಪಿಗಳಾಗಿದ್ದಾರೆ. ಇದುವರೆಗೆ 33 ಜನರನ್ನು ಬಂಧಿಸಲಾಗಿದೆ. ಸಿಸಿಟಿವಿಯ ಮೂಲಕ ಇನ್ನೂ 6 ಜನರನ್ನು ಗುರುತಿಸಲಾಗಿದೆ. ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿಗಳ ವಿಚಾರಣೆ ಬಳಿಕ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಈ ಕುರಿತು ನ್ಯಾಯಾಲಯವು, ಸರಕಾರದ ಈ ನಿರ್ಧಾರದಿಂದ ನಮಗೆ ಸಮಾಧಾನ ಇದೆ. ಸರಕಾರ ಮೊದಲ ಆದ್ಯತೆ ಮೇಲೆ ಕೆಲಸ ಮಾಡುತ್ತಿದೆ. ಸರಕಾರದ ಕ್ರಮದಿಂದ ನಾವು ಸಮಾಧಾನ ಹೊಂದಿದ್ದೇವೆ ಮತ್ತು ಸರಕಾರದ ಬದ್ಧತೆಯ ಮೇಲೆ ನಮಗೆ ವಿಶ್ವಾಸ ಇದೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮದ ಜನರು ತುಂಬಾ ಸೌಹಾರ್ದ ಮತ್ತು ಸ್ನೇಹಪರರಾಗಿದ್ದಾರೆ. ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ಅರ್ಜಿದಾರರು ಆತಂಕ ಪಡಬಾರದು ಎಂದು ಹೇಳಿದೆ.

ನ್ಯಾಯಾಲಯವು ಈ ವೇಳೆ ಬಾಂಗ್ಲಾದೇಶ ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ. ನ್ಯಾಯಾಲಯವು, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸರಕಾರ ಜಾಗರೂಕರಾಗಿರುವುದು ಮತ್ತು ಬಾಂಗ್ಲಾದೇಶದಲ್ಲಿ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಣೆ ಮಾಡುವುದು ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದೆ.