ಬದ್ಲಾಪುರ: ಬೇಕರಿ ಕೇಕ್‌ನಲ್ಲಿ ಇಲಿಯ ಹಿಕ್ಕಿ ! : Rat droppings found in bakery cake!

ನಗರಸೇವಕಿಯ ಆಕ್ರಮಣಕಾರಿ ಧೋರಣೆಯ ನಂತರ ತಪ್ಪೊಪ್ಪಿಕೊಂಡ ಸಿಬ್ಬಂದಿ

ಕಾರ್ಪೊರೇಟರ್ ಹರ್ಷಲಿ ಗಾಯಕ್ವಾಡ್

ಬದ್ಲಾಪುರ – ಇಲ್ಲಿನ ‘ಅಯ್ಯಂಗಾರ್ ಫ್ರೆಶ್ ಕೇಕ್’ ಬೇಕರಿಯ ಕೇಕ್‌ನಲ್ಲಿ ಇಲಿಯ ಹಿಕ್ಕಿ ಪತ್ತೆಯಾಗಿದೆ. ನಗರಸೇವಕಿ ಹರ್ಷಾಲಿ ಗಾಯಕ್ವಾಡ್ ಅವರ ಜೊತೆ ಈ ಘಟನೆ ನಡೆದಿದೆ. ನಗರಸೇವಕಿ ಗಾಯಕ್ವಾಡ್ ಬೇಕರಿಯವರನ್ನು ತರಾಟೆಗೆ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ, ಅಲ್ಲಿ ಇರಿಸಲಾಗಿದ್ದ ಖಾರಿಗಳ ಮೇಲೆ ಇಲಿಗಳು ಓಡಾಡುತ್ತಿರುವುದು ಮತ್ತು ಕೇಕ್ ತಯಾರಿಸಲು ಬಳಸುವ ಪಾತ್ರೆಗಳನ್ನು ಶೌಚಾಲಯದ ಕಮೋಡ್ ಮೇಲೆ ಇಟ್ಟಿರುವುದು ಕಂಡುಬಂದಿದೆ. ಆಗ ಅಲ್ಲಿದ್ದ ಬೇಕರಿ ಸಿಬ್ಬಂದಿ ಇದು ಇಲಿಯ ಹಿಕ್ಕಿಯಲ್ಲ, ‘ಚೊಕೊಚಿಪ್’ ಎಂದು ಹೇಳಿದರು; ಆದರೆ ಗಾಯಕ್ವಾಡ್ ಅವರು ‘ಈ ಕೇಕ್ ಅನ್ನು ಪರೀಕ್ಷೆಗೆ ಕಳುಹಿಸುತ್ತೇನೆ’ ಎಂದು ಹೇಳಿದಾಗ ಸಿಬ್ಬಂದಿ ತಮ್ಮ ತಪ್ಪು ಒಪ್ಪಿಕೊಂಡರು. ಈ ಬೇಕರಿಯ ವಿರುದ್ಧ ಆಹಾರ ಮತ್ತು ಔಷಧ ಆಡಳಿತ ಮಂಡಳಿಗೆ ದೂರು ನೀಡಲು ನಗರಸೇವಕಿ ನಿರ್ಧರಿಸಿದ್ದಾರೆ. ‘ನಾಗರಿಕರ ಜೀವನದ ಜೊತೆ ಚೆಲ್ಲಾಟವಾಡುವ ಈ ಬೇಕರಿಯನ್ನು ಮುಚ್ಚಬೇಕು’ ಎಂದು ಆಗ್ರಹಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ನಾಗರಿಕರ ಜೀವನದ ಜೊತೆ ಚೆಲ್ಲಾಟವಾಡುವವರನ್ನು ಜೀವಾವಧಿ ಜೈಲಿಗೆ ತಳ್ಳಬೇಕು !