ಜೋಧಪುರದಲ್ಲಿ ಮುಸಲ್ಮಾನನಿಂದ ಹಿಂದೂ ಮಹಿಳೆಯ ಹತ್ಯೆ ಮಾಡಿ 6 ತುಂಡುಗಳನ್ನಾಗಿ ಮಾಡಿದ!

  • ಶವವನ್ನು ಮನೆಯ ಹತ್ತಿರದಲ್ಲೇ ಹೂತಿಟ್ಟನು

  • ಕೊಲೆಯ ಹಿಂದಿನ ಕಾರಣ ಅಸ್ಪಷ್ಟ

ಜೋಧಪುರ (ರಾಜಸ್ಥಾನ) – 3 ದಿನಗಳ ಹಿಂದೆ ನಾಪತ್ತೆಯಾಗಿದ್ದ 50 ವರ್ಷದ ಅನಿತಾ ಚೌಧರಿಯನ್ನು 6 ತುಂಡುಗಳನ್ನಾಗಿ ಮಾಡಿರುವ ಶವ ಕಂಡು ಬಂದಿದೆ. ಒಂದು ಪ್ಲಾಸ್ಟಿಕ ಚೀಲದಲ್ಲಿ ಈ ತುಂಡುಗಳು ಪತ್ತೆಯಾಗಿವೆ. ಆರೋಪಿ ಗುಲಾಮುದ್ದೀನ ಉರ್ಫ ಗುಲ್ ಮಹಮ್ಮದನು ತನ್ನ ಮನೆಯ ಹತ್ತಿರದಲ್ಲಿಯೇ ಮಹಿಳೆಯ ಶವವನ್ನು ಹೂತಿಟ್ಟಿದ್ದನು. ಪೊಲೀಸರು ಗುಲ್ ಮಹಮ್ಮದನನ್ನು ಹುಡುಕುತ್ತಿದ್ದಾರೆ.

ಅನಿತಾ ಚೌಧರಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಇಲ್ಲಿಂದ ಅವಳು ಅಕ್ಟೋಬರ್ 28 ರಂದು ನಾಪತ್ತೆಯಾಗಿದ್ದಳು. ಇಲ್ಲಿಯೇ ಗುಲ್ ಮೊಹಮ್ಮದನ ಅಂಗಡಿಯಿದೆ. ಇಬ್ಬರಿಗೂ ಪರಸ್ಪರ ಪರಿಚಯವಿತ್ತು. ಪೊಲೀಸರು ಈ ಪ್ರಕರಣದಲ್ಲಿ ಗುಲ ಮಹಮ್ಮದನ ಮನೆಗೆ ಹೋದಾಗ ಅವನು ಅಲ್ಲಿಂದ ಪರಾರಿಯಾಗಿರುವುದು ಕಂಡು ಬಂದಿತು. ಪೊಲೀಸರು ಆತನ ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ, ಅನಿತಾಳ ಕೊಲೆ ಗುಲ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೆ ಆಕೆಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಮನೆಯ ಹಿಂದೆ ಹೂತಿರುವುದಾಗಿ ಹೇಳಿದಳು. ತದನಂತರ ಪೊಲೀಸರು ಬುಲ್ಡೋಜರ ಕರೆಸಿ ಮನೆಯ ಹಿಂದೆ 12 ಅಡಿ ಆಳದ ಗುಂಡಿಯನ್ನು ತೋಡಿದಾಗ ಅನಿತಾಳ ಮೃತದೇಹ ಕಂಡು ಬಂದಿತು. ಹತ್ಯೆಯ ಹಿಂದಿನ ಕಾರಣ ಇದುವರೆಗೂ ತಿಳಿದು ಬಂದಿಲ್ಲ.

ಸಂಪಾದಕೀಯ ನಿಲುವು

ಮುಸಲ್ಮಾನರಿಂದ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಈ ರೀತಿಯ ಹತ್ಯೆಯನ್ನು ನೋಡಿದರೆ, ಇಂತಹ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಿ, ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡುವ ಆವಶ್ಯಕತೆಯಿದೆಯೆಂದು ಜನತೆಗೆ ಅನಿಸುವುದು !