ಮುಸಲ್ಮಾನರ ಮನೆಯ ಮೇಲೆ ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ
ಹಾವೇರಿ – ಹಾವೇರಿ ಜಿಲ್ಲೆಯಲ್ಲಿನ ಕಡಾಕೋಳ ಗ್ರಾಮದಲ್ಲಿನ ಹಿಂದುಗಳ ಮನೆಗಳು, ಭೂಮಿ ಮತ್ತು ದೇವಸ್ಥಾನಗಳನ್ನು ವಕ್ಫ್ ಬೋರ್ಡ್ ವಶಕ್ಕೆ ಪಡೆದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳಿಗೆ ದೊರೆತಿರುವ ಮಾಹಿತಿಯ ಪ್ರಕಾರ, ಗ್ರಾಮದಲ್ಲಿ ಮುಸಲ್ಮಾನರೇ ಇಲ್ಲಿಯ ಹಿಂದುಗಳ ಭೂಮಿ ವಕ್ಫ್ ಗೆ ನೀಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಇದರಿಂದ ಇಲ್ಲಿ ಹಿಂದುಗಳು ಮತ್ತು ಮುಸಲ್ಮಾನರಲ್ಲಿ ವಾಗ್ವಾದ ನಡೆದು ಕಲ್ಲು ತೂರಾಟದ ಘಟನೆಗಳು ನಡೆದಿದೆ. ಅಕ್ಟೋಬರ್ ೩೦ ರ ತಡರಾತ್ರಿ ಈ ಘಟನೆ ಘಟಿಸಿದೆ.
೧. ಗ್ರಾಮದಲ್ಲಿ ಮುಸಲ್ಮಾನರು ಹನುಮಾನ ದೇವಸ್ಥಾನ ಮತ್ತು ದುರ್ಗಾ ದೇವಸ್ಥಾನದ ಪರಿಸರದ ಭೂಮಿಯನ್ನು ವಕ್ಫ್ ಭೂಮಿಯಂದು ಘೋಷಿಸುವುದಕ್ಕೆ ಅರ್ಜಿ ದಾಖಲಿಸಿದ್ದಾರೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಇದರ ನಂತರ ಗ್ರಾಮದಲ್ಲಿನ ಹಿಂದುಗಳು ಗ್ರಾಮದ ಮಹಮ್ಮದ್ ರಫಿನ ಬಳಿ ವಿಚಾರಣೆ ನಡೆಸಿದಾಗ ವಾದವಾಯಿತು. ಅದರ ನಂತರ ಜನರೇ ಮಹಮ್ಮದ್ ರಫಿನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು, ಒಂದು ಬೈಕ್ ಸುಟ್ಟು ಹಾಕಲಾಯಿತು. ಈ ಕಲ್ಲು ತೂರಾಟದಲ್ಲಿ ೫ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದಲ್ಲಿ ರಿಸರ್ವ್ ಪೊಲೀಸರ ಪಡೆ ಕೂಡ ನೇಮಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸುಮಾರು ೩೨ ಜನರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಬಹಳಷ್ಟು ಜನರು ಹಿಂದುಗಳಾಗಿರುವುದು ಎಂದು ಹೇಳಲಾಗಿದೆ.
೨. ಗ್ರಾಮದಲ್ಲಿನ ಹಿಂದುಗಳು ಭೂಮಿಯ ನೋಂದಣಿ ಬದಲಾಯಿಸಲಾಗಿದೆ ಎಂದೂ ಸಹ ಆರೋಪ ಮಾಡಿದ್ದಾರೆ. ರಾಜ್ಯದ ವಕ್ಫ್ ವ್ಯವಹಾರ ಸಚಿವ ಜಮೀರ್ ಅಹಮದ್ ಇವರ ಆದೇಶದ ನಂತರ ಭೂಮಿಯ ನೋಂದಣಿ ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ. ಅದಕ್ಕಾಗಿ ಆದೇಶ ಕೂಡ ನೀಡಲಾಗುತ್ತು. ಗ್ರಾಮದಲ್ಲಿನ ಹಿಂದುಗಳಿಗೆ ತಮ್ಮ ಮನೆಗಳು ಕೂಡ ವಕ್ಫ್ ನಿಯಂತ್ರಣಕ್ಕೆ ಹೋಗುವುದೇನೋ ಎಂಬ ಭಯ ಕಾಡುತ್ತಿದೆ.
೩. ವಕ್ಫ್ ಬೋರ್ಡ್ ನೀಡಿರುವ ಪಟ್ಟಿಯು ಪರಿಶೀಲಿಸಿ ವರದಿ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದ್ದು ಇದರಿಂದ ವಕ್ಫ್ ಯಾವುದೇ ಆಸ್ತಿಪಾಸ್ತಿ ಇಲ್ಲವೆಂದು ಸರಕಾರವು ಹೇಳಿದೆ.
