ವಕ್ಫ್ ಮಂಡಳಿಗೆ ಮತ್ತೊಂದು ‘ಕರ್ಮಕಾಂಡ’ !
ಧಾರವಾಡ – ವಕ್ಫ್ ಮಂಡಳಿಯ ಹೆಸರನ್ನು ಭೂದಾಖಲೆಗಳಲ್ಲಿ ಸೇರಿಸಲು ದಾಖಲೆಗಳನ್ನು ಬದಲಾಯಿಸಿದ ಮತ್ತೊಂದು ಪ್ರಕರಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಧಾರವಾಡದ ಉಪ್ಪಿನಬೆಟ್ಟಗೇರಿ ಗ್ರಾಮದಲ್ಲಿ 3.13 ಎಕರೆ ಜಮೀನು ಹೊಂದಿದ್ದ ರೈತ ಮಾಳಪ್ಪ ಮಸೂತಿ ಇವರು 2022ರಲ್ಲಿ ಯಾವುದೇ ಸೂಚನೆ ನೀಡದೆ ಕೃಷಿ ಭೂಮಿ ದಾಖಲೆಗಳಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ ಎಂದು ಆರೋಪಿಸಿದ್ದಾರೆ. ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಸರ್ವೆ ನಂ.29ರ ‘ಆರ್‌ಟಿಸಿ’ ಪ್ರತಿ 2022ರಲ್ಲಿ ಬದಲಾಯಿಸಲಾಗಿದೆ.
ಮಾಳಪ್ಪಾ ಇವರು, ಹಲವು ವರ್ಷಗಳಿಂದ ಈ ಭೂಮಿಯನ್ನು ತಮ್ಮ ಕುಟುಂಬ ಸಾಗುವಳಿ ಮಾಡಿಕೊಂಡು ಬರುತ್ತಿದೆ. ಈ ಭೂಮಿ ಅವರ ಪೂರ್ವಜರ ಭೂಮಿಯಾಗಿದ್ದು, ವಕ್ಫ್ ಇದುವರೆಗೆ ಹಕ್ಕು ಪಡೆದಿರಲಿಲ್ಲ. ಈಗ ‘ಆರ್‌ಟಿಸಿ’ಯಲ್ಲಿ ವಕ್ಫ್ ಹೆಸರು ಇರುವುದರಿಂದ ಇನ್ನೂ 2-3 ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಇಂತಹ ಬದಲಾವಣೆಗಳನ್ನು ಕಂಡಿದ್ದಾರೆ ಎಂದು ದಾವೆ ಮಾಡಿದ್ದಾರೆ.