ಲಂಡನ್ ನಲ್ಲಿ ದೀಪಾವಳಿಯ ಕಾರ್ಯಕ್ರಮದಿಂದ ವರ್ಣದ್ವೇಷದ ಘೋಷಣೆ
ಲಂಡನ್ (ಬ್ರಿಟನ್) – ಲಂಡನ್ ನ ಮೇಯರ್ ಸಾಧಿಕ ಖಾನ್ ಇವರು ಅಕ್ಟೋಬರ್ ೨೭ ರಂದು ದೀಪಾವಳಿಯ ಕಾರ್ಯಕ್ರಮ ಇರುವುದಾಗಿ ಘೋಷಿಸಿದ ನಂತರ ಭಾರತೀಯರನ್ನು ಗುರಿ ಮಾಡಿ ‘ಭಾರತಕ್ಕೆ ಹಿಂತಿರುಗಿ ಹೋಗು, ಭಾರತೀಯರು ಪ್ರತಿಯೊಂದು ದೇಶವನ್ನು ನಾಶ ಮಾಡಿದ್ದಾರೆ’ ಎಂದು ವರ್ಣದ್ವೇಷದ ಘೋಷಣೆ ನೀಡಿದರು. ಇಂತಹ ಘೋಷಣೆ ನೀಡುವವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಲಂಡನ್ ನಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡ ೭.೫ ರಷ್ಟು ಭಾರತೀಯರಿದ್ದಾರೆ. ಆದ್ದರಿಂದ ಲಂಡನ್‌ನ ಮೇಯರ್ ಸಾಧಿಕ್ ಖಾನ್ ಇವರು ಇನ್ಸ್ಟಾಗ್ರಾಂನಲ್ಲಿ ಅಕ್ಟೋಬರ್ ೨೭ ರಂದು ಟ್ರಫಲಗರ್ ಸ್ಕ್ವೆಯರ್ ನಲ್ಲಿ ದೀಪಾವಳಿಯ ಬೃಹತ್ ಕಾರ್ಯಕ್ರಮದ ಆಯೋಜನೆ ಮಾಡುವ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸಲಾಗಿದೆ. ಹಾಗೂ ಈ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಆಮಂತ್ರಿಸಲಾಗಿತ್ತು. ಈ ವಿಡಿಯೋದಲ್ಲಿ ಸಾಧಿಕ ಖಾನ್ ಇವರು ಭಾರತೀಯರಿಗೆ ದೀಪಾವಳಿಯ ಶುಭಾಶಯವನ್ನು ನೀಡಿದ್ದರು. ಈ ಕಾರ್ಯಕ್ರಮದ ಘೋಷಣೆಯ ನಂತರ ವಿಡಿಯೋದ ಮೂಲಕ ವರ್ಣದ್ವೇಷಿ ವಾಗ್ದಾಳಿ ನಡೆಸಿ ಭಾರತೀಯರನ್ನು ಗುರಿ ಮಾಡಲಾಯಿತು.
‘Go back to India, Indians have destroyed every country they visit !’ – Racist slogans from a Diwali event in London
If the protestors are British then such slogans are not surprising because they have always been and looks like they will continue to be racist !… pic.twitter.com/113rTOSkTo
— Sanatan Prabhat (@SanatanPrabhat) October 27, 2024
ಸಂಪಾದಕೀಯ ನಿಲುವುವಿರೋಧಿಸುವವರು ಬ್ರಿಟಿಷರಾಗಿದ್ದರೆ, ಅವರು ಹಿಂದಿನಿಂದಲೂ ವರ್ಣದ್ವೇಷಗಳಾಗಿದ್ದಾರೆ ಮತ್ತು ಈಗಲೂ ಕೂಡ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇದು ಮತ್ತೊಮ್ಮೆ ಸಾಬೀತಾಗಿದೆ ! |