ಪುಲ್ವಾಮಾ (ಜಮ್ಮು-ಕಾಶ್ಮೀರ್)ದಲ್ಲಿ ಭಯೋತ್ಪಾದಕ ದಾಳಿ : ಓರ್ವ ಕಾರ್ಮಿಕನಿಗೆ ಗಾಯ !

ಜಮ್ಮು (ಜಮ್ಮು-ಕಾಶ್ಮೀರ್) – ಜಿಹಾದಿ ಭಯೋತ್ಪಾದಕರು ಅಕ್ಟೋಬರ್ ೨೪ ರಂದು ಬೆಳಿಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿನ ತ್ರಾಲ ಪ್ರದೇಶದಲ್ಲಿ ಕಾರ್ಮಿಕ ಪ್ರೀತಮ್ ಸಿಂಹ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಗಾಯಗೊಂಡಿರುವ ಸಮಾಚಾರವಿದೆ. ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವನ ಆರೋಗ್ಯ ಸ್ಥಿರವಾಗಿದೆ. ತ್ರಾಲ ಪ್ರದೇಶದಲ್ಲಿನ ಬಂಟಾಗುಂಡ ಗ್ರಾಮದಲ್ಲಿ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ. ಈ ಹಿಂದೆ ಅಕ್ಟೋಬರ್ ೨೦ ರಂದು ಭಯೋತ್ಪಾದಕರು ಗಂದರಬಲದಲ್ಲಿ ಶ್ರೀನಗರ-ಲೇಹ ಹೆದ್ದಾರಿಯಲ್ಲಿ ಸೋನಮರ್ಗ ಹತ್ತಿರದ ಗಗನಾಗೀರ ಪ್ರದೇಶದ ‘ಝೆಡ ಮೋಡ’ ಸುರಂಗ ಕಾಮಗಾರಿ ನಡೆಸುವ ಸ್ಥಳಾಂತರಿತ ಕಾರ್ಮಿಕರ ಮೇಲೆ ದಾಳಿ ನಡೆದಿತ್ತು. ಅದರಲ್ಲಿ ೧ ಡಾಕ್ಟರ್ ಮತ್ತು ೬ ಕಾರ್ಮಿಕರು ಅಸುನೀಗಿದ್ದರು.

ಸಂಪಾದಕೀಯ ನಿಲುವು

ಜಮ್ಮು ಕಾಶ್ಮೀರವನ್ನು ಅಸ್ಥಿರಗೊಳಿಸುವುದಕ್ಕಾಗಿ ಜಿಹಾದಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದರಿಂದ ಅದನ್ನು ತಡೆಯುವುದಕ್ಕಾಗಿ ಜಿಹಾದಿಗಳನ್ನು ನಿರ್ಮಿಸುತ್ತಿರುವ ಪಾಕಿಸ್ತಾನವನ್ನು ನಾಶ ಮಾಡುವುದರ ಜೊತೆಗೆ ಅವರ ವಿಚಾರಧಾರೆಯನ್ನು ದೇಶದಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು !