ಭಾರತವು ’26/11′ ರಂತಹ ದಾಳಿಗಳನ್ನು ಇನ್ನು ಸಹಿಸುವುದಿಲ್ಲ ! – ಡಾ. ಎಸ್. ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರಿಂದ ಎಚ್ಚರಿಕೆ !

ಮುಂಬಯಿ – ನವೆಂಬರ್ 26, 2008 (’26/11′) ಮುಂಬಯಿ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಗೆ ಭಾರತದಿಂದ (ಅಂದಿನ ಸರಕಾರ) ಯಾವುದೇ ಪ್ರತ್ಯುತ್ತರ ನೀಡಲಿಲ್ಲ. ಭವಿಷ್ಯದಲ್ಲಿ ಮತ್ತೆ ಈ ರೀತಿ ದಾಳಿಯಾದರೇ ನಾವು ಸಹಿಸಿ ಕೊಳ್ಳುವುದಿಲ್ಲ ಹಾಗೂ ಅದನ್ನು ಬಲವಾಗಿ ಪ್ರತ್ಯುತ್ತರ ನೀಡುವೆವು’, ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. “ನಾವು ಶೂನ್ಯ ಸಹಿಷ್ಣುತೆಯ ಬಗ್ಗೆ ಮಾತನಾಡುತ್ತೇವೆಯೋ, ಆಗ ಅದರರ್ಥ, ಖಂಡಿತವಾಗಿ ಉತ್ತರವಿರುತ್ತದೆ.” ಎಂದು ಇರುತ್ತದೆ. ಈ ಭಾರತ ಇದನ್ನು ಸಹಿಸುವುದಿಲ್ಲ,’’ ಎಂದು ಡಾ. ಜೈಶಂಕರ್ ಹೇಳಿದರು.

ವಿದೇಶಾಂಗ ಸಚಿವ ಡಾ. ಜೈಶಂಕರ್ ಮಾತು ಮುಂದುವರೆಸಿ, ಮುಂಬಯಿ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ‘ಭಯೋತ್ಪಾದನೆ ವಿರೋಧಿ’ಯ ಪ್ರಮುಖ ಸಂಕೇತವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗಿದ್ದಾಗ, ಭಾರತವು ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರಾಗಿದ್ದರು. ಯಾವ ಹೋಟೆಲ್‌ನಲ್ಲಿ ದಾಳಿ ಆಗಿತ್ತೋ ಅದೇ ಹೋಟೆಲ್‌ನಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿ ಸಭೆ ನಡೆಸಿತ್ತು. ಭಯೋತ್ಪಾದನೆ ವಿರುದ್ಧ ವಿಶ್ವದ ಹೋರಾಟದಲ್ಲಿ ಭಾರತ ನಾಯಕತ್ವದ ಪಾತ್ರವನ್ನು ವಹಿಸುತ್ತಿದೆ. ಯಾರಾದರೂ ಹಗಲಿನಲ್ಲಿ ವ್ಯಾಪಾರ ಮಾಡುವುದು ಮತ್ತು ರಾತ್ರಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವುದು ಈಗ ಇದು ಸ್ವೀಕಾರಾರ್ಹವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ದಾಳಿಯ ನಂತರ ಕ್ರಮ ಕೈಗೊಳ್ಳಲು ಯೋಚಿಸುವ ಬದಲು, ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ಮಾಡದೇ ಇರುವಂತಹ ದಿಗಿಲನ್ನು ನಿರ್ಮಾಣ ಮಾಡಬೇಕು !