‘ದೇವಸ್ಥಾನದ ಮೇಲಿರುವ ಸ್ಪೀಕರ್ ನಿಂದ ಶಬ್ದ ಮಾಲಿನ್ಯ ಆಗುತ್ತದೆ’ಯಂತೆ ! – ಶೈಲಬಾಲಾ ಮಾರ್ಟಿನ್

ಭಾರತೀಯ ಆಡಳಿತ ಸೇವಾ ಅಧಿಕಾರಿ ಶೈಲಬಾಲಾ ಮಾರ್ಟಿನ್ ಹೇಳಿಕೆ

ಭೋಪಾಲ್ (ಮಧ್ಯಪ್ರದೇಶ) – ‘ದೇವಸ್ಥಾನದ ಮೇಲೆ ಹಾಕಿರುವ ಸ್ಪೀಕರ್‍‌ ದೂರದವರೆಗೆ ಶಬ್ದಮಾಲೀನ್ಯ ಮಾಡುತ್ತದೆ. ಅದು ಮಧ್ಯರಾತ್ರಿಯವರೆಗೆ ನಡೆಯುತ್ತಿರುತ್ತದೆ. ಆದ್ದರಿಂದ ಯಾರಿಗೂ ತೊಂದರೆ ಆಗುವುದಿಲ್ಲ,’ ಎಂದು ರಾಜ್ಯದ ಭಾರತೀಯ ಆಡಳಿತ ಸೇವಾ ಅಧಿಕಾರಿ (ಐ.ಎ.ಎಸ್.) ಶೈಲಬಾಲಾ ಮಾರ್ಟಿನ್ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ನಂತರ ಅದಕ್ಕೆ ವಿರೋಧವಾಗಲು ಆರಂಭವಾಯಿತು. ಮಾರ್ಟಿನ್ ಇವರು ಈ ಪೋಸ್ಟ್ ಇನ್ನೊಂದು ಪೋಸ್ಟಿಗೆ ರಿಪೋಸ್ಟ್ ಮಾಡುತ್ತಾ ಬರೆದಿದ್ದರು. ಹಿಂದೂ ಸಂಘಟನೆಗಳು ಮಾರ್ಟಿನ್ ಇವರ ಪೋಸ್ಟಿಗೆ ವಿರೋಧಿಸಿದ್ದಾರೆ ಹಾಗೂ ಕಾಂಗ್ರೆಸ್ಸಿನವರು ಪೋಸ್ಟಿಗೆ ಬೆಂಬಲ ನೀಡಿದ್ದಾರೆ.

ಮಾರ್ಟಿನ್, ನಿಮಗೆ ಹಿಂದೂ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಯಾವುದೇ ಅಧಿಕಾರವಿಲ್ಲ ! – ಸಂಸ್ಕೃತಿ ರಕ್ಷಣೆ ವೇದಿಕೆಯಿಂದ

‘ಸಂಸ್ಕೃತಿ ಬಚಾವ ಮಂಚ’ನ ಅಧ್ಯಕ್ಷ ಪಂಡಿತ ಚಂದ್ರಶೇಖರ್ ತಿವಾರಿ ಇವರು, ಹಿಂದೂ ಧರ್ಮದ ಶ್ರದ್ಧೆಗೆ ಧಕ್ಕೆ ಉಂಟು ಮಾಡುವ ಕಾರ್ಯ ಮಾಡಿದರೆ, ಅದನ್ನು ನಾವು ವಿರೋಧಿಸುವೆವು. ದೇವಸ್ಥಾನದಲ್ಲಿ ಸುಮಧುರ ಧ್ವನಿಯಲ್ಲಿ ಆರತಿ ಮತ್ತು ಮಂತ್ರಗಳ ಉಚ್ಚಾರಣೆ ಮಾಡಲಾಗುತ್ತದೆ. ಒಂದು ದಿನದಲ್ಲಿ ೫ ಬಾರಿ ಮಸೀದಿಯಿಂದ ನಡೆಯುವ ದೊಡ್ಡ ಧ್ವನಿಯಲ್ಲಿನ ಅಜಾನ (ನಮಾಜ ಪಠಣೆಗಾಗಿ ಕರೆಯಲು ಆವಾಹನ) ಆಗುವುದಿಲ್ಲ. ನಾನು ಶೈಲಬಾಲಾ ಮಾರ್ಟಿನ್ ಇವರಿಗೆ ಪ್ರಶ್ನಿಸುವುದು ಏನೆಂದರೆ, ಅವರು ಮೊಹೊರಮ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿರುವುದು ನೋಡಿದ್ದಾರೆಯೇ ? ಇನ್ನೊಂದು ಕಡೆಗೆ ಹಿಂದುಗಳ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ ಮತ್ತು ಆದ್ದರಿಂದ ಮಾರ್ಟಿನ್ ನಿಮಗೆ ಹಿಂದೂ ಧರ್ಮದ ಭಾವನೆಗೆ ನೋವುಂಟು ಮಾಡುವ ಯಾವುದೇ ಅಧಿಕಾರವಿಲ್ಲ, ಎಂದು ಹೇಳಿದರು.

