‘ಬ್ರಿಟನ್‌ನಲ್ಲಿ ಹಿಂದುತ್ವದ ಚಳುವಳಿಯ ಕೆಲಸ ಮಾಡುತ್ತಿರುವ ವಿಹಿಂಪ, ಚಿನ್ಮಯ್ ಮಿಷನ್ ಇತ್ಯಾದಿ ಸಂಘಟನೆ ಗಳೊಂದಿಗಿನ ಸಂಬಂಧ ಮುರಿಯಿರಿ !’

ಅಮೇರಿಕಾದ ‘ಹಿಂದೂ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯಿಂದ ಲಂಡನ್ನಿನ ಮೇಯರ್ ಗೆ ಪತ್ರ !

ಲಂಡನ್ (ಬ್ರಿಟನ್) – ಇಂಗ್ಲೆಂಡಿನ ರಾಜಧಾನಿ ಲಂಡನ್ ನಲ್ಲಿ ದೀಪಾವಳಿ ಆಚರಣೆ ಕುರಿತು ಅಮೆರಿಕದ ‘ಹಿಂದೂ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿದೆ. ಈ ಸಂಸ್ಥೆಯ ನಿರ್ದೇಶಕ ರಾಜೀವ್ ಸಿನ್ಹಾ ಅವರು ಲಂಡನ್ ನ ಮೇಯರ್ ಸಾದಿಕ್ ಖಾನ್ ಅವರಿಗೆ ಪತ್ರ ಬರೆದು ವಿಶ್ವ ಹಿಂದೂ ಪರಿಷತ್, ಬಿ.ಎ.ಪಿ.ಎಸ್. (ಬೋಚಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ), ಚಿನ್ಮಯ ಮಿಷನ್ ಇತ್ಯಾದಿ ಹಿಂದೂ ಸಂಘಟನೆಗಳೊಂದಿಗಿರುವ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಹೇಳಿದೆ. ಅಕ್ಟೋಬರ್ 27 ರಂದು ಲಂಡನ್‌ನ ಟ್ರಾಫಲಗರ್ ಸ್ಕ್ವೇರ್‌ನಲ್ಲಿ ಈ ಹಿಂದೂ ಸಂಘಟನೆಗಳು ದೀಪಾವಳಿ ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ ‘ಹಿಂದೂ ಫಾರ್ ಹ್ಯೂಮನ್ ರೈಟ್ಸ್’ ಆಕ್ರೋಶ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.

ಹಿಂದುತ್ವನಿಷ್ಠೆ ಮಹಿಳೆ ಸುಹಾಗ್ ಶುಕ್ಲಾ ಅವರು ಈ ಸಂಘಟನೆಯು ಸಾದಿಕ್ ಖಾನ್ ಅವರಿಗೆ ಬರೆದ ಪತ್ರವನ್ನು ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ವಿಹಿಂಪ, ಚಿನ್ಮಯ ಮಿಷನ್ ಮುಂತಾದ ಹಿಂದೂ ಸಂಘಟನೆಗಳು ಭಾರತ ಮತ್ತು ಬ್ರಿಟನ್‌ನಲ್ಲಿ ಹಿಂದುತ್ವದ ಚಳುವಳಿಗಾಗಿ ಮೈತ್ರಿಯಾಗಿ ಕೆಲಸ ಮಾಡುತ್ತಿವೆ ಎಂದು ಸಂಘಟನೆಯು ಹೇಳಿಕೊಂಡಿದೆ.

ಸಂಪಾದಕೀಯ ನಿಲುವು

ಅಮೇರಿಕಾದ ಈ ಸಂಘಟನೆ ಹಿಂದೂಗಳ ಹೆಸರಿನಲ್ಲಿ ಸಂಘಟನೆಯನ್ನು ಸ್ಥಾಪಿಸಿ ಹಿಂದೂಗಳ ಮಧ್ಯೆ ಒಡಕನ್ನು ಉಂಟು ಮಾಡುವ ಪ್ರಯತ್ನವನ್ನು ಮಾಡುತ್ತಿದೆ, ಹೀಗೆ ಇದರಿಂದ ಗಮನಕ್ಕೆ ಬರುತ್ತದೆ ! ಈ ಸಂಘಟನೆಯ ಹಿಂದೆ ಭಾರತ ವಿರೋಧಿ ಅಮೆರಿಕ ಸರಕಾರವಿದೆಯೇ? ಇದರ ಅನ್ವೇಷಣೆ ಮಾಡುವುದು ಆವಶ್ಯಕವಾಗಿದೆ !