ಬಂಗಾಳದಲ್ಲಿ ಡಾಕ್ಟರ ನೂರ ಆಲಂನಿಂದ ಮಹಿಳಾ ರೋಗಿಗೆ ಅರಿವಳಿಕೆ ನೀಡಿ ಅನೇಕ ಬಾರಿ ಅತ್ಯಾಚಾರ

ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡಿದನು

ಕೋಲಕಾತಾ (ಬಂಗಾಳ) – ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಸನಾಬಾದ ಪ್ರದೇಶದ ಡಾ. ನೂರ ಆಲಂ ಸರದಾರನು ತನ್ನ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬಳ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿರುವ ಘಟನೆಯು ಬಹಿರಂಗವಾಗಿದೆ. ಸಂತ್ರಸ್ಥೆಯು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ, ಡಾ. ನೂರ ಆಲಂ ಅವಳಿಗೆ ಅರಿವಳಿಕೆ ಮದ್ದು ನೀಡಿ ಅವಳ ಮೇಲೆ ಬಲಾತ್ಕಾರ ಮಾಡಿದನು. ಹಾಗೆಯೇ ಡಾ.ನೂರ ಸಂತ್ರಸ್ಥೆಯನ್ನು ಬ್ಲಾಕ್ ಮೇಲ್ ಮಾಡಲು ಅವಳು ಪ್ರಜ್ಞೆ ತಪ್ಪಿದಾಗ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು. ಆ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಬೆದರಿಕೆಯನ್ನು ಹಾಕಿ ಆಕೆಯಿಂದ 4 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದನು. ಸಂತ್ರಸ್ಥೆಯ ದೂರಿನ ಮೇರೆಗೆ ಪೊಲೀಸರು ನೂರ ಆಲಂನನ್ನು ಬಂಧಿಸಿದ್ದಾರೆ.

ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಬಂಗಾಳವು ನಾಲ್ಕನೇ ಸ್ಥಾನದಲ್ಲಿ!

ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ವರದಿಯ ಪ್ರಕಾರ, ಮಹಿಳೆಯರ ಮೇಲಿನ ಅಪರಾಧಗಳ ವಿಷಯದಲ್ಲಿ ಬಂಗಾಳವು ನಾಲ್ಕನೇ ಸ್ಥಾನದಲ್ಲಿದೆ. 2022 ರ ಅಪರಾಧ ಅಂಕಿಅಂಶಗಳಲ್ಲಿ, ಬಂಗಾಳದಲ್ಲಿ ಮಹಿಳೆಯರ ವಿರುದ್ಧ 34 ಸಾವಿರದ 738 ಅಪರಾಧಗಳು ದಾಖಲಾಗಿವೆ. 65 ಸಾವಿರದ 743 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ (45 ಸಾವಿರದ 331 ಪ್ರಕರಣಗಳು) ಮತ್ತು ರಾಜಸ್ಥಾನ (45 ಸಾವಿರ 58 ಪ್ರಕರಣಗಳು) ನಂತರದ ಸ್ಥಾನದಲ್ಲಿವೆ.

ಸಂಪಾದಕೀಯ ನಿಲುವು

ಇಂತಹ ಆರೋಪಿಗಳಿಗೆ ಷರಿಯತ್ ಕಾನೂನಿನಂತೆ ಶಿಕ್ಷಿಸಲು ಯಾರಾದರೂ ಕೋರಿದರೆ ಆಶ್ಚರ್ಯಪಡಬಾರದು.