‘ಪೇಜಾವರ ಸ್ವಾಮಿಜಿ ಕಾವಿ ಬಟ್ಟೆ ತ್ಯಜಿಸಲಿ ಮತ್ತೆ ಪಾಠ ಕಲಿಸುತ್ತೇವೆ ! – ಕಾಂಗ್ರೆಸ್ ಶಾಸಕ ಬಿ.ಕೆ. ಹರಿಪ್ರಸಾದ

  • ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ಬಿ.ಕೆ. ಹರಿಪ್ರಸಾದ್

  • ಸ್ವಾಮೀಜಿ ಇವರು ಜಾತಿ ಆಧಾರಿತ ಜನಗಣತಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದರು !

  • ಶಾಸಕ ಹರಿಪ್ರಸಾದ್ ಇವರ ಹೇಳಿಕೆಯ ಬಗ್ಗೆ ಬ್ರಾಹ್ಮಣ ಸಮಾಜದಿಂದ ಆಕ್ರೋಶ !

ನವ ದೆಹಲಿ – ಜಾತಿ ಆಧಾರಿತ ಜನಗಣತಿಯ ವಿರುದ್ಧ ನೀಡಿರುವ ಹೇಳಿಕೆಯಿಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರ ಕುರಿತು ವಿಧಾನ ಪರಿಷತ್ತಿನಲ್ಲಿ ಶಾಸಕ ಬಿ.ಕೆ. ಹರಿಪ್ರಸಾದ್ ಇವರು ವಾಗ್ದಾಳಿ ನಡೆಸಿದರು. ಅವರು, ಸ್ವಾಮೀಜಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಿಂದೆ ಈ ಸಂದರ್ಭದಲ್ಲಿ (ರಾಜಕೀಯ ವಿಷಯಗಳ ಕುರಿತು) ಯಾವುದೇ ಹೇಳಿಕೆ ನೀಡುತ್ತಿರಲಿಲ್ಲ. ಅವರು ಹಿರಿಯರಾಗಿದ್ದಾರೆ; ಆದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದಾಗಿನಿಂದ ಅವರು ಎಲ್ಲಾ ವಿಷಯಗಳು ಕುರಿತು ಹೇಳಿಕೆ ನೀಡುತ್ತಾರೆ. ಸ್ವಾಮೀಜಿ ಸರ್ವಸಂಗಪರಿತ್ಯಾಗಿ ಆಗಿರುತ್ತಾರೆ, ಎಂದು ಹೇಳಲಾಗುತ್ತದೆ; ಆದರೆ ಈಗ ಸ್ವಾಮೀಜಿ ಬದಲಾಗಿದ್ದಾರೆ. ಪೇಜಾವರ ಸ್ವಾಮೀಜಿ ಕಾವಿ ಬಟ್ಟೆ ತ್ಯಜಿಸಿ ಬಂದರೆ, ನಾವು ಪಾಠ ಕಲಿಸುವೆವು, ಎಂದು ಹರಿಪ್ರಸಾದ ಇವರು ಅತ್ಯಂತ ಕೀಳು ಮಟ್ಟಕ್ಕೆ ಹೋಗಿ ಹೇಳಿಕೆ ನೀಡಿದ್ದಾರೆ.

ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಏನು ಹೇಳಿದ್ದರು ?

ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರು, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಆಧಾರಿತ ಜನಗಣತಿಯ ಏನು ಆವಶ್ಯಕತೆ ಇದೆ ? ಜಾತಿ ಆಧಾರಿತ ಜನಗಣತಿಗಾಗಿ ಸರಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಇದೆ. ಒಂದುಕಡೆ ‘ಜಾತಿ ಆಧಾರಿತ ರಾಜಕಾರಣ ಮಾಡುವ ಅಗತ್ಯವಿಲ್ಲ’, ಎಂದು ಹೇಳುತ್ತಾರೆ ಮತ್ತು ಇನ್ನೊಂದು ಕಡೆಗೆ ‘ಇಂತಹ ಜನಗಣತಿಯ ಅವಶ್ಯಕತೆ ಇದೆ’, ಎಂದು ಹೇಳುತ್ತಾರೆ. ಜಾತಿ ಆಧಾರಿತ ಜನಗಣತಿಯ ಏನು ಅವಶ್ಯಕತೆ ಇದೆ ? ಇದೇ ತಿಳಿಯುತ್ತಿಲ್ಲ. ಎಂದು ಹೇಳಿದ್ದರು.

