ದುಬೈ-ಗೋವಾ-ಗುಜರಾತ್ ಮಾರ್ಗವಾಗಿ, ದೆಹಲಿ ಮತ್ತು ಉತ್ತರ ಪ್ರದೇಶ ಈ ಮಾರ್ಗದಿಂದ ಮಾದಕ ಪದಾರ್ಥಗಳ ಕಳ್ಳಸಾಗಣೆ
ಗುಜರಾತ್ – ಅಂಕಲೇಶ್ವರದ ಒಂದು ಔಷಧ ಸಂಸ್ಥೆಯ ಮೇಲೆ ದಾಳಿ ನಡೆಸಿ 518 ಕೆಜಿ ‘ಕೊಕೇನ್’ ಅನ್ನು ವಶಪಡಿಸಿಕೊಂಡಿದೆ. ಈ ಮಾದಕ ಪದಾರ್ಥದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ದೆಹಲಿ ಪೊಲೀಸರ ವಿಶೇಷ ಪಡೆ ಮತ್ತು ಗುಜರಾತ ಪೋಲೀಸರು ಜಂಟಿಯಾಗಿ ಅಕ್ಟೋಬರ್ 13 ರಂದು ಕಾರ್ಯಾಚರಣೆ ನಡೆಸಿದ್ದಾರೆ.
1. ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆಯ ಪ್ರಕರಣದಲ್ಲಿ ಅಂಕಲೇಶ್ವರ ಔಷಧ ಸಂಸ್ಥೆಯ ಪಾತ್ರವನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಥೆಯ ಮಾಲೀಕರ ವಿಚಾರಣೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದಿರುವ ‘ಕೊಕೇನ್’ ಗೋವಾಗೆ ತಂದು ಅದರ ಶುದ್ಧೀಕರಣಕ್ಕಾಗಿ ಗುಜರಾತ್‌ಗೆ ತಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದರು. ಈ ಔಷಧಿಯ ಮೇಲೆ ಪ್ರಕ್ರಿಯೆ ನಡೆದ ಬಳಿಕ ಅದು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅದನ್ನು ಮಾರಾಟ ಮಾಡಲಾಗುತ್ತಿತ್ತು.
2. ದೆಹಲಿ ಪೊಲೀಸರು ಮಾದಕ ಪದಾರ್ಥದ ಪ್ರಕರಣದಲ್ಲಿ ಕಳೆದ 15 ದಿನಗಳಲ್ಲಿ ಕೈಗೊಂಡ ಮೂರನೇ ಕಾರ್ಯಾಚರಣೆ ಇದಾಗಿದೆ. ಇಲ್ಲಿಯವರೆಗೆ ಒಟ್ಟು 1 ಸಾವಿರ ಹಾಗೂ 288 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಮೊದಲ ಕಾರ್ಯಾಚರಣೆ ಅಕ್ಟೋಬರ್ 1 ರಂದು ದೆಹಲಿಯ ಮಹಿಪಾಲಪುರದಲ್ಲಿ ನಡೆದಿತ್ತು. ಅಲ್ಲಿಂದ 562 ಕೆಜಿ ಕೊಕೇನ ವಶಕ್ಕೆ ಪಡೆಯಲಾಗಿತ್ತು ಮತ್ತು ಅಕ್ಟೋಬರ 10 ರಂದು ದೆಹಲಿಯ ರಮೇಶನಗರದಿಂದ 208 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ ಅಧಿಕಾರಿಗಳು, ಆರೋಪಿಗಳು ದುಬೈನಿಂದ ಹಳೆಯ ಸರಕು ಸಾಗಣೆ ಹಡಗುಗಳ ಮೂಲಕ ಗೋವಾಕ್ಕೆ ಕೊಕೇನ ತಂದಿದ್ದರು ಎಂದು ದೆಹಲಿಯಲ್ಲಿ ನಡೆದ ಕಾರ್ಯಾಚರಣೆಯ ಪ್ರಾಥಮಿಕ ತನಿಖೆಯಿಂದ ಬಯಲಾಗಿತ್ತು.
3. ದೆಹಲಿ ಪೊಲೀಸ ಅಧಿಕಾರಿ ನೀಡಿರುವ ಮಾಹಿತಿಯನುಸಾರ ಕಳೆದ 2 ವಾರಗಳಲ್ಲಿ ನಡೆಸಿರುವ ಕಾರ್ಯಾಚರಣೆಯಲ್ಲಿ 7 ಜನರನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆಯನ್ನು ನೋಡಿದರೆ ಭಾರತದ ಭವಿಷ್ಯ ಅಪಾಯದಲ್ಲಿದೆಯೆಂದು ಗಮನಕ್ಕೆ ಬರುತ್ತದೆ ! |