೪. ಈ ಪ್ರಕರಣದ ನಂತರ ಸಚಿವ ಜಮೀರ್ ಅಹ್ಮದ್ ಇವರು, ಕಡಾಕೋಳ ಗ್ರಾಮದಲ್ಲಿನ ವಿವಾದ ದುಃಖಕರವಾಗಿದ್ದು ವಕ್ಫ್ ಜನರ ಭೂಮಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
೫ . ಭಾಜಪವು, ಕಾಂಗ್ರೆಸ್ಸಿನವರು ಮುಸಲ್ಮಾನರ ಓಲೈಕೆಗಾಗಿ ವಕ್ಫ್ ಬೋರ್ಡ್ ಗೆ ಭೂಮಿ ವಶಕ್ಕೆ ಪಡೆಯಲು ಪ್ರೋತ್ಸಾಹ ನೀಡಿರುವ ಆರೋಪ ಮಾಡಲಾಗಿದೆ. ಹಾವೇರಿಯ ಭಾಜಪದ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಕ್ಫ್ ವಿಷಯದಲ್ಲಿ ಪ್ರಸಾರ ಮಾಡಿರುವ ನೋಟಿಸಗಳು ತಕ್ಷಣ ಹಿಂಪಡೆಯಬೇಕೆಂದು, ಹೇಳಿದ್ದಾರೆ.
ಜಮೀರ್ ಅಹಮದ್ ಅಧಿಕಾರಿಗಳಿಗೆ ಅಮಾಯಕ ಹಿಂದುಗಳ ವಿರುದ್ಧ ಕ್ರಮ ಕೈಗೊಳ್ಳಲು ಅನಿವಾರ್ಯಗೊಳಿಸುತ್ತಿದ್ದಾರೆ ! – ಕೇಂದ್ರ ಸಚಿವ ಪ್ರಲ್ಹಾದ ಜೋಶಿಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇವರು, ಹಾವೇರಿ ಜಿಲ್ಲಾ ಪಂಚಾಯತ ಕಾರ್ಯಕಾರಿ ಅಧಿಕಾರಿಯು ಹನುಮಾನ ದೇವಸ್ಥಾನ ಮತ್ತು ದುರ್ಗಾದೇವಸ್ಥಾನ ಇವುಗಳನ್ನು ನಿಯಂತ್ರಣಕ್ಕೆ ಪಡೆದುಕೊಳ್ಳುವಂತೆ ಆದೇಶ ನೀಡಲಾಗಿದೆ. ನೆನ್ನೆ ವಕ್ಫ್ ಬೋರ್ಡಿನ ಸದಸ್ಯ ಇಲ್ಲಿ ದೇವಸ್ಥಾನ ಹಿಡಿತಕ್ಕೆ ಪಡೆಯಲು ಹೋಗಿರುವಾಗ ಅದಕ್ಕೆ ಜನರು ವಿರೋಧಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಮತ್ತು ೬೦ ರಿಂದ ೭೦ ವರ್ಷದಿಂದ ಇಲ್ಲಿ ವಾಸಿಸುವ ಸ್ಥಳೀಯ ಹಿಂದುಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅವರಿಗೆ (ವಕ್ಫ್ ಗೆ) ದೇವಸ್ಥಾನಗಳನ್ನು ಅಧಿಕಾರಕ್ಕೆ ಪಡೆಯುವುದಿದೆ. ಸ್ಥಳೀಯ ಜನರನ್ನು ನಿರಾಶ್ರಿತರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಸರಕಾರದ ಮತ್ತು ವಿಶೇಷವಾಗಿ ಪಂಚಾಯತಿಯ ಈ ಕೃತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಜಮೀರ್ ಅಹಮದ್ ಅಧಿಕಾರಿಗಳಿಗೆ ಅಮಾಯಕ ಹಿಂದುಗಳ ಮೇಲೆ ಕ್ರಮ ಕೈಗೊಳ್ಳಲು ಅನಿವಾರ್ಯಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ. |
ಸಂಪಾದಕೀಯ ನಿಲುವುವಕ್ಫ್ ಕಾನೂನು ರದ್ದು ಪಡಿಸುವುದು ಎಷ್ಟು ಆವಶ್ಯಕವಾಗಿದೆ, ಇದು ಪ್ರತಿದಿನ ಬೆಳಕಿಗೆ ಬರುವ ಇಂತಹ ಘಟನೆಗಳಿಂದ ಅದರ ತೀವ್ರತೆ ಅರಿವಿಗೆ ಬರುತ್ತಿದೆ. ಈಗ ಹಿಂದುಗಳು ಕೇಂದ್ರ ಸರಕಾರಕ್ಕೆ ವಕ್ಫ್ ಕಾನೂನಿನಲ್ಲಿ ಬದಲಾವಣೆ ಮಾಡುವ ಬದಲು ಅದನ್ನು ರದ್ದು ಪಡಿಸಲು ಒತ್ತಡ ನಿರ್ಮಾಣ ಮಾಡುವ ಆವಶ್ಯಕತೆ ಉಂಟಾಗಿದೆ ! |