|
ಶಾಜಾಪುರ (ಮಧ್ಯಪ್ರದೇಶ) – ಇಲ್ಲಿನ ಕಿಲೋಡಾ ಗ್ರಾಮದ ಶ್ರೀರಾಮ ದೇವಸ್ಥಾನದಲ್ಲಿ ಮೂವರು ಮುಸ್ಲಿಮರು ಬೇಕಂತಲೇ ನಮಾಜ ಮಾಡಿದರು. ರುಸ್ತಂ (65 ವರ್ಷ), ಅಕ್ಬರ್ (85 ವರ್ಷ) ಮತ್ತು ಬಾಬು ಖಾನ್ (70 ವರ್ಷ) ಆರೋಪಿಗಳ ಹೆಸರಾಗಿದ್ದು, ಅವರು ಮೂವರೂ ಸಹೋದರರಾಗಿದ್ದಾರೆ. ಪೊಲೀಸರು ಈ ಮೂವರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ವಶಕ್ಕೆ ಪಡೆದರು; ಆದರೆ ಬಳಿಕ ನೊಟೀಸು ನೀಡಿ ಅವರನ್ನು ಬಿಡುಗಡೆ ಮಾಡಿದರು. ಈ ಘಟನೆ ಅಕ್ಟೋಬರ್ 26 ರಂದು ಸಂಭವಿಸಿದೆ. ಈ ಕೃತ್ಯದಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಹಿಂದೂ ಸಮುದಾಯ ಆಗ್ರಹಿಸಿದೆ.
1. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಮೂವರು ಸಹೋದರರು ಬ್ಯಾಂಕಿನ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದರು. ಅದರ ನಂತರ, ನಮಾಜ್‌ನ ಸಮಯವಾಯಿತು ಮತ್ತು ಮೂವರೂ ದೇವಸ್ಥಾನದ ಪ್ರದೇಶದಲ್ಲಿ ನಮಾಜ ಮಾಡಲು ಪ್ರಾರಂಭಿಸಿದರು.
2. ಅರ್ಚಕ ಓಂಪ್ರಕಾಶ ಇವರು ದೂರಿನಲ್ಲಿ, ಅಕ್ಬರ, ರುಸ್ತಂ, ಬಾಬು ಖಾನ ಸಂಜೆ 5.45ಕ್ಕೆ ದೇವಸ್ಥಾನಕ್ಕೆ ಬಂದಿದ್ದರು. ಅವರು ಮೂವರೂ ದೇವಸ್ಥಾನದಲ್ಲಿ ಇಟ್ಟಿದ್ದ ಮಡಕೆಯ ನೀರಿನಿಂದ ಕೈಕಾಲು ತೊಳೆದುಕೊಂಡರು ಮತ್ತು ದೇವಸ್ಥಾನದ ಪ್ರದೇಶದಲ್ಲಿ ಕುಳಿತು ನಮಾಜ ಮಾಡಿದರು. ಪ್ರತಿಭಟಿಸಿದರೂ ಬಗ್ಗದೇ ಅವರು ಸುಮಾರು 20 ನಿಮಿಷಗಳ ಕಾಲ ದೇವಸ್ಥಾನ ಪ್ರದೇಶದಲ್ಲಿ ಉಳಿದರು ಮತ್ತು ತದನಂತರ ಅಲ್ಲಿಂದ ಹೊರಟು ಹೋದರು ಎಂದು ತಿಳಿಸಿದ್ದಾರೆ.
3. ಈ ಘಟನೆಯ ನಂತರ, ಸ್ಥಳೀಯ ನಾಗರಿಕರಲ್ಲಿ ಆಕ್ರೋಶ ಭುಗಿಲೆದ್ದಿತು. ಪೊಲೀಸರು ತಕ್ಷಣ ಅಪರಾಧವನ್ನು ದಾಖಲಿಸಿಕೊಂಡು, ಬಾಬು, ರಸ್ತುಂ ಮತ್ತು ಅಕ್ಬರ ಇವರನ್ನು ವಶಕ್ಕೆ ಪಡೆದರು. ಪೊಲೀಸರ ವಿಚಾರಣೆಯ ಸಮಯದಲ್ಲಿ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡರು. ಪೊಲೀಸರು ಅವರಿಗೆ ನೊಟೀಸು ನೀಡಿ ಬಿಡುಗಡೆ ಮಾಡಿದರು. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.
ಸಂಪಾದಕೀಯ ನಿಲುವು
|