Lawrence Bishnoi Murder Plot: ಪೊಲೀಸರು ಚಕಮಕಿಯಲ್ಲಿ ಲಾರೆನ್ಸ್ ಬಿಷ್ಣೋಯಿಯನ್ನು ಕೊಂದರೆ 1 ಕೋಟಿ 11 ಲಕ್ಷ ರೂಪಾಯಿ ನೀಡುವೆ !

  • ಕ್ಷತ್ರಿಯ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ ಶೇಖಾವತ ಇವರ ಘೋಷಣೆ

  • ಕರಣಿ ಸೇನೆಯ ಮುಖ್ಯಸ್ಥ ಸುಖದೇವ ಸಿಂಗ ಗೊಗಾಮೆಡಿಯವರ ಹತ್ಯೆ ಮಾಡಿರುವ ಸಿಟ್ಟು !

ಕುಖ್ಯಾತ ಗೂಂಡಾ ಲಾರೆನ್ಸ್ ಬಿಷ್ಣೋಯಿ ಮತ್ತು ಕ್ಷತ್ರಿಯ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ ಶೇಖಾವತ

ಜೈಪುರ (ರಾಜಸ್ಥಾನ) – ಪೊಲೀಸರು ಕ್ಷತ್ರಿಯ ಕರಣಿ ಸೇನೆಯು ಕುಖ್ಯಾತ ಗೂಂಡಾ ಲಾರೆನ್ಸ್ ಬಿಷ್ಣೋಯಿಯನ್ನು ಎನ್‌ಕೌಂಟರ್ ಮಾಡಿದರೆ 1 ಕೋಟಿ 11 ಲಕ್ಷದ 11 ಸಾವಿರದ 111 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಕ್ಷತ್ರಿಯ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ ಶೇಖಾವತ ಅವರು ಒಂದು ವಿಡಿಯೋ ಪ್ರಸಾರ ಮಾಡಿ ಘೋಷಣೆ ಮಾಡಿದ್ದಾರೆ. ಲಾರೆನ್ಸ ಬಿಷ್ಣೋಯಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸದ್ಯ ಗುಜರಾತಿನ ಸಾಬರಮತಿ ಜೈಲಿನಲ್ಲಿದ್ದಾನೆ.

1. ರಾಜ ಶೆಖಾವತ ಮಾತನಾಡಿ, ಲಾರೆನ್ಸ್ ಬಿಷ್ಣೋಯಿಯನ್ನು ಯಾವುದೇ ಪೊಲೀಸರು ಎನ್‌ಕೌಂಟರ್ ಮಾಡಿದರೆ ಅವರಿಗೆ ಬಹುಮಾನ ನೀಡಲಾಗುವುದು. ಕೇಂದ್ರ ಮತ್ತು ಗುಜರಾತ ಸರಕಾರ ಬಿಷ್ಣೋಯಿಗೆ ಭದ್ರತೆ ಒದಗಿಸುವುದು ಅಯೋಗ್ಯವಾಗಿದೆಯೆಂದೂ ಅವರು ಟೀಕಿಸಿದರು.

2. ರಾಜ ಶೇಖಾವತ ಇವರು ‘ಬಿಷ್ಣೋಯಿಯನ್ನು ಏಕೆ ಹತ್ಯೆ ಮಾಡಬೇಕು?’ ಎನ್ನುವುದಕ್ಕೆ ಕಾರಣ ನೀಡುತ್ತಾ `ಕರಣಿ ಸೇನೆಯ ಮುಖ್ಯಸ್ಥ ಸುಖದೇವ ಸಿಂಗ ಗೊಗಾಮೆಡಿಯವರ ಹತ್ಯೆಯ ಪ್ರಕರಣದಲ್ಲಿ ಲಾರೆನ್ಸ ಬಿಷ್ಣೋಯಿ ಮೇಲೆ ಕರಣಿ ಸೇನೆಗೆ ಕೋಪವಿದೆ’ ಎಂದು ಹೇಳಿದರು.

3. ಡಿಸೆಂಬರ್ 5, 2023 ರಂದು ಜೈಪುರದಲ್ಲಿ ಗೊಗಾಮೆಡಿಯವರ ಹತ್ಯೆಯಾಗಿತ್ತು. ಹತ್ಯೆಯ ಕೆಲವು ಗಂಟೆಗಳ ನಂತರ, ಲಾರೆನ್ಸ್ ಬಿಷ್ಣೋಯಿ ಕೊಲೆಯ ಹೊಣೆಯನ್ನು ಒಪ್ಪಿಕೊಂಡಿದ್ದನು.

ಸಂಪಾದಕೀಯ ನಿಲುವು

  • ಕಾನೂನು ಕೈಗೆತ್ತಿಕೊಂಡು ಈ ರೀತಿ ಕರೆ ನೀಡುವುದು ತಪ್ಪಾಗಿದ್ದು, ಪೊಲೀಸರು ಶೇಖಾವತ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
  • ಒಂದು ವೇಳೆ ಗೊಗಾಮೆಡಿಯವರ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯಿ ಕೈವಾಡವಿದ್ದರೆ, ಕಾನೂನುರೀತ್ಯಾ ಕ್ರಮ ಜರುಗಿಸಿ ಆದಷ್ಟು ಶೀಘ್ರವಾಗಿ ಅವನಿಗೆ ಶಿಕ್ಷೆ ನೀಡಬೇಕು !