೫ ವರ್ಷಗಳಲ್ಲಿ ನಕ್ಸಲರಿಂದ ೩೦ ಜನರ ಹತ್ಯೆ, ೩ ಪೊಲೀಸರ ಸಮಾವೇಶ
– ಶ್ರೀ. ಪ್ರೀತಮ ನಾಚಣಕಾರ, ಮುಂಬಯಿ
ಮುಂಬಯಿ, ಅಕ್ಟೋಬರ್ ೨೪ (ವಾರ್ತೆ) – ಮಹಾರಾಷ್ಟ್ರದಲ್ಲಿನ ಗಡಚಿರೋಲಿ ಮತ್ತು ಗೊಂದಿಯ ಈ ಜಿಲ್ಲೆಯಲ್ಲಿನ ೧ ಸಾವಿರದ ೮೩ ಮತದಾನ ಕೇಂದ್ರಗಳಲ್ಲಿ ನಕ್ಸಲರ ಕರಿ ನೆರಳು ಇದೆ. ೨೦೨೦ ರಿಂದ ರಾಜ್ಯದಲ್ಲಿನ ನಕ್ಸಲ ಪೀಡಿತ ಪ್ರದೇಶದಲ್ಲಿ ನಕ್ಸಲರು ಒಟ್ಟು ೫೩ ದಾಳಿಗಳು ನಡೆಸಿ ೩೦ ಜನರ ಹತ್ಯೆ ಮಾಡಲಾಗಿದೆ. ಇದರಲ್ಲಿ ಮೂರು ಪೋಲಿಸರ ಸಮಾವೇಶ ಕೂಡ ಇದೆ. ನಕ್ಸಲರ ದಾಳಿಯಲ್ಲಿ ೪೪ ಪೊಲೀಸರು ಗಾಯಗೊಂಡಿದ್ದರು. ಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಪ್ರಸ್ತುತಪಡಿಸಿರುವ ಗೌಪ್ಯ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.
🚨MAHARASHTRA ON HIGH ALERT!
1,083 polling stations under #NaxaliteThreat
🛑Past 5 years: 30 lives lost, including 3 police officers
CM Eknath Shinde vows to intensify action against #Naxalites
👉Complete eradication of #Naxalism is the only solution to lift fear from the… pic.twitter.com/3bK1rsqhQx
— Sanatan Prabhat (@SanatanPrabhat) October 24, 2024
ಗೃಹ ಇಲಾಖೆ ಈಗ ಗೌಪ್ಯ ವರದಿಯಲ್ಲಿ ಬರುವ ವಿಧಾನ ಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ನಕ್ಸಲರು ನಡೆಸಿದ ಕಾರ್ಯಾಚರಣೆಯ ಮಾಹಿತಿ ನೀಡಲಾಗಿದೆ. ಈ ವರದಿಯ ಪ್ರಕಾರ ಗಡಚಿರೋಲಿ ಜಿಲ್ಲೆಯಲ್ಲಿನ ಆರಮೋರಿ, ಗಡಚಿರೋಲಿ ಮತ್ತು ಅಹೆರಿ ಈ ಮತದಾರ ಕೇಂದ್ರದಲ್ಲಿನ ೯೭೨ ಹಾಗೂ ಗೊಂದಿಯ ಜಿಲ್ಲೆಯಲ್ಲಿನ ಅರ್ಜುನ್ ಮೋರಗಾವ ಮತ್ತು ಆಮಗಾವ ಇಲ್ಲಿಯ ೧೧೧ ಮತದಾನ ಕೇಂದ್ರಗಳಲ್ಲಿ ನಕ್ಸಲರ ಕರಿ ನೆರಳಿನ ಕುರಿತು ನಮೂದಿಸಲಾಗಿದೆ. ೨೦೨೦ ರಿಂದ ರಾಜ್ಯದಲ್ಲಿನ ನಕ್ಸಲ ಪೀಡಿತ ಪ್ರದೇಶದಲ್ಲಿ ನಕ್ಸಲರು ೧೨ ಸ್ಥಳಗಳಲ್ಲಿ ಬೆಂಕಿ ಅವಘಡ ನಡೆದಿತ್ತು.
