ದೇವಸ್ಥಾನದಲ್ಲಿರುವ ಇತರೆ ಧಾರ್ಮಿಕ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಲಾಗುವುದು! – ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್. ನಾಯ್ಡು

ಆಂಧ್ರ ಪ್ರದೇಶ ಸರಕಾರದಿಂದ ನೂತನ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಪ್ರಕಟಣೆ

ತಿರುಮಲ (ಆಂಧ್ರಪ್ರದೇಶ) – ಆಂಧ್ರಪ್ರದೇಶ ಸರಕಾರವು ನೂತನ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯನ್ನು ಘೊಷೊಸಿದೆ. ಇದರ ಅಡಿಯಲ್ಲಿ ಬೊಲಿನಾನಿ ರಾಜಗೋಪಾಲ (ಬಿ.ಆರ್.) ನಾಯ್ಡು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ನೂತನ ಮಂಡಳಿಯಲ್ಲಿ ಕರ್ನಾಟಕದಿಂದ 3, ತೆಲಂಗಾಣದಿಂದ 5, ತಮಿಳುನಾಡಿನ 2 ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ತಲಾ 1 ಸದಸ್ಯರಿದ್ದಾರೆ. ನೂತನ ಅಧ್ಯಕ್ಷ ನಾಯ್ಡು ಅವರು ಅಧಿಕಾರ ಸ್ವೀಕರಿಸುತ್ತಾ, ‘ಇತರ ಧರ್ಮದವರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲು ಆದ್ಯತೆ ನೀಡಲಾಗುವುದು’ ಎಂದು ಹೇಳಿದರು. ತಿರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಇತರೆ ಧರ್ಮದ ಸಿಬ್ಬಂದಿಗಳನ್ನು ಕೆಲಸದಿಂದ ಆದಷ್ಟು ಬೇಗನೆ ತೆಗೆದು ಹಾಕಿ, ಅಲ್ಲಿ ಹಿಂದೂ ಸಿಬ್ಬಂದಿಗಳನ್ನು ನೇಮಿಸಲಾಗುವುದೆಂದು ಹೇಳಲಾಗುತ್ತಿದೆ.

ಬಿ.ಆರ್. ನಾಯ್ದು ಮಾತನಾಡಿ, ದೇವಸ್ಥಾನದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಗ್ಗೆ ನಾವು ನನ್ನನ್ನು ಭಾಗ್ಯವಂತಳೆಂದು ತಿಳಿಯುತ್ತೇನೆ. ನಾನು ಇದನ್ನು ನನ್ನ ಜೀವನದಲ್ಲಿನ ಒಂದು ಮಹತ್ವದ ಅವಧಿ ಎಂದು ಪರಿಗಣಿಸುತ್ತೇನೆ. ಮೊದಲಿನ ಸರಕಾರವು ದೇವಸ್ಥಾನದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿದೆ, ನಾನು ಕಳೆದ ಐದು ವರ್ಷಗಳಲ್ಲಿ ಒಮ್ಮೆಯೂ ತಿರುಮಲಕ್ಕೆ ಭೇಟಿ ನೀಡಿಲ್ಲ; ಕಾರಣ ಅಲ್ಲಿ ಪವಿತ್ರತೆ ಇಲ್ಲ. ಮೊದಲು ನಾನು ವರ್ಷದಲ್ಲಿ 5-6 ಬಾರಿ ತಿರುಮಲಕ್ಕೆ ಹೋಗುತ್ತಿದ್ದೆನು, ನಾನು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿದ್ದೇನೆ. ನನ್ನ ಉದ್ದೇಶ ಕೇವಲ ಕೆಲಸ ಮಾಡುವುದಾಗಿದೆ. ಏನಾದರೂ ಸಾಧಿಸುವುದು ನನ್ನ ಉದ್ದೇಶವಾಗಿಲ್ಲ. ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಇತರ ಧರ್ಮದ ಜನರ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ, ಅವರನ್ನು ಬೇರೆ ಇಲಾಖೆಗಳಿಗೆ ಕಳುಹಿಸಬೇಕೋ ಅಥವಾ ಸ್ವಯಂ ನಿವೃತ್ತಿ ನೀಡಬೇಕೋ ಎಂಬುದನ್ನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.