ತೆಲ್ ಅವಿವ (ರಷ್ಯಾ) – ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಹೆಜ್ಬುಲ್ಲಾ’ದ ಸಂಭಾವ್ಯ ಉತ್ತರಾಧಿಕಾರಿ ಹಾಶೆಮ್ ಸಫೀದ್ದೀನ್ ಹತನಾಗಿದ್ದಾನೆ. ಈ ವರದಿಯನ್ನು ಹಿಜ್ಬುಲ್ಲಾ ಇದುವರೆಗೂ ದೃಢೀಕರಿಸಿಲ್ಲ.
ಅಕ್ಟೋಬರ್ 4 ರಂದು, ಬೈರುತ್‌ನ ದಕ್ಷಿಣ ಭಾಗದಲ್ಲಿ ನಡೆದ ದಾಳಿಯಲ್ಲಿ ಹಾಶೆಮ್ ಸಫೀದ್ದೀನ್ ನ ಹತ್ಯೆ ಮಾಡಲಾಯಿತು. ಈ ಸಮಯದಲ್ಲಿ ಹಿಜ್ಬುಲ್ಲಾದ ಇನ್ನೂ 25 ನಾಯಕರು ಕೊಲ್ಲಲ್ಪಟ್ಟರು. ಇಸ್ರೇಲ್‌ನ ಸೇನೆಯು 19 ದಿನಗಳ ನಂತರ ಹಾಶೆಮ್‌ನ ಸಾವನ್ನು ದೃಢಪಡಿಸಿದೆ. ಮೂರು ವಾರಗಳ ಹಿಂದೆ ದಹಿಯಾ ಉಪನಗರದಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಗುಪ್ತಚರ ವಿಭಾಗದ ಮುಖ್ಯಸ್ಥ ಹಾಶೆಮ್ ಸಫೀದ್ದೀನ್ ಮತ್ತು ಅಲಿ ಹುಸೇನ್ ಹಾಜಿಮಾ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೈನ್ಯವು ಹೇಳಿದೆ.