ಭಾಗ್ಯನಗರ (ತೆಲಂಗಾಣ) – ಇಲ್ಲಿಯ ನಾಮಪಲ್ಲಿ ಪ್ರದರ್ಶನ ಮೈದಾನದಲ್ಲಿ ಶ್ರೀ ದುರ್ಗಾ ಮಾತೆಯ ಮೂರ್ತಿಯನ್ನು ಪರಿಚಿತರಿಂದ ಧ್ವಂಸಗೊಳಿಸಲಾಗಿದೆ. ಘಟನೆಯ ಮಾಹಿತಿ ದೊರೆಯುತ್ತಲೇ ಬೇಗಮ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ವಿಚಾರಣೆ ಆರಂಭಿಸಿದ್ದಾರೆ. ಸ್ಥಳೀಯ ಹಿಂದೂಗಳಲ್ಲಿ ಈ ಘಟನೆಯ ಕುರಿತು ಅಸಮಾಧಾನದ ವಾತಾವರಣವಿದೆ.
The idol of Goddess Durga at a #DurgaPuja pandal vandalized by unknown individuals
📍Nampally grounds, Bhagyanagar (Hyderabad, Telangana)
It is well-known who vandalizes Hindu deities’ idols. Therefore, there is no alternative but to declare India a Hindu nation to instill… pic.twitter.com/PJqfvmYVe7
— Sanatan Prabhat (@SanatanPrabhat) October 11, 2024
(ಮೇಲೆ ಪ್ರಕಟಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ನಾಮಪಲ್ಲಿ ಎಕ್ಸಿಬಿಷನ್ ಸೊಸೈಟಿ ಮತ್ತು ಸಿಬ್ಬಂದಿ ಇವರಿಂದ ಪ್ರತಿ ವರ್ಷ ನವರಾತ್ರಿಯಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುತ್ತದೆ. ದೇವಿಯ ದರ್ಶನಕ್ಕಾಗಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅಕ್ಟೋಬರ್ ೧೦ ರಂದು ರಾತ್ರಿ ಅಲ್ಲಿ ದಾಂಡಿಯಾ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ದಾಂಡಿಯಾದ ಕಾರ್ಯಕ್ರಮ ಮುಗಿದ ನಂತರ ಕೆಲವು ಸಮಯದಲ್ಲಿ ಪ್ರದರ್ಶನದ ಮೈದಾನದಲ್ಲಿ ಈ ಘಟನೆ ನಡೆದಿದೆ. ಪೂಜೆಯ ಮಂಟಪದಲ್ಲಿ ನುಗ್ಗುವ ಮೊದಲೇ ಕಿಡಿಗೇಡಿಗಳು ವಿದ್ಯುತ್ ಕಡಿತಗೊಳಿಸಿ ಅಲ್ಲಿ ಹಾಕಿರುವ ಸಿಸಿಟಿವಿ ಕ್ಯಾಮೆರಾ ಕೂಡ ಧ್ವಂಸ ಮಾಡಿದ್ದಾರೆ. ಆದ್ದರಿಂದ ಇಲ್ಲಿ ಈ ಘಟನೆಯ ಯಾವುದೇ ಸಿಸಿಟಿವಿ ಚಿತ್ರಣ ದೊರೆತಿಲ್ಲ.
ಸಂಪಾದಕೀಯ ನಿಲುವು
|