ಆಚಾರಸಂಹಿತೆಯ ಸಮಯದಲ್ಲಿ ನಕ್ಸಲರು ನಡೆಸಿದ ದಾಳಿಗಳು !
ಕಳೆದ ಅನೇಕ ವರ್ಷಗಳಿಂದ ಚುನಾವಣೆಯ ಆಚಾರಸಂಹಿತೆಯ ಸಮಯದಲ್ಲಿ ನಕ್ಸಲ ಪೀಡಿತ ಪ್ರದೇಶದಲ್ಲಿ ನಕ್ಸಲರು ನಾಗರೀಕರ ಮೇಲೆ ದಾಳಿ ನಡೆಸಿ ಭಯ ನಿರ್ಮಾಣ ಮಾಡುತ್ತಾರೆ. ೨೦೧೯ರ ಲೋಕಸಭಾ ಚುನಾವಣೆಯ ಆಚಾರ ಸಮಿತಿಯ ಸಮಯದಲ್ಲಿ ನಕ್ಸಲರು ೪ ಜನರ ಹತ್ಯೆ ಮಾಡಿತ್ತು. ಇದರಲ್ಲಿ ಓರ್ವ ಪೋಲಿಸರು ಒಳಗೊಂಡಿದ್ದರು. ಲೋಕಸಭಾ ಆಚಾರಸಂಹಿತೆಯ ಸಮಯದಲ್ಲಿ ನಕ್ಸಲರು ೬ ಸ್ಥಳಗಳಲ್ಲಿ ಬೆಂಕಿ ಅವಘಡ ನಡೆಸಿದ್ದರು. ಈ ಆಚಾರಸಂಹಿತೆಯ ಸಮಯದಲ್ಲಿ ನಕ್ಸಲರ ದಾಳಿಯಲ್ಲಿ ೧೨ ಜನರು ಗಂಭೀರವಾಗಿ ಗಾಯಗೊಂಡಿದ್ದರು. ೨೦೧೯ ರಲ್ಲಿನ ವಿಧಾನಸಭಾ ಚುನಾವಣೆಯ ಆಚಾರಸಂಹಿತೆಯ ಸಮಯದಲ್ಲಿ ನಕ್ಸಲರು ಓರ್ವ ವ್ಯಕ್ತಿಯ ಹತ್ಯೆ ಮಾಡಿತ್ತು ಹಾಗೂ ಒಂದು ಸ್ಥಳದಲ್ಲಿ ಬೆಂಕಿ ಅವಘಡ ನಡೆಸಿದ್ದರು. ಈ ಸಮಯದಲ್ಲಿ ನಕ್ಸಲರ ದಾಳಿಯಲ್ಲಿ ೪ ಜನರು ಗಾಯಗೊಂಡಿದ್ದರು.
