ಹಮಾಸ್ ಅನ್ನು ಬೆಂಬಲಿಸಿದ ಪಾಕಿಸ್ತಾನಿ ಇಮಾಮ್ ನನ್ನು ದೇಶದಿಂದ ಹೊರಹಾಕುವಂತೆ ಇಟಲಿ ಸರಕಾರದ ಆದೇಶ

ರೋಮ್ (ಇಟಲಿ) – ಇಟಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ಜುಲ್ಫಿಕಾರ್ ಖಾನ್ ಹೆಸರಿನ 54 ವರ್ಷದ ಇಮಾಮ್‌ನನ್ನು ಗಡಿಪಾರು ಮಾಡಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆದೇಶಿಸಿದ್ದಾರೆ. ಭಯೋತ್ಪಾದಕ ಸಂಘಟನೆ ಹಮಾಸ್‌ನ ಕಟ್ಟಾ ಬೆಂಬಲಿಗನಾಗಿದ್ದರಿಂದ ಅವನನ್ನು ಗಡೀಪಾರು ಮಾಡುವ ಆದೇಶ ನೀಡಿದರು. ಹಾಗೆಯೇ ಇಟಲಿಯಲ್ಲಿನ ಅವನ ನಿವಾಸದ ಪರವಾನಗಿಯನ್ನು ಸಹ ರದ್ದುಗೊಳಿಸಿದರು.

ಜುಲ್ಫಿಕಾರ್ ಹುಟ್ಟಿದ್ದು ಪಾಕಿಸ್ತಾನದಲ್ಲಿ; ಆದರೆ ಅವನು 1995 ರಿಂದ ಇಟಲಿಯ ಬೊಲೊಗ್ನಾ ನಗರದಲ್ಲಿ ವಾಸಿಸುತ್ತಿದ್ದನು. ಅವನು ಗಾಝಾ ಯುದ್ಧಕ್ಕೆ ಸಂಬಂಧಿಸಿದಂತೆ ಹಲವಾರು ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ಅವನು ಇಸ್ರೇಲ್ ಮತ್ತು ಅಮೇರಿಕಾ ದೇಶಗಳನ್ನು ‘ಕೊಲೆಗಾರರು’ ಎಂದು ಕರೆದಿದ್ದನು.

ಅವನ ಭಾಷಣಗಳು ಪಾಶ್ಚಿಮಾತ್ಯ ವಿರೋಧಿ, ಸಲಿಂಗಕಾಮಿ ವಿರೋಧಿ ಮತ್ತು ಮಹಿಳಾ ವಿರೋಧಿಗಳಾಗಿದ್ದವು. ಅಲ್ಲದೆ ಅವನು ಇಟಲಿಯಲ್ಲಿದ್ದ ಮುಸ್ಲಿಮರನ್ನು ಇಟಲಿ ಸರಕಾರದ ನೀತಿಗಳನ್ನು ವಿರೋಧಿಸುವಂತೆ ಪ್ರಚೋದಿಸುತ್ತಿದ್ದನು.

ಸಂಪಾದಕೀಯ ನಿಲುವು

ಭಾರತವು ಇಂತಹ ನಿರ್ಧಾರಗಳನ್ನು ಯಾವಾಗ ತೆಗೆದುಕೊಳ್ಳುತ್ತದೆ ? ಭಾರತದಲ್ಲಿ ಬಹಿರಂಗವಾಗಿ ಜಿಹಾದಿ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯರು ಸರಕಾರದ ಮೇಲೆ ಒತ್ತಡ ಹೇರಬೇಕು !