ಶಾಸಕ ಹರಿಪ್ರಸಾದ್ ಇವರ ಹೇಳಿಕೆಯ ಬಗ್ಗೆ ಬ್ರಾಹ್ಮಣ ಸಮಾಜದಿಂದ ಆಕ್ರೋಶ !

ಬಾಗಲಕೋಟೆ – ಜಾತಿ ಆಧಾರಿತ ಜನಗಣತಿಯ ಸಂದರ್ಭದಲ್ಲಿ ಅಭಿಪ್ರಾಯ ಮಂಡಿಸಲು ಗೌರವಾನ್ವಿತ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈ ಸಂದರ್ಭದಲ್ಲಿ ಬಹಳ ಕೆಳಮಟ್ಟದ ಭಾಷೆ ಉಪಯೋಗಿಸುವ ಕಾಂಗ್ರೆಸ್ಸಿನ ನಾಯಕ ಬಿ.ಕೆ. ಹರಿಪ್ರಸಾದ ಇವರು ತಕ್ಷಣ ಕ್ಷಮೆ ಯಾಚಿಸಬೇಕು, ಎಂದು ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ’ ಮತ್ತು ‘ಬ್ರಾಹ್ಮಣ ತರುಣ ಸಂಘ’ ಇವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಸಿದ್ಧಿ ಪತ್ರ ಪ್ರಕಟಿಸಿ ಬೇಡಿಕೆ ಸಲ್ಲಿಸಿದ್ದಾರೆ. ಪ್ರಸಿದ್ಧಿ ಪತ್ರದಲ್ಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಸಮಾನವಾದ ಅಧಿಕಾರವಿದೆ. ಜಾತಿ ಆಧಾರಿತ ಜನಗಣತಿಯ ಸಂದರ್ಭದಲ್ಲಿ ಸ್ವಾಮೀಜಿ ಯಾರ ಕುರಿತು ಕೂಡ ಟೀಕಿಸಿಲ್ಲ. ಸಮಾಜದಲ್ಲಿ ಸಮಾನತೆ ನಿರ್ಮಾಣ ಮಾಡುವುದಿದ್ದರೆ, ಜಾತಿ ಆಧಾರದಲ್ಲಿ ಸಮಾಜ ವಿಭಜನೆ ಮಾಡಿ ಅದನ್ನು ವೈಭವಿಕರಿಸುವುದು ಯೋಗ್ಯವಲ್ಲ, ಇದೇ ಅವರ ಹೇಳಿಕೆ ಆಗಿದೆ. ಹರಿಪ್ರಸಾದ ಇವರು ತಕ್ಷಣ ಶ್ರೀಗಳನ್ನು ಕ್ಷಮೆ ಕೇಳಬೇಕು ಇಲ್ಲವಾದರೆ ನಾವು ಈ ಹೋರಾಟದಲ್ಲಿ ಇಳಿಯಬೇಕಾಗುತ್ತದೆ,ಎಂದೂ ಸಹ ಬ್ರಾಹ್ಮಣ ಸಮಾಜದಿಂದ ಎಚ್ಚರಿಕೆ ನೀಡಲಾಗಿದೆ. (ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರು ಹಿಂದೂ ಜನಾಂಗದ ಸಂತರಾಗಿದ್ದಾರೆ. ಆದ್ದರಿಂದ ಕೇವಲ ಬ್ರಾಹ್ಮಣರು ಅಷ್ಟೇ ಅಲ್ಲದೆ, ಎಲ್ಲರೂ ಅವರಿಗೆ ಬೆಂಬಲ ನೀಡಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಪೇಜಾವರ ಸ್ವಾಮೀಜಿಯ ಬದಲು ಓರ್ವ ಮೌಲಾನಾ ಅಥವಾ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದರೆ ಶಾಸಕ ಮಹೋದಯರು ಅವರ ಕುರಿತು ಟೀಕೆ ಅಂತೂ ಬಿಡಿ; ಅವರನ್ನು ಓಲೈಸುತ್ತಾ ಅವರ ಮಾತು ಎತ್ತಿ ಹಿಡಿಯುತ್ತಿದ್ದರು ! ಹಿಂದೂಗಳ ಅತಿಸಹಿಷ್ಣುತೆ ಅಥವಾ ಸದ್ಗುಣ ವಿಕೃತಿಯ ಪರಿಣಾಮವಾಗಿದೆ, ಯಾರಬೇಕಿದ್ದರು ಹಿಂದೂ ಸಂತರ ಕುರಿತು ಕೀಳಾಗಿ ಮಾತನಾಡಿ ಕೈಚೆಲ್ಲುತ್ತಾರೆ !