ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ ನವಾಝರಿಂದ ದೀಪಾವಳಿ ಆಚರಣೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದೊಂದಿಗೆ ಜಗತ್ತಿನಾದ್ಯಂತ ದೀಪಾವಳಿಯನ್ನು ಆಚರಿಸುತ್ತಿರುವಾಗ, ಪಾಕಿಸ್ತಾನದಲ್ಲಿಯೂ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಅಕ್ಟೋಬರ 30ರಂದು ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಮುಖ್ಯಮಂತ್ರಿಗಳಾದ ಮರಿಯಮ ನವಾಝರವರು ಹಿಂದೂ ಮತ್ತು ಸಿಖ್ಖ ಧರ್ಮೀಯರೊಂದಿಗೆ ದೀಪಾವಳಿಯ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮರಿಯಮರವರು ಹಿಂದೂ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಇದಲ್ಲದೇ 1 ಸಾವಿರ 400 ಹಿಂದೂ ಕುಟುಂಬಗಳಿಗೆ ತಲಾ 15 ಸಾವಿರ ರೂಪಾಯಿಗಳ ಡಿ.ಡಿ. ನೀಡಿದರು.

ಮುಖ್ಯಮಂತ್ರಿ ಮರಿಯಮರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜನರನ್ನು ಉದ್ದೇಶಿಸಿ ಮಾತನಾಡಿದ ಮರಿಯಮ, ಅಲ್ಪಸಂಖ್ಯಾತರ ಮೇಲೆ ಯಾರೇ ದೌರ್ಜನ್ಯ ಎಸಗುತ್ತಿದ್ದರೂ, ನಾನು ಸಂತ್ರಸ್ಥರ ಬೆನ್ನೆಲುಬಾಗಿ ನಿಲ್ಲುತ್ತೇನೆ, ಎಂದು ಹೇಳಿದರು.

ನ್ಯೂಯಾರ್ಕನಲ್ಲಿಯೂ ದೀಪಾವಳಿಯ ಆಚರಣೆ

ಅಮೇರಿಕಾದ ಅತಿ ಎತ್ತರದ ‘ಒನ್ ವರ್ಲ್ಡ್ ಟ್ರೇಡ್ ಸೆಂಟರ್’ನಲ್ಲಿ ದೀಪಾವಳಿಯನ್ನು ಆಚರಿಸಲಾಯಿತು. ಈ ಸಮಯದಲ್ಲಿ ‘ಲೈಟ್ ಶೋ’ಗಳನ್ನು ಆಯೋಜಿಸಲಾಗಿತ್ತು. ನ್ಯೂಯಾರ್ಕ್ನಲ್ಲಿರುವ ಭಾರತೀಯ ವಾಣಿಜ್ಯ ರಾಯಭಾರಿ ಕಚೇರಿಯೂ ಈ ಸಮಾರಂಭದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದೆ.

ಭಾರತದಲ್ಲಿರುವ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿಯವರು ದೆಹಲಿಯ ರಾಯಭಾರಿ ಕಚೇರಿಯಲ್ಲಿ ದೀಪಾವಳಿಯನ್ನು ಆಚರಿಸಿದರು. ಈ ಸಮಯದಲ್ಲಿ ಹಿಂದಿ ಚಲನಚಿತ್ರದ ಹಾಡಿಗೆ ಅವರು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ಸಂಪಾದಕೀಯ ನಿಲುವು

ಮರಿಯಮ ನವಾಝರವರು ದೀಪಾವಳಿಯನ್ನು ಆಚರಿಸುವುದರೊಂದಿಗೆ ಪಾಕಿಸ್ತಾನದಲ್ಲಿ ಬಾಕಿ ಉಳಿದಿರುವ ಹಿಂದೂಗಳ ಸಂರಕ್ಷಣೆಗೆ ಪ್ರಯತ್ನಿಸುವುದು ಕೂಡ ಆವಶ್ಯಕವಾಗಿದೆ !