‘ಭಾಜಪ ಸರಕಾರದ ಅವಧಿಯಲ್ಲಿ ಧ್ವನಿವರ್ಧಕಗಳ ಮೇಲೆ ಕೈಗೊಂಡ ಕ್ರಮ ರಾಜಕೀಯದಿಂದ ಕೂರುತ್ತದೆ (ಅಂತೆ) ! – ಕಾಂಗ್ರೆಸ್

ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಸ್ ಇವರು ಶೈಲಬಾಲಾ ಮಾರ್ಟಿನ್ ಇವರನ್ನು ಬೆಂಬಲಿಸುತ್ತಾ, ಭಾಜಪ ಸರಕಾರದ ಕಾಲದಲ್ಲಿ ಧ್ವನಿವರ್ಧಕಗಳ ಮೇಲಿನ ಕೈಗೊಳ್ಳುವ ಕ್ರಮ ರಾಜಕೀಯದಿಂದ ಕೂಡಿರುತ್ತದೆ. ಧರ್ಮ ನೋಡಿ ಸ್ಪೀಕರ್ ಮೇಲೆ ಕ್ರಮ ಕೈಗೊಳ್ಳುತ್ತಿರುವುದರಿಂದ ರಾಜ್ಯದ ಸರಕಾರಿ ಅಧಿಕಾರಿಗಳಿಗೆ ಇದರ ಬಗ್ಗೆ ಮಾತನಾಡಲು ಅನಿವಾರ್ಯಗೊಳಿಸಿತು. (ಕಾಂಗ್ರೆಸ್ ಎಂದರೆ ಇನ್ನೊಂದು ಮುಸ್ಲಿಂ ಲೀಗ್ ಆಗಿರುವುದರಿಂದ ಅದು ಹಿಂದುಗಳ ವಿರೋಧದಲ್ಲಿಯೇ ಮಾತನಾಡುವವರನ್ನು ಬೆಂಬಲಿಸಿದರೆ ಅದರಲ್ಲೇನು ಆಶ್ಚರ್ಯ ?’, ಹೀಗೆ ಯಾರಾದರೂ ಹೇಳಿದರೆ ಆಶ್ಚರ್ಯ ಅನ್ನಿಸಬಾರದು ! – ಸಂಪಾದಕರು)

ಸಂಪಾದಕೀಯ ನಿಲುವು

ದೇವಸ್ಥಾನದ ಮೇಲೆ ಹಾಕಲಾಗಿರುವ ಸ್ಪೀಕರ್ ಶಬ್ದ ಮಾಲಿನ್ಯ ಆಗುತ್ತಿದ್ದರೆ, ಸರಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ನಿಯಮ ಎಲ್ಲರಿಗೂ ಸಮಾನವಾಗಿರಬೇಕು; ಆದರೆ ಕಳೆದ ಅನೇಕ ದಶಕಗಳಿಂದ ಸಂಪೂರ್ಣ ದೇಶದಲ್ಲಿ ದಿನದಲ್ಲಿ ೫ ಸಾರಿ ಮಸೀದಿ ಮೇಲಿನ ಸ್ಪೀಕರ್‍ನಿಂದ ನೀಡುವ ಅಜಾನದಿಂದ ಶಬ್ದಮಾಲಿನ್ಯ ಆಗುತ್ತಿದೆ, ಆದರೆ ಅದರ ಬಗ್ಗೆ ಯಾರು ಏನು ಮಾತನಾಡುವುದಿಲ್ಲ ಅಥವಾ ಕ್ರಮ ಕೈಗೊಳ್ಳುತ್ತಿಲ್ಲ, ಇದರ ಬಗ್ಗೆ ಮಾರ್ಟಿನ್ ಮಾತನಾಡುವರೇ ?