ನೇಪಾಳದ ಹೋಸ ೧೦೦ ರೂಪಾಯಿಯ ನೋಟುಗಳಲ್ಲಿ ಭಾರತದ ಕೆಲವು ಭೂಪ್ರದೇಶಗಳನ್ನು ನೇಪಾಳದಲ್ಲಿ ತೋರಿಸಿದೆ !

ಭಾರತೀಯ ವ್ಯಾಪಾರಿಗಳಲ್ಲಿ ಆತಂಕ !

ನವದೆಹಲಿ – ಭಾರತ ಮತ್ತು ನೇಪಾಳ ಇವರಲ್ಲಿ ಒತ್ತಡ ನಿರ್ಮಾಣವಾಗಲು ಇನ್ನೊಂದು ಕಾರಣ ಬೆಳಕಿಗೆ ಬಂದಿದೆ. ನೇಪಾಳ ತನ್ನ ಹೊಸ ೧೦೦ ರೂಪಾಯಿ ನೋಟ್‌ನಲ್ಲಿನ ನಕ್ಷೆಯಲ್ಲಿ ಗಡಿಯಲ್ಲಿನ ಕೆಲವು ಭಾರತೀಯ ಭೂ ಪ್ರದೇಶ ಕೂಡ ಮುದ್ರಿಸುವುದು ಎಂದು ಹೇಳಲಾಗುತ್ತಿದೆ.

೧. ೧೯೯೦ ರ ದಶಕಗಳಿಂದ ನೇಪಾಳ ಭಾರತದ ಕಾಲಾಪಾನಿ ಕ್ಷೇತ್ರದ ಕುರಿತು ತನ್ನ ದಾವೆ ಮಾಡುತ್ತಿದೆ. ನಿಜವೆಂದರೆ ಕಾಲಾಪಾನಿ ಕ್ಷೇತ್ರ ಪ್ರಾಚೀನ ಕಾಲದಿಂದಲೂ ಭಾರತೀಯ ಭೂಪ್ರದೇಶವೇ ಆಗಿದೆ.

೨. ನೇಪಾಳವು, ಸುಗೌಲಿ ಒಪ್ಪಂದದ ನಂತರ ಕಾಲಾಪಾನಿ ಪ್ರದೇಶ ನೇಪಾಳದಿಂದ ಭಾರತ ಪಡೆದುಕೊಂಡಿದೆ ಎಂದು ದಾವೆ ಮಾಡಿದೆ. ಈಸ್ಟ್ ಇಂಡಿಯಾ ಕಂಪನಿ ಮತ್ತು ಅಂದಿನ ರಾಜ ಮನೆತನದವರಲ್ಲಿ ೧೮೧೬ ರಲ್ಲಿ ಈ ಒಪ್ಪಂದ ನಡೆದಿತ್ತು.

೩. ಭಾರತದ ವಿಭಜನೆಯ ನಂತರ ಅದು ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ನೀಡಿರುವ ಭೂಮಿಯ ಒಂದು ಇಂಚು ಕ್ಷೇತ್ರ ಫಲ ಕೂಡ ಹೆಚ್ಚಿಸಿಲ್ಲ.

೪. ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅದರ ಕೆಲವು ಪ್ರದೇಶ ಕಳೆದುಕೊಂಡ ನಂತರ ಕೂಡ ನೇಪಾಳ ಅನೇಕ ಬಾರಿ ಭಾರತದ ಕುರಿತು ವಿಸ್ತಾರವಾದ ಮತ್ತು ನೇಪಾಳದ ಭೂಪ್ರದೇಶ ಕಬಳಿಸಿದೆ ಎಂದು ಆರೋಪಿಸುತ್ತದೆ.

೫. ಈಗ ನೇಪಾಳಿ ನೋಟ್‌ಗಳಲ್ಲಿ ಭಾರತದ ಕೆಲವು ಪ್ರದೇಶ ತನ್ನದೆಂದು ಮುದ್ರೀರಿಸಿರುವುದರಿಂದ ಜನರ ಮನಸ್ಸಿನಲ್ಲಿ ಮತ್ತು ಸಂಬಂಧದಲ್ಲಿ ಬಿರುಕು ಮೂಡಿಸಬಹುದು ಎಂದು ಗಡಿ ಪ್ರದೇಶದಲ್ಲಿನ ಭಾರತೀಯ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

೬. ನೇಪಾಳ ಇಂತಹ ಪ್ರಚೋದನಕಾರಿ ಕೆಲಸ ಮಾಡಬಾರದು. ಭಾರತ ನೇಪಾಳ ಅಥವಾ ಇತರ ಯಾವುದೇ ನೆರೆಯ ದೇಶದಿಂದ ಒಂದು ಇಂಚು ಜಾಗ ಕೂಡ ಪಡೆದಿಲ್ಲ. ಪ್ರಾಚೀನ ಕಾಲದಿಂದಲೂ ನೇಪಾಳ ಮತ್ತು ಭಾರತ ಇವರಲ್ಲಿನ ಸ್ನೇಹ ಸಂಬಂಧ ಇದೆ, ಹೀಗೂ ಕೂಡ ಕೆಲವು ವ್ಯಾಪಾರಿಗಳು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಚೀನಾದ ಕಾಣದ ಕೈ ಇಲ್ಲದೆ ನೇಪಾಳ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನೇಪಾಳವು ತನ್ನ ಹಿತ ಕಾಪಾಡುವುದಕ್ಕಾಗಿ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದು, ಇಲ್ಲವಾದರೆ ಅದು ಅದರ ಕೊನೆಗಾಲ ಆಗಬಹುದು !