ಪೊಲೀಸರಿಂದ ತೀವ್ರ ಕಾರ್ಯಾಚರಣೆ೫ ವರ್ಷಗಳಲ್ಲಿ ೮೭ ನಕ್ಸಲರ ಮಟ್ಟ ಹಾಕಿದ್ದರೇ, ೧೩೬ ಜನರನ್ನು ಬಂಧಿಸಲಾಗಿದೆ ! ನಕ್ಸಲರ ವಿರುದ್ಧ ಪೊಲೀಸರು ಕೂಡ ಬಲವಾದ ಕಾರ್ಯಾಚರಣೆ ನಡೆಸಿದ್ದಾರೆ. ೨೦೨೦ ರಿಂದ ಪೊಲೀಸರು ೮೭ ಕಟ್ಟರ ನಕ್ಸಲರ ಮಟ್ಟಹಾಕಿದ್ದಾರೆ ಹಾಗೂ ೧೩೬ ನಕ್ಸಲರನ್ನು ಬಂಧಿಸಿದ್ದಾರೆ. ಕಳೆದ ೫ ವರ್ಷಗಳಲ್ಲಿ ೩೧ ನಕ್ಸಲರು ಶರಣಾಗಿದ್ದಾರೆ. |
ನಕ್ಸಲರ ವಿರುದ್ಧ ಕಾರ್ಯಾಚರಣೆ ಹೆಚ್ಚು ತೀವ್ರಗೊಳಿಸುವೆವು ! – ಏಕನಾಥ ಶಿಂದೆ, ಮುಖ್ಯಮಂತ್ರಿ, ಮಹಾರಾಷ್ಟ್ರ
ನಕ್ಸಲರ ವಿರುದ್ಧ ಹೋರಾಡುವುದಕ್ಕಾಗಿ ‘ಸ್ಪೆಷಲ್ ಟಾಸ್ಕ್ ಫೋರ್ಸ್’ ಮತ್ತು ‘ಸ್ಪೆಷಲ್ ಇಂಟೆಲಿಜೆನ್ಸ್ ಬ್ಯೂರೋ’ ಸ್ಥಾಪಿಸಲಾಗುವುದು ಹಾಗೂ ‘ಫೋರ್ಟಿಫಾಯಿಡ್ ಪೊಲೀಸ್ ಠಾಣೆ’ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ೨೦೨೫ ವರೆಗೆ ಈ ಕಾರ್ಯ ಪೂರ್ಣವಾಗುವುದು. ಅದಕ್ಕಾಗಿ ೬೧ ಕೋಟಿ ೩೫ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ನಕ್ಸಲ ಪೀಡಿತ ಪ್ರದೇಶದಲ್ಲಿ ನೂತನ ಪೊಲೀಸ ಠಾಣೆಗಾಗಿ ೨೫ ಅಧಿಕಾರಿ ಮತ್ತು ೫೦೦ ಸಿಬ್ಬಂದಿಗಳು ನೇಮಕಗೊಳಿಸಲಾಗುವುದು. ನಕ್ಸಲರ ಮೇಲೆ ಕ್ರಮ ಕೈಗೊಳ್ಳಲು ರಾತ್ರಿಯ ಸಮಯದಲ್ಲಿ ‘ಹೆಲಿಕಾಪ್ಟರ್’ ಬಳಕೆಗಾಗಿ ರಾಜ್ಯ ಸರಕಾರ ಕೇಂದ್ರದ ಬಳಿ ಅನುಮತಿ ಕೇಳಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಜೊತೆಗೆ ನಡೆದ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಈ ಮಾಹಿತಿ ನೀಡಿದರು. ಬರುವ ೨ ವರ್ಷದಲ್ಲಿ ನಕ್ಸಲರ ವಿರುದ್ಧದಲ್ಲಿನ ಕಾರ್ಯಾಚರಣೆ ತೀವ್ರಗೊಳಿಸಲಾಗುವುದೆಂದು ಕೂಡ ಏಕನಾಥ ಶಿಂದೆ ಇವರು ಈ ಸಮಯದಲ್ಲಿ ಹೇಳಿದರು.
ಸಂಪಾದಕೀಯ ನಿಲುವುನಕ್ಸಲ ಅನ್ನು ಸಂಪೂರ್ಣ ನಾಶ ಮಾಡಿದರೆ ಮಾತ್ರ ಜನರಲ್ಲಿರುವ ನಕ್ಸಲರ ಕರಿ ನೆರಳು ದೂರವಾಗುವುದು, ಇದನ್ನು ಅರಿತುಕೊಂಡು ಪೊಲೀಸರು ಮತ್ತು ಸರಕಾರ ಇವರು ಅದರ ಉಚ್ಛಾಟನೆಗಾಗಿ ಪ್ರಯತ್ನ ಮಾಡಬೇಕು ! |