ನವ ದೆಹಲಿ – ದೀಪಾವಳಿಯ ಮುನ್ನ ದೆಹಲಿಯ ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ದೆಹಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು(ಡಿಪಿಸಿಸಿ) ಜನೇವರಿ 1, 2025 ವರೆಗೆ ಪಟಾಕಿಗಳ ಮೇಲೆ ನಿಷೇಧ ಹೇರಿದೆ. ಸರಕಾರದ ಆದೇಶಾನುಸಾರ ಪಟಾಕಿಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ, ಪಟಾಕಿಗಳ ಆನ್ ಲೈನ ವಿತರಣೆಯನ್ನೂ ನಿಷೇಧಿಸಿದೆ.
1. ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ತಮ್ಮ ವರದಿಯನ್ನು ಪ್ರತಿದಿನ `ಡಿಪಿಸಿಸಿ’ಗೆ ಸಲ್ಲಿಸುವರು.
2. ದೆಹಲಿ ಭಾಜಪವು ಪಟಾಕಿಗಳ ಮೇಲಿನ ನಿಷೇಧದ ಬಗ್ಗೆ ಪ್ರಶ್ನೆಚಿಹ್ನೆ ಎತ್ತಿದೆ. ಆಮ್ ಆದ್ಮಿ ಪಕ್ಷದ ಸರಕಾರವು ಯಾವುದೇ ಶಾಸ್ತ್ರೀಯ ಪುರಾವೆಗಳನ್ನು ಹಾಜರುಪಡಿಸದೇ ಪಟಾಕಿಗಳನ್ನು ನಿಷೇಧಿಸಿದೆಯೆಂದು ಭಾಜಪ ಆರೋಪಿಸಿದೆ.
3. ದೀಪಾವಳಿಯ ರಾತ್ರಿ ಸಿಡಿಸುವ ಪಟಾಕಿ ಮಾಲಿನ್ಯದ ಕಾರಣವಾಗಿದೆಯೆಂದು ಸಾಬೀತುಪಡಿಸುವ ಯಾವುದೇ ವೈಜ್ಞಾನಿಕ ವರದಿಯನ್ನು ದೆಹಲಿ ಸರಕಾರ ಇನ್ನೂ ಹಾಜರುಪಡಿಸಿಲ್ಲ ಎಂದೂ ಭಾಜಪ ಹೇಳಿದೆ.
ಸಂಪಾದಕೀಯ ನಿಲುವುಹಿಂದೂ ಹಬ್ಬಗಳ ಸಮಯದಲ್ಲಿಯೇ ಪರಿಸರ ಮಾಲಿನ್ಯ ನೆನಪಾಗುವ ಹಿಂದೂದ್ರೋಹಿ `ಆಪ್‘ ಸರಕಾರ ! |