51 ಶಕ್ತಿಪೀಠಗಳಲ್ಲಿ ಒಂದಾಗಿರುವ ಬಾಂಗ್ಲಾದೇಶದಲ್ಲಿರುವ ದೇವಿ ಕಾಳಿಮಾತೆಯ ಕಿರೀಟ ನಾಪತ್ತೆ

ಪ್ರಧಾನಿ ನರೇಂದ್ರ ಮೋದಿಯವರು ಕಿರೀಟ ಅರ್ಪಿಸಿದ್ದರು !

ಢಾಕಾ (ಬಾಂಗ್ಲಾದೇಶ) – ಸಾತಖೀರಾ ಜಿಲ್ಲೆಯಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಿಂದ ದೇವಿ ಕಾಳಿಮಾತೆಯ ಕಿರೀಟವನ್ನು ಕಳವು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2021 ರಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಾಗ ಈ ಕಿರೀಟವನ್ನು ಅರ್ಪಿಸಿದ್ದರು. ಈ ಕಿರೀಟವನ್ನು ಬೆಳ್ಳಿ ಮತ್ತು ಚಿನ್ನದಿಂದ ಸಿದ್ಧಪಡಿಸಲಾಗಿತ್ತು. ಈ ದೇವಸ್ಥಾನದ ಅರ್ಚಕರು ಗುರುವಾರ ಬೆಳಗ್ಗೆ ಕಾಳಿಮಾತೆಯ ಪೂಜೆ ಮುಗಿದ ಬಳಿಕ ತೆರಳಿದ್ದರು. ತದನಂತರ ಮಧ್ಯಾಹ್ನ ಕಿರೀಟ ಕಳ್ಳತನವಾಗಿದೆ. ಪೊಲೀಸರು ಕಳ್ಳತನದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ದೇವಸ್ಥಾನದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.

1. ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಕುಟುಂಬದ ಸದಸ್ಯರಾದ ಶ್ರೀ. ಜ್ಯೋತಿ ಚಟ್ಟೋಪಾಧ್ಯಾಯರು ಮಾತನಾಡಿ, ಪೌರಾಣಿಕ ಕಥೆಯಲ್ಲಿ ಜೆಶೋರೇಶ್ವರಿ ದೇವಸ್ಥಾನ ಭಾರತ ಮತ್ತು ಪಕ್ಕದ ದೇಶದಲ್ಲಿ ಹರಡಿರುವ 51 ಶಕ್ತಿಪೀಠಗಳಲ್ಲಿ ಒಂದೆಂದು ಪೂಜನೀಯವಾಗಿದೆ. ಇಲ್ಲಿ ದೇವಿ ಸತಿಯ ಅಂಗಾಲು ಬಿದ್ದಿತ್ತು ಮತ್ತು ಅದು ದೇವಿ ಜೆಶೋರೇಶ್ವರಿಯ ರೂಪದಲ್ಲಿ ಇಲ್ಲಿ ವಾಸಿಸುತ್ತಿದ್ದಾಳೆ.

2. ಜೆಶೋರೇಶ್ವರಿ ದೇವಸ್ಥಾನವು ಕಾಳಿಮಾತೆ ದೇವಿಗೆ ಅರ್ಪಿತವಾಗಿದೆ. ಈ ದೇವಸ್ಥಾನವನ್ನು 12 ನೇ ಶತಮಾನದಲ್ಲಿ ಅನಾರಿ ಹೆಸರಿನ ಬ್ರಾಹ್ಮಣನಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಅವರು ಜೆಶೊರೇಶ್ವರಿ ದೇವಿಯ 100 ಬಾಗಿಲುಗಳಿರುವ ದೇವಸ್ಥಾನವನ್ನು ನಿರ್ಮಿಸಿದರು. ಈ ದೇವಸ್ಥಾನವನ್ನು ನಂತರ 13 ನೇ ಶತಕದಲ್ಲಿ ಲಕ್ಷ್ಮಣ ಸೇನ್ ಪುನರುಜ್ಜೀವನಗೊಳಿಸಿದನು. 16 ನೇ ಶತಕದಲ್ಲಿ ರಾಜ ಪ್ರತಾಪಾದಿತ್ಯನು ಈ ಪ್ರಸಿದ್ಧ ದೇವಸ್ಥಾನವನ್ನು ಪುನರ್ನಿರ್ಮಿಸಿದನು.

ಸಂಪಾದಕೀಯ ನಿಲುವು

ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಸ್ಥಾನಗಳು ಉಳಿಯಲಿದೆಯೇ? ಎಂಬುದೇ ಪ್ರಶ್ನೆಯಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ರಕ್ಷಿಸಲು ನಿಷ್ಕ್ರಿಯವಾಗಿರುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !